ಆಲಮಟ್ಟಿ,ಆ,04: ಮಹಾರಾಷ್ಟçದ ಪಶ್ಚಿಮಘಟ್ಟದಲ್ಲಿ ಹಾಗೂ ಕೃಷ್ಣಾ ಅಚ್ಚುಕಟ್ಟುಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವದರಿಂದ ಜಿಲ್ಲೆಯಲ್ಲಿ ಮಳೆಯಾಗದಿದ್ದರೂ ಶಾಸ್ತ್ರೀ ಜಲಾಶಯ ಭರ್ತಿಯಾಗಲು ೦.೭೮ಮೀಟರ್ ಮಾತ್ರ ಬಾಕಿಯಿದ್ದು ಸಂಪೂರ್ಣ ಭರ್ತಿಯಾಗಲು ಕ್ಷಣಗಣನೆ ಆರಂಭವಾಗಿದೆ.
ತೌಕ್ತೆ ಚಂಡಮಾರುತದ ಪರಿಣಾಮವಾಗಿ ವಾಡಿಕೆಗಿಂತಲೂ ಮುಂಚಿತವಾಗಿಯೇ ಮೇ.೨೨ರಿಂದ ಆಲಮಟ್ಟಿ ಲಾಲಬಹದ್ದೂರಶಾಸ್ತಿç ಜಲಾಶಯ ಒಳಹರಿವು ಆರಂಭಗೊಂಡಿದ್ದು, ಜುಲೈ ತಿಂಗಳಿನ ಕೊನೆಯ ವಾರದಲ್ಲಿ ಜಲಾಶಯಕ್ಕೆ ವ್ಯಾಪಕವಾಗಿ ನೀರು ಹರಿದುಬಂದ ಪರಿಣಾಮವಾಗಿ ಜಲಾಶಯದ ಎಲ್ಲ ೨೬ಗೇಟುಗಳು, ಜಲಾಶಯದ ಬಲಬದಿಯಲ್ಲಿರುವ ಕೆಪಿಸಿಎಲ್‌ನ ಆಳಮಟ್ಟಿ ಜಲವಿದ್ಯುತ್ ಉತ್ಪಾದನಾ ಘಟಕ, ಜಲಾಶಯ ವ್ಯಾಪ್ತಿಯ ಕಾಲುವೆ ಹಾಗೂ ವಿವಿಧ ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಲಕ್ಷಾಂತರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.
೫೧೯.೬೦ಮೀ.ಎತ್ತರವಾಗಿ ೧೨೩.೦೮೧ಟಿಎಮ್‌ಸಿ ಅಡಿ ಗರಿಷ್ಠ ಸಂಗ್ರಹಸಾಮರ್ಥ್ಯದ ಜಲಾಶಯದಲ್ಲಿ ಬುಧವಾರ ಸಂಜೆಯ ವೇಳೆ ೫೧೮.೮೨ಮೀ. ಎತ್ತರದಲ್ಲಿ ೧೧೦.೦೬೭ಟಿಎಮ್‌ಸಿಅಡಿ ನೀರು ಸಂಗ್ರಹವಾಗಿ ಜಲಾಶಯಕ್ಕೆ ೧,೯೩,೩೩೩ಲಕ್ಷ ಕ್ಯೂಸೆಕ್ ನೀರು ಹರಿದುಬರುತ್ತಿದೆ.
ಕಳೆದ ವರ್ಷ ಇದೇ ದಿನ ೫೧೭.೫೨ಮೀ.ಎತ್ತರದಲ್ಲಿ ೯೧.೧೩ಟಿಎಮ್‌ಸಿ ಅಡಿ ನೀರು ಸಂಗ್ರಹವಾಗಿ ೧೦,೦೦೦ಕ್ಯೂಸೆಕ್ ನೀರು ಒಳಹರಿವಿತ್ತು. ಇದರಿಂದ ವಾಡಿಕೆಗಿಂತಲೂ ಮುಂಚಿತವಾಗಿ ಜಲಾಶಯ ಭರ್ತಿಯಾಗಲಿದೆ.
ಆಲಮಟ್ಟಿ ಶಾಸ್ತ್ರೀಸಾಗರ ಭರ್ತಿಗೆ ಕ್ಷಣಗಣನೆ
Share