ಇನ್ನೂ ಜೀತಪದ್ಧತಿ ಜೀವಂತ;ತಹಶಿಲ್ದಾರ್ ರಘುಮೂರ್ತಿ ಕಳವಳ

Share

ತಚೆಳ್ಳಕೆರೆ,ಫೆ,09;ಭಾರತ ದೇಶ ಇಂದು ಬಲಿಷ್ಠಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದರೂ ಕೂಡ ದೇಶದ ಅಲ್ಲಲ್ಲಿ ಜೀತಪದ್ಧತಿಯ ಪ್ರಕರಣಗಳು ಕಂಡುಬರುತ್ತಿರುವುದು ತುಂಬ ವಿಷಾದದ ಸಂಗತಿಎಂದು ತಹಸೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಜೀತ ಪದ್ಧತಿ ನಿರ್ಮೂಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇದು ಪಾಶ್ಚಾತ್ಯ ರೀತಿಯಜೀತ ಪದ್ಧತಿಯು ಭೂಮಾಲೀಕ ಹಾಗೂ ಬೇಸಾಯಗಾರನ ಸಂಬಂಧವನ್ನು ಕ್ರಮಪಡಿಸುವ ಊಳಿಗಮಾನ್ಯಯುಗದ ಒಂದು ಪದ್ಧತಿ ಇದು ಚೀನ, ಈಜಿಪ್ಟ, ಮಧ್ಯಯುಗದ ಯೂರೋಪ್, ಜಪಾನ್, ರಷ್ಯ ಮುಂತಾದ ದೇಶಗಳಲ್ಲಿ ಪ್ರಚಲಿತವಾಗಿತ್ತು. ಇದು ಒಂದೊಂದು ಪ್ರದೇಶದಲ್ಲಿ ಒಂದೊಂದು ಮಾದರಿಯದಾಗಿದ್ದಿತಾದರೂ ಇದರ ಮುಖ್ಯ ಲಕ್ಷಣಗಳು ಎಲ್ಲೆಡೆಯಲ್ಲಿಯೂ ಏಕರೀತಿಯಾಗಿದ್ದವು ಎಂದರು.

ಪಡೆದ ಸಾಲಕ್ಕೆ ಪ್ರತಿಯಾಗಿಯೋ ಅನ್ಯ ಜೀವನೋಪಾಯವಿಲ್ಲದೆಯೋ ಶ್ರೀಮಂತನ ಮನೆಯ ಆಳಾಗಿ ದುಡಿಯುವ ಪದ್ಧತಿ ಭಾರತದಲ್ಲಿ ಈಗಲೂ ಇದೆ. ಇದು ಪಾಶ್ಚಾತ್ಯ ರೀತಿಯ ಜೀತಪದ್ಧತಿಯಲ್ಲ. ಇದೂ ಜೀತಾಗಾರಿಕೆಯೆನಿಸಿಕೊಂಡಿದೆ, ಮಧ್ಯಯುಗದ ಯೂರೋಪಿನಲ್ಲಿ ಭೂಮಿಯೆಲ್ಲವೂ ಮೇನರ್ ಅಥವಾ ಜಹಗೀರುಗಳೆಂಬ ದೊಡ್ಡ ವಿಭಾಗಗಳಾಗಿ ವಿಂಗಡಿಸಲ್ಪಟ್ಟು ಒಂದೊಂದು ಜಹಗೀರು ಒಬ್ಬೊಬ್ಬ ಪ್ರಭು ಅಥವಾ ಒಡೆಯನಿಗೆ ಸೇರಿತ್ತು. ಇದರ ಪೈಕಿ ಒಂದು ಭಾಗ ಜಮೀನು ಪ್ರಭುವಿನ ಅನುಭೋಗಕ್ಕಾಗಿಯೇ ಸಾಗುವಳಿಯಾಗುತ್ತಿತ್ತು. ಉಳಿದ ಭಾಗವನ್ನು ಹಲವಾರು ಜೀತಗಾರರು ಪ್ರಭುವಿನಿಂದ ಪಡೆದು ಸಾಗುವಳಿ ಮಾಡುತ್ತಿದ್ದರು‌ಎಂದು ಅಭಿಪ್ರಾಯ ಪಟ್ಟರು.

ತಮ್ಮ ಹಿಡುವಳಿಯ ಜೊತೆಗೆ ಪ್ರಭುವಿನ ಭೂಮಿಯನ್ನೂ ಸಾಗುವಳಿ ಮಾಡಬೇಕಾಗಿತ್ತು. ಆದರೆ ಕಾಲ ಬದಲಾದಂತೆಲ್ಲ ಜೀತ ಪದ್ಧತಿ ಪದ್ಧತಿಯು ಸಹ ಕೊನೆಗಾಣುತ್ತದೆ ನಗರದಲ್ಲಾಗಲಿ ಗ್ರಾಮೀಣ ಪ್ರದೇಶದಲ್ಲಾಗಲಿ ಜೀತಪದ್ದತಿ ಕಾಣಿಸಿದ್ದೆಯಾದಲ್ಲಿ ಕ್ರಮ ಕೈಗೊಳ್ಳಾಗುವುದು ಎಂದರು.
ಪೋಲಿಸ್ ಇನ್ಸ್ಪೆಕ್ಟರ್ ಜೆ ಎಸ್ ತಿಪ್ಪೇಸ್ವಾಮಿ ಮಾತನಾಡಿ ಜೀತ ಪದ್ದತಿ ನಿರ್ಮಾಲನೆಗೆ ಬುದ್ದಿವಂತ ಸಾರ್ವಜನಿಕ ಹಾಗೂ ನಾಗರೀಕರು ಸಹ ಇಲಾಖೆ ಜತೆಗೆ ಕ ಜೀತ ಪದ್ದತಿ ನಿರ್ಮೂಲನೆ ಸಹಕಾರ ಮಾಡಬೇಕು ಇತ್ತಿಚಿನ ದಿನಗಳಲ್ಲಿ ಅಂಗಡಿ ಹೋಟೆಲ್ ಹಾಗೂ ಇಟ್ಟಿಗೆ ಭಟ್ಟಿಗಳಲ್ಲಿ ಈ ಜೀತ ಪದ್ದತಿ ಇರಬಹುದು ಇದು ಬೆಳಕಿಗೆ ಬಂದರೆ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು .ಈ ಸಮಯದಲ್ಲಿ ನಗರಸಭೆ ಅಧ್ಯಕ್ಷರಾದ ಸುಮಕ್ಕ ಅಂಜನಪ್ಪ, ನಗರಸಭೆ ಪೌರಯುಕ್ತೆ ಟಿ.ಲೀಲಾವತಿ, ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು

Girl in a jacket
error: Content is protected !!