ಆಲಮಟ್ಟಿ,ಜೂ,20:ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಮುಂದುವರೆದಿದೆ.
ಗರಿಷ್ಠ ೫೧೯.೬೦ ಮೀಟರ್ ಎತ್ತರದಲ್ಲಿ ೧೨೩.೦೮೧ ಟಿಎಂಸಿ ಆಲಮಟ್ಟಿ ಜಲಾಶಯದಲ್ಲಿ ಭಾನುವಾರ ಬೆಳಗ್ಗೆ ೫೧೩.೫೬ ಮೀಟರ್ ಎತ್ತರದಲ್ಲಿ ೫೧.೪೦೭ ಟಿಎಂಸಿ ನೀರು ಸಂಗ್ರಹವಾಗಿದ್ದರೆ ಒಳಹರಿವಿನ ಪ್ರಮಾಣ ೧೫೦೭೫೦ ಕ್ಯೂಸೆಕ್ ಇತ್ತು. ಸಂಜೆ ೬ಕ್ಕೆ ೫೧೪.೧೯ ಮೀಟರ್ ಎತ್ತರದಲ್ಲಿ ೫೬.೧೮೮ ಟಿಎಂಸಿ ನೀರು ಸಂಗ್ರಹವಾಗಿತ್ತು ಆಗ ಒಳಹರಿವಿನ ಪ್ರಮಾಣ ೧೩೧೯೪೪ ಕ್ಯೂಸೆಕ್‌ನಷ್ಟಿತ್ತು.
ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ ೬೪ ಎಂಎಂ, ಕೊಯ್ನಾದಲ್ಲಿ ೪೫ ಎಂಎಂ, ನಾವಜಾದಲ್ಲಿ ೬೩ ಎಂಎಂ, ರಾಧಾನಗರಿಯಲ್ಲಿ ೯೯ ಎಂಎಂ, ವಾರಣಾದಲ್ಲಿ ೩೮, ದೂಧಗಂಗಾದಲ್ಲಿ ೯೨, ತರಳಿಯಲ್ಲಿ ೨೪ ಎಂಎಂ, ಉರ್ಮೊದಿಯಲ್ಲಿ ೨೦ಎಂಎಂ ಮಳೆಯಾಗಿದೆ. ಕಳೆದ ಕೆಲ ದಿನಗಳಿಂದ ಭಾರಿ ಪ್ರಮಾಣದಲ್ಲಿ ಸುರಿದ ಮಳೆ ಭಾನುವಾರ ಕೊಂಚ ತಗ್ಗಿದೆ. ಹೀಗಾಗಿ ಸೋಮವಾರ ಆಲಮಟ್ಟಿ ಜಲಾಶಯದ ಒಳಹರಿವಿನ ಪ್ರಮಾಣ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಬಿಜೆನ್ನೆಲ್ ಅಧಿಕಾರಿಗಳು.
೨೦ಎಎಂಟಿ೧
ಆಲಮಟ್ಟಿ ಜಲಾಶಯದ ಹಿನ್ನೀರು ಪ್ರದೇಶ