ಜಯಮೃತ್ಯುಂಜಯ ಸ್ವಾಮಿಜಿ ಶೀಘ್ರ ಬದಲಾವಣೆಗೆ ಸಮುದಾಯ ಮುಖಂಡರು ನಿರ್ಧಾರ ?

Share

ಜಯಮೃತ್ಯುಂಜಯ ಸ್ವಾಮಿಜಿ ಶೀಘ್ರ ಬದಲಾವಣೆಗೆ ಸಮುದಾಯ ಮುಖಂಡರು ನಿರ್ಧಾರ ?

by-ಕೆಂಧೂಳಿ

ಹುಬ್ಬಳ್ಳಿ, ಏ,12-ಕೂಡಲ ಸಂಗಮದ ಪಂಚಮಸಾಲಿ ಪೀಠದ
ಜಯಮೃತ್ಯಂಜಯ ಸ್ವಾಮಿಜಿ ಮೀಸಲಾತಿ ಎ ಹೋರಾಟದ ನೆಪದಲ್ಲಿ ಒಳ ಒಪ್ಪಂದ ಮಾಡಿಕೊಂಡು ವ್ಯಯಕ್ತಿಕ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರು ಆರೋಪಿಸಿದ್ದಾರೆ.

ಈ ಮೂಲಕ ಪಂಚಮಸಾಲಿ ಪೀಠದಿಂದ ಜಯಮೃತ್ಯಂಜಯ ಸ್ವಾಮೀಜಿಯನ್ನು ಕೆಳಗಿಳಿಸಲು ಸಮುದಾಯ ಚಿಂತನೆ ನಡೆಸಿದೆ.ಕಳೆದ ವಾರವೂ ಇದರ ಸುಳಿವನ್ನು ನೀಡಲಾಗಿತ್ತು ಈಗ ಮತ್ತೊಂದು ಆರೋಪ ಮಾಡುವ ಮೂಲಕ ಅವರನ್ನು ಪೀಠದಿಂದ ಕೆಳಗಿಳಿಸುವುದು ಖಚಿತವಾದಂತೆ ಕಾಣುತ್ತದೆ.

ಲಿಂಗಾಯತ ಪಂಚಮಸಾಲಿ‌ ಟ್ರಸ್ಟ್ ‌ ಪ್ರಮುಖರಾದ ಪ್ರಭಣ್ಣ ಹುಣಸಿಕಟ್ಟೆ, ಕಾಶಪ್ಪನವರ, ಮೋಹನ ಲಿಂಬಿಕಾಯಿ, ನೀಲಕಂಠ ಅಸೂಟಿ ಅವರು ಜಂಟಿ‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು ‘ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಒಬ್ಬ ವ್ಯಕ್ತಿ‌ ಪರವಾಗಿ ರಾಜಕೀಯ ಧ್ವನಿ ಎತ್ತುವ ಮೂಲಕ‌ ಟ್ರಸ್ಟ್ ನ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ’ ಎಂದು ಹೇಳಿದರು.

‘ಸ್ವಾಮೀಜಿ‌ ದಾವಣಗೆರೆ ಇನ್ನಿತರ ಕಡೆಗಳಲ್ಲಿ‌ ವೈಯಕ್ತಿಕ ಆಸ್ತಿ ಮಾಡಿದ್ದು ಇದನ್ನು ಸಮಾಜ‌ ಸಹಿಸಲು‌ ಸಾಧ್ಯ ವಿಲ್ಲ.
ಸ್ವಾಮೀಜಿಯವರು ಒಳ ಒಪ್ಪಂದ ಮಾಡಿಕೊಂಡು ಸಮಾಜಕ್ಕೆ 2ಎ ಮೀಸಲು‌ ಬದಲು‌ 2ಡಿ, 2ಸಿಗೆ ಒಪ್ಪಿಗೆ ನೀಡಿ ಸಮಾಜಕ್ಕೆ ಅನ್ಯಾಯ ಮಾಡಿದರು. ಇದರಲ್ಲಿ‌ ದೊಡ್ಡ ಮಟ್ಟದ ಡೀಲ್ ನಡೆದಿದೆ.ಸ್ವಾಮೀಜಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಯೋಜಿಸಿದ್ದಾರೆ. ಅವರಿಗೆ ಖಾವಿ ಸಾಕಾಗಿ ಖಾದಿ ಬೇಕಾಗಿದೆ ಎಂದೆನಿಸುತ್ತಿದೆ’ ಎಂದು ಆರೋಪ ಮಾಡಿದರು.

‘ಬಸನಗೌಡ ಪಾಟೀಲ ಯತ್ನಾಳ‌ ಟ್ರಸ್ಟ್ ಅಧ್ಯಕ್ಷರ ಬಗ್ಗೆ ಇಲ್ಲಸಲ್ಲದ ಆರೋಪ, ಅವಾಚ್ಯ ಶಬ್ದ ಬಳಕೆ ನಿಲ್ಲಿಸದಿದ್ದರೆ ಕಾನೂನು‌ ಕ್ರಮಕ್ಕೆ ಮುಂದಾಗುತ್ತೇವೆ.ಯತ್ನಾಳ ಬಳಸುವ ಪದಗಳು ಅವರ ಸಂಸ್ಕೃತಿ, ಸಂಸ್ಕಾರ ತೋರಿಸುತ್ತದೆ. ಅದಕ್ಕಾಗಿದೆ ಅವರ ಪಕ್ಷ ಉಚ್ಚಾಟನೆ ಮಾಡಿದೆ’ ಎಂದರು.

‘ಕೂಡಲಸಂಗಮ, ಗದಗ ಇನ್ನಿತರ ಕಡೆ ಟ್ರಸ್ಟ್‌ ನ ಆಸ್ತಿ ಯಾರು ವೈಯಕ್ತಿಕವಾಗಿ ಮಾಡಿಕೊಂಡಿಲ್ಲ ಈ ವಿಚಾರದಲ್ಲಿ‌ ಯತ್ನಾಳ‌ ಸುಳ್ಳು ಆರೋಪ‌ ಮಾಡುತ್ತಿದ್ದಾರೆಂದು‌ ಆರೋಪಿಸಿದ್ದಾರೆ

Girl in a jacket
error: Content is protected !!