ಎಫ್.ಆರ್.ಎಲ್. ಉಪವಿಭಾಗ-೨ನ್ನು ಸ್ಥಳಾಂತರಗೊಳಿಸುವ ಆದೇಶ ರದ್ದತಿಗೆ ಒತ್ತಾಯ

Share

ಆಲಮಟ್ಟಿ,ಅ,:13: ಇಲ್ಲಿನ ಕೃಷ್ಣಾಮೇಲ್ದಂಡೆ ಯೋಜನೆ ವ್ಯಾಪ್ತಿಯ ಎಫ್.ಆರ್.ಎಲ್. ಉಪವಿಭಾಗ-೨ನ್ನು ಬೀಳಗಿಗೆ ಸ್ಥಳಾಂತರಗೊಳಿಸುವ ಆದೇಶವನ್ನು ರದ್ದುಗೊಳಿಸಿ ಇಲ್ಲಿಯೇ ಮುಂದುವರೆಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಮತ್ತು ಕರ್ನಾಟಕ ರಕ್ಷಣಾವೇದಿಕೆ ಘಟಕದವತಿಯಿಂದ ಬುಧವಾರ ಪ್ರತ್ಯೇಕವಾಗಿ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.
ಬುಧವಾರ ಇಲ್ಲಿನ ಕೆಬಿಜೆನ್ನೆಲ್ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ತಿರುಪತಿ ಬಂಡಿ ಅವರು ಕೃ.ಮೇ.ಯೋಜನೆ ವ್ಯಾಪ್ತಿಯ ಆಲಮಟ್ಟಿ ಲಾಲಬಹದ್ದೂರ ಶಾಸ್ತಿç ಜಲಾಶಯವನ್ನು ೫೧೯.೬೦ಮೀ.ದಿಂದ ೫೨೪.೨೫೬ಮೀ.ಗೆ ಎತ್ತರಿಸುವದರಿಂದ ೧೮೪ಗ್ರಾಮಗಳ ಲಕ್ಷಾಂತರ ಎಕರೆ ಜಮೀನು ಬಾಧಿತಗೊಳ್ಳಲಿದೆ. ಜಮೀನು ಭೂಸ್ವಾಧೀನ ಹಾಗೂ ಸರ್ವೇ ಕಾರ್ಯಕ್ಕಾಗಿ ೨೦೧೨ರಲ್ಲಿ ಎಫ್.ಆರ್.ಎಲ್ ೨ ಉಪವಿಭಾಗಗಳನ್ನು ಸರ್ಕಾರ ಆಲಮಟ್ಟಿಯಲ್ಲಿ ಆರಂಭಿಸಲಾಗಿದೆ ಎಂದರು.
ಈಗಾಗಲೇ ೧೭ಗ್ರಾಮಗಳ ಭೂ ಸ್ವಾಧೀನಪಡಿಸಿಕೊಂಡು ಇನ್ನುಳಿದ ೧೬೭ಗ್ರಾಮಗಳ ಭೂಸ್ವಾಧೀನಪಡಿಸಿಕೊಂಡು ಸಂಬಂಧಿಸಿದ ರೈತರಿಗೆ ಪರಿಹಾರ ಕೊಡಿಸಬೇಕಾಗಿದೆ. ಕೃ.ಮೇ.ಯೋಜನೆಯು ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕಾದರೆ ಈಗಾಗಲೇ ಆಲಮಟ್ಟಿಯಲ್ಲಿರುವ ಎರಡೂ ಉಪವಿಭಾಗಗಳನ್ನು ಇಲ್ಲಿಯೇ ಇರಿಸಿಕೊಳ್ಳಬೇಕು ಎಂದು ಹೇಳಿದರು.
ಎರಡೂ ಉಪವಿಭಾಗಗಳು ಸ್ಥಳೀಯವಾಗಿಯೇ ಇರುವದರಿಂದ ರೈತರಿಗೆ ಸಂಬಂಧಿಸಿದ ಕಾರ್ಯಪಾಲಕ ಅಭಿಯಂತರರ ವಿಭಾಗೀಯ ಕಚೇರಿ, ವೃತ್ತ ಅಧೀಕ್ಷಕ ಅಭಿಯಂತರ ಕಚೇರಿ, ಮುಖ್ಯ ಅಭಿಯಂತರ ಕಚೇರಿ ಮತ್ತು ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಹಾಗೂ ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಗಳು ಇದರಿಂದ ರೈತರಿಗೆ ಸಮಯ ಹಾಗೂ ಹಣ ಉಳಿತಾಯವಾಗಲಿದೆ. ಆದ್ದರಿಂದ ಯಾವುದೋ ಒತ್ತಡಕ್ಕೆ ಮಣಿದು ಕಚೇರಿ ಸ್ಥಳಾಂತರಕ್ಕೆ ಮುಂದಾದರೆ ಉಗ್ರ ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ಪ್ರಧಾನಕಾರ್ಯದರ್ಶಿ ಸೀತಪ್ಪ ಗಣಿ, ಉಪಾಧ್ಯಕ್ಷರುಗಳಾದ ವೆಂಕಟೇಶ ವಡ್ಡರ, ಪೀರಸಾಬ ನದಾಫ, ಚನ್ನಬಸಪ್ಪ ಗೌಡರ, ರಮೇಶ ಕೆಂಗುತ್ತಿ, ಕರವೇ ಅಧ್ಯಕ್ಷ ಪತ್ತೇಸಾಬ ಚಾಂದ, ಶಿವು ಕೊಳ್ಳಾರ, ಯಲಗೂರೇಶ ಮೇಟಿ ಮೊದಲಾದವರಿದ್ದರು.

Girl in a jacket
error: Content is protected !!