ಕಣ್ಣಿಗಳ ತೊಂದರೆ ನಿವಾರಣೆಗೆ ಮದರ್ ತೆರಿಸಾ ಸಂಸ್ಥೆ ಸದಾ ಮುಂದು

Share

ವರದಿ :ಆಂಜನೇಯ ನಾಯಕನಹಟ್ಟಿ

ನಾಯಕನಹಟ್ಟಿ,ಏ,26- ಮಾನವನ ದೇಹದಲ್ಲಿ ಯಾವುದಾದರೂ ಒಂದು ಅಂಗ ಕಡಿಮೆಯಾದರೂ ಜೀವಿಸಬಹುದು ಆದರೆ ಮನುಷ್ಯನಿಗೆ ಕಣ್ಣುಗಳು ಇಲ್ಲ ಎಂದರೆ ಜೀವಿಸುವುದು ಕಷ್ಟ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಟಿ ಮಂಜುಳಾ ರವರು ಅಭಿಪ್ರಾಯಸಿದರು

ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮದರ್ ತೆರೇಸಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ ) ನಾಯಕನಹಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಸೇನೆ, ಸಂಘಟನೆಗಳ ವತಿಯಿಂದ ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರ ಸಹಯೋಗದೊಂದಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾನವನ ದೇಹದಲ್ಲಿ ಯಾವುದಾದರೂ ಅಂಗ ಕಡಿಮೆಯಾದರೂ ಜೀವಿಸಬಹುದು ಆದರೆ ಕಣ್ಣುಗಳ ಅಂಗ ಇಲ್ಲವಾದರೆ ಜೀವಿಸುವುದು ತುಂಬಾ ಕಷ್ಟಕರವಾದ ಜೀವನ. ಕಣ್ಣುಗಳಿಗೆ ಸಂಬಂಧಿಸಿದಂತೆ ತೊಂದರೆಗಳನ್ನು ನಿವಾರಿಸಲು ಮದರ್ ತೆರೇಸಾ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಹಾಗೂ ಕನ್ನಡ ಸೇನೆ ಸಂಘಟನೆಗಳು ಉತ್ತಮವಾಗಿ ಸಾಮಾಜಿಕ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಅವರ ಉತ್ತಮವಾದ ಕಾರ್ಯಗಳು ಹೀಗೆ ಮುಂದುವರೆಯಲಿ ಎಂದು ಮಾತನಾಡಿದರು.

ಸಾಮಾಜಿಕವಾಗಿ ಅಭಿವೃದ್ಧಿ ಕಾರ್ಯ ಗಳಕಡೆ ಸಂಘ ಸಂಸ್ಥೆಗಳು ಭಾಗವಹಿಸುವುದರಿಂದ ಸಾಮಾಜಿಕ ಪಿಡುಗುಗಳನ್ನು ಅಥವಾ ತೊಂದರೆಗಳನ್ನು ನಿವಾರಿಸಬಹುದು ಅದೇ ರೀತಿ ಮದರ್ ತೆರೇಸಾ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕರ್ನಾಟಕ ರಕ್ಷಣಾ ವೇದಿಕೆ, ಹಾಗೂ ಕನ್ನಡ ಸೇನೆ ಸಂಘಟನೆಗಳಿಗೆ ಇನ್ನು ಹೆಚ್ಚು ಹೆಚ್ಚು ಉತ್ತಮವಾದ ಸಾಮಾಜಿಕ ಕಾರ್ಯಗಳನ್ನು ಮಾಡುವ ಶಕ್ತಿ ಸಾಮರ್ಥ್ಯವನ್ನು ನ್ನು ಹೊಂದಲ್ಲಿ ಎಂದು ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಓ ಶ್ರೀನಿವಾಸ್ ಹಾರೈಸಿದರು.

ಮದರ್ ತೆರೇಸಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಯ ಸ್ಥಾಪಕರಾದ ಶಿವಮೂರ್ತಿ ಅವರು ಮಾತನಾಡಿ ನಮ್ಮ ಸಂಸ್ಥೆ ಮತ್ತು ಸಂಘಟನೆಗಳ ವತಿಯಿಂದ ಐದು ವರ್ಷಗಳಿಂದ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸೆ ಶಿಬಿರಗಳನ್ನು ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸಿಕೊಂಡು ಬಂದಿರುತ್ತೇವೆ ಈ ಐದು ವರ್ಷದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಕಣ್ಣಿನ ಸಮಸ್ಯೆ ಇರುವವರಿಗೆ ಚಿಕಿತ್ಸೆ ಮತ್ತು ತಪಾಸಣೆಯನ್ನು ಕುಡಿಸಲಾಗಿದೆ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ತಾಯಿ ಸಮಿತಿ ಅಧ್ಯಕ್ಷರಾದ ಕೆ ಪಿ ತಿಪ್ಪೇಸ್ವಾಮಿ ಪಂಚಾಯಿತಿ ಸದಸ್ಯರಾದ ಎಂ ಟಿ ಮಂಜುನಾಥ ಕರ್ನಾಟಕ ರಕ್ಷಣಾ ವೇದಿಕೆಯ ಹೋಬಳಿ ಅಧ್ಯಕ್ಷರಾದ ಮುತ್ತಯ್ಯ, ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ, ನಾಯಕನಹಟ್ಟಿ ನಗರ ಘಟಕದ ಅಧ್ಯಕ್ಷರಾದ ತಿಪ್ಪೇಸ್ವಾಮಿ. ಕನ್ನಡ ಸೇನೆ ಹೋಬಳಿ ಅಧ್ಯಕ್ಷರಾದ ಮಂಜುನಾಥ್ ಜೋಗಿಹಟ್ಟಿ. ಮತ್ತಿತರರು ಶಿಬಿರದಲ್ಲಿ ಭಾಗವಹಿಸಿದ್ದರು

Girl in a jacket
error: Content is protected !!