ಗುಲ್ಬರ್ಗಾ ವಿ.ವಿ.ಮೇಲೆ ಲೋಕಾಯುಕ್ತ ದಾಳಿ
by-ಕೆಂಧೂಳಿ
ಕಲ್ಬುರ್ಗಿ, ಫೆ,27- ಈಗ ಲೋಕಾಯುಕ್ತರ ಕಣ್ಣು ವಿಶ್ವವಿದ್ಯಾನಿಲಯದ ಕಡೆಯೂ ಬಿದ್ದಿದೆ ,ಬ್ರಹ್ಮಾಂಡ ಭ್ರಷಟಾಚಾರದ ಮಾತುಗಳುಆರೋಪಗಳು ಮಾತ್ರ ಕೇಳಿ ಬರುತ್ತಿದ್ದವು ಆದರೆ ಲೋಕಾಯುಕ್ತ ಪೊಲೀಸರು ದಾಳಿ ಮಾಡುವ ಮೂಲಕ ಅಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಲಕೆಯಲು ಮುಂದಾಗಿದ್ದಾರೆ.
ಲೋಕಾಯುಕ್ತ ಎಸ್.ಪಿ ಬಿಕೆ. ಉಮೇಶ್ ನೇತೃತ್ವದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿಳಂಬ ಮತ್ತು ನಕಲಿ ಅಂಕಪಟ್ಟಿ ಹಾಗೂ ಲಂಚ ಪಡೆಯುತ್ತಿರುವ ಆರೋಪ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯ ಮೇಲೆ ದಾಳಿ ಮಾಡಿ ಹಾಜರಿ ಪುಸ್ತಕ, ಚಲನವಲನ ರಿಜಿಸ್ಟರ್, ಕ್ಯಾಸಿಸ್ಟರ್ ಮುಂತಾದ ದಾಖಲೆಗಳನ್ನ ಪರಿಶೀಲನೆ ನಡೆಸಿದರು.
ವಿ.ವಿಯಲ್ಲಿ ಸದಾ ಒಂದಲ್ಲಾ ಒಂದು ವಿವಾದಗಳು ಕೂಡ ಇದ್ದವು ..ಇದಕ್ಕೆ ಪೂರಕವಾಗಿ ಲೋಕಾಯುಕ್ತರು ದಾಳಿ ನಡೆಸಿದ್ದು ವಿವಿಗಳಲ್ಲಿ ನಡುಕ ಉಂಟಾಗಿದೆ.