ಆಲಮಟ್ಟಿ,ಆ,03 : ಮೇಯಲು ಬಿಟ್ಟ ಎರಡು ಎತ್ತುಗಳು ಗಣಿ ಪುನರ್ವಸತಿ ಕೇಂದ್ರದ ಬಳಿ ಇರುವ ಕೃಷ್ಣಾನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ.
ರೈತ ನಾಗಪ್ಪ,ಯಮನಪ್ಪ ಕೊಳಮಲಿ ಎನ್ನುವವರು ತಮ್ಮ ಎತ್ತುಗಳನ್ನು ಕೃಷ್ಣಾ ನದಿ ತೀರದಲ್ಲಿ ಮೇಯಲು ಬಿಟ್ಟು ತಮ್ಮ ಕೆಲಸದಲ್ಲಿ ತೊಡಗಿದ್ದರು ಈ ವೇಳೆ ಎತ್ತುಗಳು ಕಾಣದೆ ಇದ್ದ ಸಂದರ್ಭದಲ್ಲಿ ಹುಡುಕಾಡಿದಾಗ ನದಿಯ ನೀರಿನಲ್ಲಿ ಮುಳುಗಿರುವುದು ತಿಳಿದುಬಂದಿದೆ.
ಕೂಡಲೆ ತೆಪ್ಪದ ಸಹಾಯದಿಂದ ರಕ್ಷಣೆಗೆ ಧಾವಿಸಿದರೂ ಅಷ್ಟೋತ್ತಿಗಾಗಲೇ ಎರಡೂ ಎತ್ತುಗಳು ಮೃತಪಟ್ಟಿದ್ದವು. ಎರಡು ಲಕ್ಷ ಬೆಲೆಬಾಳುವ ಎತ್ತುಗಳನ್ನು ಕಳೆದುಕೊಂಡ ರೈತನ ಆಕ್ರಂದನ ಮುಗಿಲು ಮುಟ್ಟಿತ್ತು, ಅವುಗಳಿಂದಲೇ ಜೀವನ ನಿರ್ವಹಣೆ ನಡೆಸುತ್ತಿದ್ದ ರೈತನಿಗೆ ಎತ್ತುಗಳಿಲ್ಲದೆ ದಿಕ್ಕು ತೋಚದಂತಾಗಿದೆ.