ಅಡುಗೆ ಅನಿಲ ಸ್ಪೋಟ; ಸುಟ್ಟು ಕರಕಲಾದ ಸಾಮಗ್ರಿಗಳು

Share

ಆಲಮಟ್ಟಿ,ಸೆ,15: ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕ್ ಬೇನಾಳ NH ಗ್ರಾಮದಲ್ಲಿ ಅಡುಗೆ ಅನಿಲ ಸ್ಪೋಟಗೊಂಡು ಎರಡು ಲಕ್ಷ ರೂ ಮೌಲ್ಯದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

ಇಂದು ಬೆಳಗ್ಗೆ ಬುಡ್ಡಸಾಬ್ ಮಲ್ಲಿಕಸಾಬ್ ಗಂಜಿಹಾಳ್ ಅವರ ಮನೆಯಲ್ಲಿ ಈ ಅವಘಡ ಸಂಭವಿಸಿದ್ದು  ಸ್ಪೋಟಕ್ಕೆ ಮನೆಗೆ ಬೆಂಕಿ ತಗುಲಿದ್ದು ಮನೆ ಹತ್ತಿಉರಿದಿದೆ.

ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಆಗುವ ಮತ್ತಷ್ಟು ಅನಾಹುತವನ್ನು ತಡೆದಿದೆ.15 ಚೀಲ ಜೋಳ ಗೋಧಿ ಮತ್ತಿತರ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ತಸಿಲ್ದಾರ್ ಸತೀಶ್ ಕೂಡಲಗಿ  ಮತ್ತು ನಿಡಗುಂದಿ PSi ಚಂದ್ರಶೇಖರ್ ಹೆರಕಲ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

Girl in a jacket
error: Content is protected !!