ಚಳ್ಳಕೆರೆ, ಮಾ,24:ಪರರಿ ಗೋಸ್ಕರ ಬದುಕುವ ವ್ಯಕ್ತಿಗಳು ಅವರು ಸತ್ತಮೇಲೂ ಕೂಡ ಬದುಕಿರುತ್ತಾರೆ ನಮಗೋಸ್ಕರ ಬದುಕುವ ವ್ಯಕ್ತಿಗಳನ್ನು ಸಮಾಜವು ಶಾಶ್ವತವಾಗಿ ಅವರುಗಳ ನೆನಪಿನಿಂದ ದೂರ ಮಾಡುತ್ತದೆ ಎಂದು ತಹಸಿಲ್ದಾರ್ ಎನ್ ರಘುಮೂರ್ತಿಮೂರ್ತಿ ಹೇಳಿದರು ಚಳ್ಳಕೆರೆ ಬೀಡ್ಸ್ ವತಿಯಿಂದ ಹಮ್ಮಿಕೊಂಡಿದ್ದ ಪುನೀತ್ ರಾಜಕುಮಾರ್ ಅವರ ಗೀತ ಗಾಯನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಜೀವಿತಾವಧಿಯಲ್ಲಿ ಅವರು ಮಾಡಿರುವಂತಹ ಸತ್ಕಾರ್ಯಗಳು ಸಮಾಜಕ್ಕೆ ಏನಾದರೂ ತಿಳಿದಿದ್ದಲ್ಲಿ ಅವರಿಗೆ ಗುಡಿಕಟ್ಟಿಸಿ ಅವರನ್ನು ದೇವರ ರೀತಿಯಲ್ಲಿ ಆರಾಧಿಸುತ್ತಿದ್ದರು ಆದರೆ ದುರಾದೃಷ್ಟವಶಾತ್ ಅವರು ದೈವಾಧೀನರಾದ ಬಳಿಕ ಅವರ ಸತ್ಕಾರ್ಯಗಳ ಆದ ಅನಾಥಾಶ್ರಮಗಳ ನಿರ್ವಹಣೆ ಅಂದಮಕ್ಕಳ ಪಾಠಶಾಲೆ ವಯೋವೃದ್ಧರ ಆಶ್ರಮಗಳು ಯುವ ಕಲಾವಿದರ ಪ್ರೋತ್ಸಾಹ ಇವುಗಳು ಅವರು ಕಾಲವಾದ ಬಳಿಕ ನಮ್ಮ ನಿಮ್ಮೆಲ್ಲರಿಗೂ ತಿಳಿದಿದೆ ಎಂದರು.
ಮನುಷ್ಯನಿಗೆ ಹುಟ್ಟು ಬದುಕು ಮರಣ ಇವುಗಳು ಅನಿವಾರ್ಯವಾಗಿದ್ದು ಹುಟ್ಟು ಮತ್ತು ಸಾವು ನಮ್ಮ ಕೈಲಿಲ್ಲ ಆದರೆ ಬದುಕು ನಮ್ಮ ಕೈಲಿದೆ ಪುನೀತ್ ರಾಜಕುಮಾರ್ ಅವರ ರೀತಿ ನಾವುಗಳು ಬದುಕಿ ಜೀವನವನ್ನು ಸಾರ್ಥಕ ಮಾಡಿಕೊಂಡಲ್ಲಿ ಜೀವನಕ್ಕೆ ಒಂದು ಅರ್ಥ ಬರುತ್ತದೆ ಎಂದು ಹೇಳಿದರು .
ಯುವ ಮುಖಂಡರಾದ ಕೆಟಿ ತಿಪ್ಪೇಸ್ವಾಮಿ ಮಾತನಾಡಿ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಬದುಕು ಆದರ್ಶನೀಯ ವಾದದ್ದು ಎಲ್ಲರಿಗೂ ಪ್ರೇರಣಾತ್ಮಕ ವಾದುದು ಎಂದು ಹೇಳಿದರು ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ ಪ್ರಸನ್ನಕುಮಾರ್ ಯುವ ಮುಖಂಡಆನಂದ್ ಸಂಘಟಕ ಬ್ಯಾನರ್ಜಿ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು