ಕೊರೊನಾ ವಾರಿಯರ್ಸ್ ದಾದಿಯರ ಜೊತೆ ಸಿಎಂ ಸಂವಾದ

Share

ಬೆಂಗಳೂರು,ಮೇ,೩೧: ಕೊರೊನಾ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ದಾದಿಯರ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂವಾದ ನಡೆಸಿದರು.
ಕೋವಿಡ್-೧೯ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಜಿಲ್ಲೆಗಳ ಸ್ಟಾಫ್ ನರ್ಸ್ ಗಳೊಂದಿಗೆ ಸಂವಾದ ನಡೆಸಿದ ಮುಖ್ಯಮಂತ್ರಿ,ಕೋವಿಡ್-೧೯ ಸಂಕಷ್ಟದ ಪರಿಸ್ಥಿತಿಯಲ್ಲಿ ಅಪಾಯ ಲೆಕ್ಕಿಸದೆ, ಸೋಂಕಿತರ ಶುಶ್ರೂಷೆಯಲ್ಲಿ ನಿರತರಾಗಿರುವ ಎಲ್ಲ ನರ್ಸ್ ಗಳ
ಪರಿಶ್ರಮ, ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಿದರು.
ವೈಯಕ್ತಿಕ ಕಷ್ಟ-ನಷ್ಟಗಳನ್ನು ಬದಿಗೊತ್ತಿ, ಕುಟುಂಬದವರಿಂದ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸುತ್ತಿರುವ ಶುಶ್ರೂಷರ ಕರ್ತವ್ಯ ಪ್ರಜ್ಞೆ ಅನುಕರಣೀಯ ಎಂದರು. ಪ್ರಸ್ತುತ ರಾಜ್ಯದಲ್ಲಿ ೨೧ ಸಾವಿರದ ೫೭೪ ಸ್ಟಾಫ್ ನರ್ಸ್ ಗಳು ಕಾರ್ಯನಿರ್ವಹಿಸುತ್ತಿದ್ದು,
ಅವರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾಸಿಕ ವೇತನ ಜೊತೆಗೆ ಹೆಚ್ಚುವರಿಯಾಗಿ ೮ ಸಾವಿರ ರೂ.ವಿಶೇಷ ಕೋವಿಡ್ ಭತ್ಯೆ ನೀಡಲಾಗುತ್ತಿದೆ ಎಂದರು.
ಸ್ಟಾಫ್ ನರ್ಸ್ ಗಳ ಸುರಕ್ಷತೆಗಾಗಿ ಅಗತ್ಯ ತರಬೇತಿ, ಸ್ವಯಂ ರಕ್ಷಣಾ ಸಾಧನಗಳಾದ ಪಿ.ಪಿ.ಇ ಕಿಟ್, ಗ್ಲೋವ್ ಗಳು, ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಸ್ಯಾನಿಟೈಸರ್ಸ್ ಗಳನ್ನು ಅಗತ್ಯ ಪ್ರಮಾಣದಲ್ಲಿ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

Girl in a jacket
error: Content is protected !!