ಪಠ್ಯ ಪುಸ್ತಕಗಳಲ್ಲಿ ಲಿಂಗ ತಾರತಮ್ಯ ಬದಲಿಸಲು ಡಿ. ರೂಪ ಒತ್ತಾಯ

Share

ಬೆಂಗಳೂರು,ಮಾ,24:ಶಾಲಾ ಪಠ್ಯ ಪುಸ್ತಕದಲ್ಲಿ ಈಗಲೂ ಲಿಂಗ ತಾರತಮ್ಯ ಮಾಡಲಾಗುತ್ತಿದೆ. ಇದನ್ನು ಮೊದಲು ಬದಲಿಸುವ ಕೆಲಸ ಮಾಡಬೇಕು ಎಂದು ಐಪಿಎಸ್ ಅಧಿಕಾರಿ, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ಕರೆ ನೀಡಿದರು.
ಕರುನಾಡ ವಿಜಯ ಸೇನೆಯು ಭಾನುವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಲವು ಸಾಧಕ ಮಹಿಳೆಯರನ್ನು ಸನ್ಮಾನಿಸಿ ಅವರು ಮಾತನಾಡಿದರು.


“ಪಠ್ಯ ಪುಸ್ತಕಗಳಲ್ಲಿ ಕೆಲವು ದಶಕಗಳಿಂದ ರಾಮನು/ಅವನು ಮನೆಗೆ ತರಕಾರಿ ತರುತ್ತಾನೆ. ಸೀತೆ/ಅವಳು ಅಡುಗೆ ಮನೆಯಲ್ಲಿ ಸಹಕರಿಸುತ್ತಾಳೆ ಎಂದೇ ಹೇಳಲಾಗುತ್ತದೆ. ಯಾಕೆ ಅವಳನ್ನು ಅಡುಗೆ ಮನೆಗೆ ಸೀಮಿತಗೊಳಿಸಬೇಕು. ಇಂತಹ ಪಠ್ಯದಿಂದ ಮಕ್ಕಳ ಮನಸ್ಸಲ್ಲಿ ಅವಳು ಅಡುಗೆ ಮಾಡುವವಳು, ಅವನು ತಂದು ಹಾಕುವವನು ಎಂಬ ಲಿಂಗ ತಾರತಮ್ಯವನ್ನು ಬೋಧಿಸಲಾಗುತ್ತಿದೆ. ಅದನ್ನು ಬದಲಿಸಬೇಕು,” ಎಂದರು.

ಉನ್ನತ ಹುದ್ದೆಗಳಲ್ಲಿ ಮಹಿಳೆಯರಿಲ್ಲ:
“ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಇವರೆಲ್ಲಾ ಡಿ ದರ್ಜೆಯ ನೌಕರರಾಗಿ ಕೆಲಸ ಮಾಡುತ್ತಿದ್ದಾರೆಯೇ ಹೊರತು ಉನ್ನತ ಹುದ್ದೆಗಳಲ್ಲಿರುವವರ ಸಂಖ್ಯೆ ತುಂಬಾ ವಿರಳ. ಹೀಗಾಗಿ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವಂತಾಗಬೇಕು. ಕಾಪೆರ್Çರೇಟ್ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರು ನಿಭಾಯಿಸುವ ಕಂಪನಿಗಳು ಕೊರೊನಾದಂತಹ ಸಂಕಷ್ಟದ ಕಾಲದಲ್ಲೂ ಹೆಚ್ಚು ಲಾಭ ಗಳಿಸಿವೆ. ಮಹಿಳೆಯರಲ್ಲಿ ವಿಶೇಷವಾದ ಸಾಮಥ್ರ್ಯ ಇದೆ. ಅದಕ್ಕೆ ತಕ್ಕಂತೆ ಅವಕಾಶಗಳನ್ನು ಕಲ್ಪಿಸಬೇಕು.

ಮಹಿಳೆಯರನ್ನು ಯಾರೂ ಉದ್ಧಾರ ಮಾಡುತ್ತೇವೆ ಬನ್ನಿ ಎಂದು ಆಹ್ವಾನಿಸುವುದಿಲ್ಲ. ನಮಗೆ ನಾವೇ ಮುಂದೆ ಬರಬೇಕು. ಯಾವುದೇ ಕ್ಷೇತ್ರವಿರಲಿ ವಿರೋಧಗಳು ಬರುತ್ತವೆ. ಮುನ್ನುಗ್ಗುವುದೊಂದೇ ನಮ್ಮ ಕೆಲಸ. ಅದೇ ರೀತಿ ವಿಜಯ ಸೇನೆ ಸಂಘಟನೆ ಕೂಡ ಕನ್ನಡದ ಕೆಲಸಗಳು ಮಾಡುವಾಗ ಸಾಕಷ್ಟು ವಿರೋಧಗಳು ಬರುತ್ತವೆ. ಅವರು ಅದಕ್ಕೆ ಕಿವಿಗೊಡದೆ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಶಾಲೆಗಳ ದುರಸ್ತಿ ಮಾಡುವುದು, ಬಣ್ಣ ಬಳಿಸುವುದು, ಶೌಚಾಲಯಗಳನ್ನು ನಿರ್ಮಿಸುವುದು ಹೀಗೆ ನಾನಾ ಸಾಮಾಜಿಕ ಚಟುವಟಿಕೆಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದೆ,” ಎಂದು ರೂಪಾ ಶ್ಲಾಘಿಸಿದರು.
ವಿಜಯಸೇನೆಯಿಂದ 500 ಶಾಲೆಗಳ ದತ್ತು…
ಕರುನಾಡ ವಿಜಯಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಎನ್. ದೀಪಕ್ ಮಾತನಾಡಿ, ವಿಜಯಸೇನೆ 500 ಸರಕಾರಿ ಶಾಲೆಗಳನ್ನು ದತ್ತು ಪಡೆಯಲು ತೀರ್ಮಾನಿಸಲಾಗಿದ್ದು, ಈಗಾಗಲೇ 100 ಸರಕಾರಿ ಶಾಲೆಗಳಿಗೆ ಸುಣ್ಣ, ಬಣ್ಣ ಮಾಡಲಾಗಿದೆ. ಕೆಲವು ಶಾಲೆಗಳಿಗೆ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ಮೈಸೂರು ಮೇಯರ್ ಸುನಂದಾ ಪಾಲನೇತ್ರ ಅವರು ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಇದೇ ವೇಳೆ ಸಾಧನೆ ಮಾಡಿದ ನಾನಾ ಕ್ಷೇತ್ರಗಳ ಮಹಿಳೆಯರಿಗೆ ಬೆಳವಡಿ ಮಲ್ಲಮ್ಮ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜತೆಗೆ 400ಕ್ಕೂ ಹೆಚ್ಚು ಶಿಕ್ಷಕಿಯರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಟಿ ರೂಪಾ ಅಯ್ಯರ್, ವಿಜಯಸೇನೆ ಸಂಸ್ಥಾಪಕ ಅಧ್ಯಕ್ಷ ಎಚ್.ಎನ್. ದೀಪಕ್, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ. ಮೋಹನ್‍ಕುಮಾರ್, ಅಕ್ಕನ ಮನೆ ಪ್ರತಿಷ್ಠಾನದ ಅಧ್ಯಕ್ಷೆ ಹೇಮಲತಾ, ವಿಜಯಸೇನೆ ಮಹಿಳಾ ಘಟಕದ ಬೆಂಗಳೂರು ನಗರ ಜಿಲ್ಲೆಯ ಅಧ್ಯಕ್ಷೆ ಕೆ. ಗಂಗರಾಜಮ್ಮ ಮತ್ತಿತರರು ಪಾಲ್ಗೊಂಡಿದ್ದರು.
ಇದೇ ವೇಳೆ ವಿಜಯ ಸೇನೆ ಸಂಸ್ಥೆಯ ನಾನಾ ಮಹಿಳಾ ಪದಾಧಿಕಾರಿಗಳ ನೃತ್ಯ ಪ್ರದರ್ಶನ ಹಾಗೂ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳು ಸಭೆಯಲ್ಲಿ ನೆರೆದಿದ್ದವರನ್ನು ಸಂತಸಗೊಳಿಸಿದವು. ಕೊರೊನಾದ ನಂತರ ಇದೇ ಮೊದಲ ಬಾರಿಗೆ ರವೀಂದ್ರ ಕಲಾಕ್ಷೇತ್ರದ ಸಭಾಂಗಣ ಬಾಲ್ಕನಿ ಸೇರಿದಂತೆ ಒಳಗೂ, ಹೊರಗೂ ಸಾರ್ವಜನಿಕರು ಕಿಕ್ಕಿರಿದು ತುಂಬಿದ್ದರು.

ಕಸಾಪಗೆ ಮಹಿಳಾ ಅಧ್ಯಕ್ಷೆ ಅಗತ್ಯ

ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿದ್ದಾರೆ. ಆದರೆ, ರಾಜ್ಯದ ಮುಖ್ಯಮಂತ್ರಿ ಸ್ಥಾನ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈವರೆಗೆ ಮಹಿಳೆಯರೊಬ್ಬರು ಸಾರಥ್ಯ ವಹಿಸದಿರುವುದು ನಿಜಕ್ಕೂ ಬೇಸರದ ಸಂಗತಿ.

-ಹೇಮಲತಾ, ಅಕ್ಕನ ಮನೆ ಪ್ರತಿಷ್ಠಾನದ ಅಧ್ಯಕ್ಷೆ

Girl in a jacket
error: Content is protected !!