ಅಕ್ರಮವಾಗಿ ಸಾಗಿಸುತ್ತಿದ್ದ ೫೮೬ಪಡಿತರ ಅಕ್ಕಿ ಚೀಲ ವಶ

Share

ನಿಡಗುಂದಿ,ಆ,04:ಬಡವರಿಗೆ ಪಡಿತರಕ್ಕಾಗಿ ವಿತರಿಸುವ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಮುದ್ದೇಬಿಹಾಳ ಕ್ರಾಸ್ ಬಳಿ ಜರುಗಿದೆ.
ವಶಪಡಿಸಿಕೊಂಡ ಲಾರಿಯಲ್ಲಿನ ಅಕ್ಕಿಯನ್ನು ಆಲಮಟ್ಟಿಯ ಗೋಡಾವನ್ ನಲ್ಲಿ ಇರಿಸಲಾಗಿದೆ.
ಒಟ್ಟಾರೆ 586 ಅಕ್ಕಿ ಚೀಲಗಳನ್ನು‌ ವಶಪಡಿಸಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಸತೀಶ ಕೂಡಲಗಿ ಹೇಳಿದರು.
ಅಕ್ರಮ ಸಾಗಣೆ;
ರಾಯಚೂರ ಜಿಲ್ಲೆ ಮಾನ್ವಿಯಿಂದ ಗುಜರಾತ್ ಗೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು.

ರೇಷನ್ ಅಕ್ಕಿಯನ್ನು ಹೇಗೆ ಸಂಗ್ರಹಿಸಲಾಗುತ್ತಿತ್ತು? ಎಂಬುದನ್ನು ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ. ಖಚಿತ ಮಾಹಿತಿಯ ಮೇರೆಗೆ ತಹಶೀಲ್ದಾರ್, ನಿಡಗುಂದಿ ಪೊಲೀಸರು, ಆಹಾರ ಪೂರೈಕೆ ಅಧಿಕಾರಿಗಳು ಸೇರಿ
ತಮಿಳುನಾಡಿಗೆ ಸೇರಿದ (ಟಿಎನ್ 39, ಡಿಝೆಡ್ 5055) ಲಾರಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಪಿಎಸ್ ಐ ಚಂದ್ರಶೇಖರ ಹೆರಕಲ್ಲ ತಿಳಿಸಿದರು.
ಚೀಲದ ಮೇಲೆ ಹೆಸರು;
ನೂರಕ್ಕೂ ಹೆಚ್ಚು ಚೀಲದ ಮೇಲೆ ರಾಜಾ ಹುಲಿ, ಇನ್ನೂ ಕೆಲ ಚೀಲದ ಮೇಲೆ ತೆಗರಿ ಡೆಂಕಿಎಂದು ಬರೆಯಲಾಗಿದೆ.
ಇಬ್ಬರ ಬಂಧನ;
ಲಾರಿ ಚಾಲಕ ತಮಿಳುನಾಡು ಮೂಲದ ತ್ಯಾಗರಾಜನ್ ಗುಣಶೇಖರ ಹಾಗೂ ರಾಜನ್ ಬಾಬು ಲೋಕನಾಥನ್ ಎಂಬುವರನ್ನು ಬಂಧಿಸಲಾಗಿದೆ.
ಈ ಕುರಿತು ನಿಡಗುಂದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Girl in a jacket
error: Content is protected !!