ಮಂಗಳೂರು, ಆ,೧೨; ಜಿಲ್ಲೆಯಲ್ಲಿ ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ವಿರುದ್ಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳ ಸಭೆ ನಡೆಸುವ ವೇಳೆ ಕೊರೊನಾ ನಿರ್ಲಕ್ಷ್ಯದ ಮಾತು ಹೊರಬಂದಾಗ ಸಿಎಂ ಈ ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಪ್ರಗತಿ ಪರಿಶೀಲನೆ ಸ್ಟೈಲ್ ಸ್ವಲ್ಪ ಬೇರೆ ರೀತಿ. ನಾನು ಇಲ್ಲೇ ಅದಕ್ಕೆಲ್ಲಾ ಪರಿಹಾರ ಕಂಡುಕೊಂಡೇ ಹೋಗ್ತೀನಿ ಅಂತ ಹೇಳಿದರು. ಮಾಜಿ ಸಿಚವ ಯು.ಟಿ.ಖಾದರ್ ಮಾತಿನ ವೇಳೆ ಮಧ್ಯಪ್ರವೇಶಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಎಲ್ಲವನ್ನೂ ನಾವು ನೆಗೆಟಿವ್ ಯೋಚಿಸಿದರೆ ಸಮಸ್ಯೆ ಬಗೆ ಹರಿಯಲ್ಲ. ಲಾಕ್ ಡೌನ್ ಪರಿಸ್ಥಿತಿ ಬರಬಾರದು ಅಂತ ನಾವು ಈ ಕೆಲಸ ಮಾಡುತ್ತಿದ್ದೇವೆ. ಪಾಸಿಟಿವ್ ಬಂದವರ ಜೊತೆ ಲಾಕ್ ಡೌನ್ ಆದರೆ ಸಾಮಾನ್ಯರಿಗೂ ಕಷ್ಟ ಬರುತ್ತೆ. ಹೀಗಾಗಿ ಸೋಂಕು ತಗುಲಿದಾಗಲೇ ಕಟ್ಟುನಿಟ್ಟು ಮಾಡೋದು ಸೂಕ್ತ ಎಂದರು.
ಅಧಿಕಾರಿಗಳಿಗೆ ಖಡಕ್ ಸೂಚನೆ
ಹೋಂ ಐಸೋಲೇಶನ್ ಸಂಬಂಧ ವೈಜ್ಞಾನಿಕ ಕಾರಣ ನೋಡಿ ಮಾಡಿ. ವೈದ್ಯರ ಮೂಲಕ ಆದಷ್ಟು ಸೋಂಕಿತರ ಮನವೊಲಿಸುವ ಕೆಲಸ ಮಾಡಿ. ಗ್ರಾಮೀಣ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಗ್ರೌಂಡ್ ಲೆವೆಲ್ ಪರಿಶೀಲನೆ ನಡೆಸಿ. ಹೋಂ ಐಸೋಲೇಶನ್ ಇದ್ದವರಿಗೆ ದಿನದಲ್ಲಿ ಎರಡು ಬಾರಿ ತಪಾಸಣೆ ನಡೆಸಿ. ಅವರ ಮನೆ, ಕೊಠಡಿ ಹಾಗೂ ಸುತ್ತಲಿನ ವ್ಯವಸ್ಥೆಯತ್ತ ಗಮನ ಹರಿಸಿ. ಇದರ ಜೊತೆಗೆ ಕೋವಿಡ್ ಕೇರ್ ಸೆಂಟರ್ ಕೂಡ ಸುವ್ಯವಸ್ಥಿತವಾಗಿರಲಿ. ಕೋವಿಡ್ ಉತ್ತುಂಗಕ್ಕೆ ಹೋದ ಸಮಯದಲ್ಲಿ ಯಾವ ರೀತಿ ಕೆಲಸ ಮಾಡಿದ್ರೋ ಹಾಗೆ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ ಕೊಟ್ಟರು.
ಮಂಗಳೂರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬಸವರಾಜ ಬೊಮ್ಮಾಯಿ ಸಭೆಯನ್ನು ನಡೆಸಿದರು. ಸಭೆಯಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್
ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಮೊದಲಾದವರು ಹಾಜರಿದ್ದರು.
ಅಧಿಕಾರಿಗಳಿಗೆ ಸಿಎಂ ಖಡಕ್ ಎಚ್ಚರಿಕೆ
Share