ಬೆಂಗಳೂರು, ಮೇ ೨೫; ಲ್ಯಾಬ್‌ಗಳು ಮೋವಿಡ್ ಮಾದರಿ ಪರೀಕ್ಷೆಗಳನ್ನು ತಡ ಮಾಡಿದರೆ ಅಂತವುಗಲಿಗೆ ದಂಡವಿದಲಾಗುತ್ತಿದ್ದು ಈಗಾಗಲೇ ೪೦ ಲ್ಯಾಬ್‌ಗಳಿಗೆ ದಂಡ ಹಾಕಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್‌ನಾರಾಯಣ ತಿಳಿಸಿದ್ದಾರೆ.
ಈಗಾಗಲೇ ಒಟ್ಟು೨೦.೨೦ ಲಕ್ಷ ರೂ ದಂಡವನ್ನು ವಿಧಿಸಲಾಗಿದ್ದು ೩೧ ಖಾಸಿಗಿ ಲ್ಯಾಬ್,೯ ಸರ್ಕಾರಿ ಲ್ಯಾಬ್‌ಗಳು ಸಏರಿ ೪೦ ಲ್ಯಾಬ್‌ಗಳಿಗೆ ದಂಡ ಹಾಕಲಾಗಿದೆ ಎಂದು
ರಾಜ್ಯದಲ್ಲಿ ಕೋವಿಡ್ ಪರೀಕ್ಷೆಯ ನೋಡೆಲ್ ಅಧಿಕಾರಿಯಾದ ಶಾಲಿನಿ ರಜನೀಶ್ ಸಚಿವರಿಗೆ ಈ ಕುರಿತು ವಿವರಗಳನ್ನು ನೀಡಿದ್ದಾರೆ.
ಕೋವಿಡ್ ಟಾಸ್ಕ್ ಪೋರ್ಸ್ ಅಧ್ಯಕ್ಷರೂ ಆಗಿರುವ ಅಶ್ವಥ ನಾರಾಯಣ, “ಎಲ್ಲಾ ಪ್ರಯೋಗಾಲಯಗಳಿಗೆ ೨೪ ಗಂಟೆಯಲ್ಲಿ ಕೋವಿಡ್ ಮಾದರಿ ಪರೀಕ್ಷೆ ವರದಿ ನೀಡಬೇಕು ಎಂದು ಸೂಚಿಸಲಾಗಿದೆ. ಆದರೆ ಕೆಲವು ಲ್ಯಾಬ್‌ಗಳು ವರದಿ ನೀಡುವುದು ತಡ ಮಾಡುತ್ತಿವೆ” ಎಂದರು.
“ಮೇ ೮ರಿಂದ ಇಂತಹ ಲ್ಯಾಬ್‌ಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದುವರೆಗೂ ೧೦,೧೦೩ ಮಾದರಿಗಳ ವರದಿ ತಡವಾಗಿದೆ. ಇದರಲ್ಲಿ ೩,೦೩೪ ಸರ್ಕಾರಿ ಮತ್ತು ಉಳಿದಿದ್ದು ಖಾಸಗಿ ಲ್ಯಾಬ್‌ಗಳಿಗೆ ಸೇರಿದೆ. ವಿಳಂಬವಾದ ಪ್ರತಿ ಮಾದರಿಗೆ ೨೦೦ ರೂ. ದಂಡ ವಿಧಿಸಲಾಗಿದೆ” ಎಂದು ಸಚಿವರು ತಿಳಿಸಿದರು.
೫ ಲ್ಯಾಬ್‌ಗಳು ಐಸಿಎಂಆರ್ ಪೋರ್ಟಲ್‌ಗೆ ವರದಿ ಅಪ್‌ಲೋಡ್ ಮಾಡದೇ ಅದನ್ನು ರೋಗಿಗಳಿಗೆ ನೀಡಿದೆ. ಇಂತಹ ಲ್ಯಾಬ್‌ಗಳಿಗೆ ದಂಡ ವಿಧಿಸಲಾಗಿದೆ. ಅಲ್‌ಲೋಡ್ ಮಾಡುವುದು ವಿಳಂಬ ಮಾಡಿದ ೧೪ ಲ್ಯಾಬ್‌ಗಳಿಗೆ ಶೋಕಾಸ್ ನೋಟಿಸ್ ಸಹ ನೀಡಲಾಗಿದೆ.
ಕೋವಿಡ್ ಪರೀಕ್ಷೆ ಮಾದರಿ ಕೊಡುವುದು ತಡ ಮಾಡಿದ ಲ್ಯಾಬ್‌ಗಳಿಗೆ ದಂಡ
Share