ವರದಿ :- ಆಂಜನೇಯ ನಾಯಕನಹಟ್ಟಿ
ನಾಯಕನಹಟ್ಟಿ,ಏ26- :2025-26 ನೇ ಸಾಲಿನ ಸರ್ಕಾರದಿಂದ ಬಿಡುಗಡೆಯಾಗುವ 145:00 ಲಕ್ಷಗಳ ಅನುದಾನದಲ್ಲಿ ವಿವಿಧ ಯೋಜನೆಗಳ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸಿ ಅನುಮೋದಿಸಲಾಯಿತು.
ನಾಯಕನಹಟ್ಟಿ ಪಟ್ಟಣ ಪಂಚಾಯತಿಯ ಸಭಾಂಗಣದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಟಿ ಮಂಜುಳಾ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2025-26 ನೇ ಸಾಲಿನ ಎಸ್,ಎಫ್,ಸಿ, ಮುಕ್ತ ನಿಧಿ ಯೋಜನೆಯಲ್ಲಿ ಬಂಡವಾಳ ಆಸ್ತಿಗಳ ಸೃಜನಗಾಗಿ 6:00 ಲಕ್ಷಗಳು, ಎಸ್, ಸಿ,ಎಫ್, ಸಿ ಯೋಜನೆಗೆ 9:00 ಲಕ್ಷಗಳು ಟಿ ಎಸ್ ಪಿ ಯೋಜನೆಗೆ 4:00 ಲಕ್ಷಗಳು
ಎಸ್ ಎಫ್ ಸಿ ಕುಡಿಯುವ ನೀರು ಯೋಜನೆಗೆ 5 :00 ಲಕ್ಷಗಳು ಮತ್ತು 15ನೇ ಹಣಕಾಸು ಯೋಜನೆಯಲ್ಲಿ 121:00 ಲಕ್ಷಗಳ ಕ್ರಿಯಾ ಯೋಜನೆಯನ್ನು ಅನುಮೋದಿಸಲಾಯಿತು.
ಸಭೆಯಲ್ಲಿ ಬರಿ ಗದ್ದಲ ನಡುವೆಯಲ್ಲಿಯೂ ಕ್ರಿಯಾ ಯೋಜನೆಗೆ ಅನುಮೋದಿಸಿದರು.ಸದಸ್ಯರ ಎನ್ ಮಹಾಂತಣ್ಣ ಮಾತನಾಡಿ ಜಾಗನೂರ ಹಟ್ಟಿ , ಮಾದಯ್ಯನ ಹಟ್ಟಿ, ಚನ್ನಬಸಯ್ಯನಹಟ್ಟಿ, ಬೋಸೆ ದೇವರಹಟ್ಟಿ, ಗ್ರಾಮಗಳಲ್ಲಿ ಮತ್ತು ನಾಯಕನಹಟ್ಟಿ ಯ ಕೆಲವು ವಾರ್ಡಗಳಲ್ಲಿ ಅಸ್ತಿ ಗೆ ಸಂಬಂಧಿಸಿದಂತೆ ದಾಖಲೆಗಳಾದ ಹಕ್ಕು ಪತ್ರ ಅಥವಾ ಅಸೆಸ್ಮೆಂಟ್ ದಾಖಲೆ ಗಳು ಇದ್ದು ಇದಕ್ಕೆ ಸಂಬಂಧಪಟ್ಟಂತೆ ಕಂದಾಯವನ್ನು ಪಾವತಿಸಿಕೊಂಡಿರುತ್ತೀರಿ. ಇಂತಹ ಆಸ್ತಿ ಮಾಲೀಕರಿಗೆ ಈ ಖಾತ ನೀಡಬೇಕು ಆದರೆ ಬಿ ಖಾತ ಯಾಕೆ ಕೊಡುತ್ತೀರಿ ,,,? ಮೂಲ ದಾಖಲೆಗಳಿರುವ ಎಲ್ಲಾ ಆಸ್ತಿಯ ಮಾಲೀಕರಿಗೆ ಕಡ್ಡಾಯವಾಗಿ ಈ ಖಾತ ನೀಡಿ ಎಂದು ಒತ್ತಾಯಿಸಿದರು .
ಉಪಾಧ್ಯಕ್ಷರ ವಾರ್ಡಲ್ಲಿ ಬರುವ ಪಂಪ ಹೌಸಿಗೆ 50 ಲಕ್ಷಗಳ ಅನುದಾನದಲ್ಲಿ ಉದ್ಯಾನವನ ನಿರ್ಮಿಸಿ ದರು ಅದರ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ.
ಎ ಪಿ ಎಂ ಸಿ ಮಾರುಕಟ್ಟೆ ವತಿಯಿಂದ ನಿರ್ಮಿಸಲಾದ ಸೂಪರ್ ಮಾರುಕಟ್ಟೆ ಸುತ್ತಲು ನಿರ್ಮಿಸಿದ ಕಬ್ಬಿಣದ ಸಲಾಕೆಗಳು ( ಆಂಗ್ಲರ ) ಮತ್ತು ಸುಮಾರು 250 ರಿಂದ 300 ಶೀಟ್ ಗಳು, ಕೆಲವು ಬೋರ್ವೆಲ್ಗಳಿಗೆ ಅಳವಡಿಸಿದ ಕುಡಿಯುವ ನೀರಿನ ಮೋಟಾರ್ ಪಂಪುಗಳು ಪೈಪುಗಳು ನಾಪತ್ತೆಯಾಗಿವೆ ಈ ಕೂಡಲೇ ಪತ್ತೆ ಮಾಡಬೇಕು ಎಂದು ಅಧಿಕಾರಿಯ ಮೇಲೆ ಗರಂ ಆದರು.
ಪಂಚಾಯತಿ ಸದಸ್ಯರಾದ ಸೈಯದ್ ಅನ್ವರ್ಥ್ ರವರು ಮಾತನಾಡಿ ಈ ಪಟ್ಟಣ ಪಂಚಾಯತಿಯಲ್ಲಿ ಹೇಳುವವರಿಲ್ಲ ಕೇಳುವವರಿಲ್ಲ ಬರಿ ಲಂಚ ಲಂಚ ಎಂದು ಜನ ಸಾರ್ವಜನಿಕವಾಗಿ ಮಾತನಾಡುವಂತಾಗಿದೆ. ಈ ದಲ್ಲಾಳಿಗಳ ಹಾವಳಿ ಜಾಸ್ತಿಯಾಗಿದೆ ಇದನ್ನು ಕೇಳುವವರು ಯಾರು,,,?
ಕೆಲವು ಸಂದರ್ಭದಲ್ಲಿ ಸದಸ್ಯರುಗಳು ತಿಳಿಯದೆ ಸಹಿ ಮಾಡಿದರೆ ಸದೆಸ್ತತ್ವ ರದ್ದುಗೊಳಿಸುತ್ತಾರೆ ಹಾಗಾಗಿ ಎಲ್ಲಾ ಸದಸ್ಯರು ಎಲ್ಲಾದನ್ನ ಪರಿಶೀಲಿಸಿ ಸಹಿ ಮಾಡಬೇಕಾಗಿದೆ. ಜಾತ್ರೆಯಲ್ಲಿ ನಡೆದ ಖರ್ಚು ವೆಚ್ಚದ ಮಾಹಿತಿ ಕೊಡಿ ಎಂದು ಕೇಳಿದ್ದಕ್ಕೆ. ಪ್ರತಿಕ್ರಿಯಿಸಿದ ಅಧ್ಯಕ್ಷರು ನೆಕ್ಸ್ಟ್ ಮೀಟಿಂಗ್ ಅಲ್ಲಿ ಉತ್ತರಿಸುತ್ತೇವೆ ಎಂದು ಹೇಳಿದರು. ಈ ಪ್ರತಿಕ್ರಿಯೆಗೆ ಬೇಸರಗೊಂಡ ಸದಸ್ಯ ಸೈಯದ್ ಅನ್ವರ್ ಅವರು ಅಧ್ಯಕ್ಷರನ್ನು ಏನು ಕೇಳಿದರೂ ನೆಕ್ಸ್ಟ್ ಮೀಟಿಂಗ್,,,,ನೆಕ್ಸ್ಟ್ ಮೀಟಿಂಗ್,,,, ನೆಕ್ಸ್ಟ್ ಮೀಟಿಂಗ್,,,, ಎಂದು ಹೇಳುವದನ್ನು ಮಾತ್ರ ಕಲಿತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು, ಯಾವುದೇ ವಾರ್ಡ್ಗಳಿಂದ ಸಮಸ್ಯೆಗಳ ಮನವಿ ಬಂದಲ್ಲಿ ಆ ವಾರ್ಡ್ಗಳ ಸದಸ್ಯರ ಗಮನಕ್ಕೆ ತರಬೇಕೆಂದು ಮುಖ್ಯ ಅಧಿಕಾರಿಗಳಿಗೆ ತಿಳಿಸಿದರು.
ಪ್ರತಿಕ್ರಿಯಿಸಿದ ಮುಖ್ಯ ಅಧಿಕಾರಿಗಳು ಮಾತನಾಡಿ
ಇ-ಖಾತಾ ಮತ್ತು ಬಿ- ಖಾತ ಗಳಿಗೆ ಸಂಬಂಧಿಸಿದಂತೆ ಸರ್ಕಾರದ ಸುತ್ತೋಲೆಗಳಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ ಪಿ ತಿಪ್ಪೇಸ್ವಾಮಿ ಸದಸ್ಯರುಗಳಾದ ಪಿ ಓಬಯ್ಯ ದಾಸ, ಎನ್ ಮಹಾಂತಣ್ಣ, ಸುನೀತಮ್ಮ, ಈರಮ್ಮ, ವಿನುತಾ, ಪಾಪಮ್ಮ, ಬೋಸಮ್ಮ, ಜೆ ಆರ್ ರವಿಕುಮಾರ್, ಎನ್ ಟಿ ಮಂಜುನಾಥ್, ಸೈಯದ್ ಅನ್ವರ್, ಅಬಕಾರಿ ತಿಪ್ಪೇಸ್ವಾಮಿ, ಎನ್ ಮಹಾಂತಣ್ಣ, ಗುರು ಶಾಂತಮ್ಮ, ಮುಖ್ಯ ಅಧಿಕಾರಿ ಓ ಶ್ರೀನಿವಾಸ್, ದ್ವಿತೀಯ ದರ್ಜೆ ಸಹಾಯಕ ಟಿ ತಿಪ್ಪೇಸ್ವಾಮಿ, ಸಂತೋಷ್ ಹಾಜರಿದ್ದರು.