ಉಚಿತ ದಿನಸಿ ಕಿಟ್ ವಿತರಣೆ.
ಕೋವಿಡ್ ಮಹಾರೋಗದಿಂದ ಜನಜೀವನ ತತ್ತರಿಸಿದೆ. ಅನೇಕರಿಗೆ ಹೊತ್ತಿನ ಊಟಕ್ಕೂ ತೊಂದರೆಯಾಗಿದೆ. ಇದನ್ನು ಮನಗಂಡು, ಶ್ರೀ ಸಿದ್ಧಾರೂಢ ಮಿಷನ್, ಸಹಬಾಳ್ವೆ ಸಂಸ್ಥೆ ಹಾಗೂ ಸೌಖ್ಯ ನ್ಯಾಚುರಲ್ ಫುಡ್ ಪ್ರೈ. ಲಿ. ಈ ಮೂರೂ ಸಂಸ್ಥೆಗಳು ಜೊತೆಯಾಗಿ, ಸಂಕಷ್ಟಕ್ಕೆ ಒಳಗಾದ ಶ್ರಮಿಕರು, ಕೂಲಿ ಕಾರ್ಮಿಕರು, ಬಡವರು ಹಾಗೂ ಆವಶ್ಯಕತೆ ಇರುವವರಿಗೆ, ದಾನಿಗಳ ನೆರವಿನಿಂದ ಹಂತ ಹಂತವಾಗಿ, ಬೆಂಗಳೂರು ಮೈಸೂರು ಹುಬ್ಬಳ್ಳಿ ಮೊದಲಾದ ಕಡೆಗಳಲ್ಲಿ, ಉಚಿತ ದಿನಸಿ ಕಿಟ್ ಗಳನ್ನು ವಿತರಿಸಲು ಮುಂದಾಗಿವೆ.ದಿನಾಂಕ 8.6.2021 ರಂದು ಮಂಗಳವಾರ ಬೆಳಿಗ್ಗೆ 8 ಘಂಟೆಗೆ ಕೆಂಗೇರಿಯಲ್ಲಿ ತರಕಾರಿ ಅಂಗಡಿಯವರಿಗೆ ಕಿಟ್ ಗಳನ್ನು ವಿತರಿಸಲಾಗುವುದು. ಒಂದು ಕಿಟ್ ಗೆ 500 ರೂ ವೆಚ್ಚವಾಗಲಿವೆ. ನೆರವು ನೀಡಬಯಸುವವರು ತಮಗೆ ಅನುಕೂಲವಾದ ಮೊತ್ತವನ್ನು ಪಾವತಿಸಿ ಈ ಯೋಜನೆಯ ಪ್ರಯೋಜಕರಾಗಲು ಕೋರಲಾಗಿದೆ. ಈ ಮೂಲಕ ಸಂಕಟಕ್ಕೀಡಾದವರಿಗೆ ನಾವೂ ನಿಮ್ಮೊಂದಿಗಿದ್ದೇವೆ, ಭಯಪಡಬೇಡಿ ಎಂಬ ಭರವಸೆ ನೀಡೋಣ.
ಹಣ ಸಂದಾಯಕ್ಕೆ ವಿವರ:
Sri Siddharudha Mission. Canara bank, Ramohalli.
SB account number :
06732200006319
IFSC :CNRB 0010673
Google pay:9731004160
ಗೌರವಗಳೊಂದಿಗೆ
ಭಗವತ್ಸೇವೆಯಲ್ಲಿ
ತಮ್ಮ
ಡಾ ಆರೂಢಭಾರತೀ ಸ್ವಾಮೀಜಿ
ಅಧ್ಯಕ್ಷರು ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ. ರಾಮೋಹಳ್ಳಿ.