ಚಿತ್ರದುರ್ಗ, ಆ,15:ಕಾಗಿನೆಲೆ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದ ಮಹಾ ಸ್ವಾಮೀಜಿ ಅವರ ಪೂರ್ವಾಶ್ರಮದ ಪಿತೃಗಳಾದ ಪೂಜ್ಯ ಕಲಮರಹಳ್ಳಿ ಮಹಾದೇವಪ್ಪ ನವರು ಶಿವೈಕ್ಯರಾದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಲಮರಹಳ್ಳಿ ಗ್ರಾಮದಲ್ಲಿ ನೆಲೆಸಿದ್ದ ಮಹಾದೇವಪ್ಪ ಅವರು ಹೃದಯಾಘಾತದಿಂದ ಭಾನುವಾರ ಶಿವೈಕ್ಯರಾಗಿದ್ದು ಪತ್ನಿ ಜಯಮ್ಮ, ಮಕ್ಕಳಾದ ಶ್ರೀಧರ್, ಪ್ರದೀಪಕುಮಾರ್, ರೂಪ ಅವರನ್ನು ಹಾಗೂ ತಂಗಿ, ತಮ್ಮ, ಅಣ್ಣ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಮೃತರ ಅಂತ್ಯ ಸಂಸ್ಕಾರ ಸ್ವಗ್ರಾಮ ಕಲಮರಹಳ್ಳಿಯಲ್ಲಿ ಸೋಮವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶ್ರೀ ಸಿದ್ದರಾಮಾನಂದ ಮಹಾ ಸ್ವಾಮೀಜಿ ಅವರು ಪ್ರಸ್ತುತ ತಿಂಥಿಣಿ ಹಾಗೂ ಬೆಂಗಳೂರು ಹೊಸಕೋಟೆ ಶಾಖಾಮಠದ ಪೀಠಾಧಿಪತಿಗಳಾಗಿದ್ದಾರೆ.
ನಿಧನಕ್ಕೆ ರಾಜ್ಯದ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.