ಬೆಂಗಳೂರು, ಜೂ,03-ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿರುವ ಖ್ಯಾತ ನಟ ಕಮಲ ಹಾಸನ್ ತಮ್ನ ಚಿತ್ರ ಥಮ್ಸ್ ಲೈಪ್ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಭದ್ರತೆ ನೀಡಬೇಕು ಎಂದು ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಿಚಸರಣೆ ವೇಳೆ ನ್ಯಾಯಪೀಠ ಕನ್ನಡಿಗರ ಕ್ಷಮೆ ಕೇಳದೆ ದುರ್ವರ್ತನೆ ಸರಿ ಅಲ್ಲ ಎಂದು ತರಾಟೆ ತಗೆದುಕೊಂಡಿದೆ
ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಇದೀಗ ನಟ ಕಮಲ್ ಹಾಸನ್ ಗೆ ಫುಲ್ ಕ್ಲಾಸ್ ತೆಗೆದುಕೊಂಡಿದೆ. ಕಮಲ್ ಹಾಸನ್ ಸಾಮಾನ್ಯ ವ್ಯಕ್ತಿಯಲ್ಲ ಪಬ್ಲಿಕ್ ಫಿಗರ್. ಈ ರೀತಿ ಹೇಳಿಕೆ ನೀಡಬಾರದು. ಆದರೆ ಕನ್ನಡಿಗರ ಕ್ಷಮೆ ಕೇಳದೆ ದುರ್ವರ್ತನೆ ತೋರಿದ್ದೀರಿ . ಕ್ಷಮೆ ಕೇಳಿದ ನಂತರ ಅರ್ಜಿ ಪರಿಗಣನೆ ಮಾಡುತ್ತೇವೆ ಎಂದು ನ್ಯಾಯಪೀಠ ತಿಳಿಸಿದೆ.
ರಾಜ್ಯದಲ್ಲಿ ಕನ್ನಡ ಭಾಷೆ ಪ್ರಮುಖವಾದದ್ದು. ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಈಗ ಸಿನಿಮಾ ಬಿಡುಗಡೆಗೆ ಭದ್ರತೆ ಕೋರುತ್ತಿದ್ದೀರಿ. ಸಿ ರಾಜಗೋಪಾಲಚಾರಿ ಇದೇ ರೀತಿ ಹೇಳಿದ್ದರು. ನಂತರ ಅವರು ಕ್ಷಮೆ ಕೇಳಿದ್ದರು ನಿಮ್ಮ ಹೇಳಿಕೆಯಿಂದ ಶಿವರಾಜ್ ಕುಮಾರ್ ಸಮಸ್ಯೆ ಅನುಭವಿಸುವಂತಾಗಿದೆ. ಇವತ್ತಿನ ಈ ಪರಿಸ್ಥಿತಿಗೆ ಕಮಲ್ ಹಾಸನ್ ಕಾರಣ. ಈ ಪರಿಸ್ಥಿತಿ ನೀವೇ ನಿರ್ಮಾಣ ಮಾಡಿ ಈಗ ಭದ್ರತೆ ಕೋರುತ್ತಿದ್ದಾರಾ. ನಿಮ್ಮ ತಪ್ಪಿಗೆ ಪೊಲೀಸರು ಭದ್ರತೆ ನೀಡಬೇಕೆ..? 300 ಕೋಟಿ ಸಿನಿಮಾ ಅಂತೀರಾ ಕ್ಷಮೆ ಕೇಳಿ. ಬೇರೆಯವರ ಭಾವನೆಗಳಿಗೆ ಧಕ್ಕೆ ತಂದು ಸಿನಿಮಾ ಬಿಡುಗಡೆ ಮಾಡುತ್ತೀರಾ..? ಎಂದು ನಟ ಕಮಲ್ ಹಾಸನ್ ವಿರುದ್ದ ನ್ಯಾಯಪೀಠ ಕೆಂಡ ಕಾರಿದೆ.
ನಾನು ಸಿನಿಮಾ ನೋಡಲು ಬಯಸಿದ್ದೆ ಆದರೆ ಈ ವಿವಾದದಿಂದ ನೋಡಲು ಸಾಧ್ಯವಿಲ್ಲಹಾಗೆಯೇ ನಿಮ್ಮ ಹೇಳಿಕೆ ನಿರಾಕರಿಸಿಲ್ಲ ಒಪ್ಪಿಕೊಂಡಿದ್ದೀರಿ. ನಾನು ಥಗ್ ಲೈಫ್ ಸಿನಿಮಾ ನೋಡಲು ಬಯಸಿದ್ದೆ ಆದರೆ ಈ ವಿವಾದದಿಂದ ನೋಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.