ರಾಮನಗರ,ಮೇ,22: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಿಸಲು ಕೋವಿಡ್ ಚಿಕಿತ್ಸೆಗಾಗಿ ಆಮ್ಲಜನಕ ಸಾಂದ್ರಕ, ಆಕ್ಸಿಮೀಟರ್, ಔಷಧಿ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಖರೀದಿಗಾಗಿ
ಇಲಾಖೆ ವತಿಯಿಂದ 5.5 ಕೋಟಿ ರೂ ನೀಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರಾಗೇಶ್ ಆರ್ ನಿರಾಣಿ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು,ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ವಿಭಾಗ ಮಟ್ಟಕ್ಕೆ 2 ರಂತೆ 10 ಆಕ್ಸಿಜನ್ ಟ್ಸಾಂಕರ್, 10 ಆಕ್ಸಿಜನ್ ಜನರೇಟರ್‌ಗಳನ್ನು ಖರೀದಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಹೊಸದಾಗಿ ಆಕ್ಸಿಜನ್ ಜನರೇಟರ್ ಯುನಿಟ್ ಬದಲು ಮುವಿಂಗ್ ಆಕ್ಸಿಜನ್ ಜನರೇಟರ್ ಖರೀದಿಗೆ ಯೋಜಿಸಲಾಗುತ್ತಿದೆ ಇದರಿಂದ ಜಿಲ್ಲಾ ಮಟ್ಟದಿಂದ ಆಮ್ಲಜನಕ ಜನರೇಟರ್ ನ್ನು ತಾಲ್ಲೂಕುಗಳಿಗೆ ತೆಗೆದುಕೊಂಡಿ ಹೋಗಿ ಅವಶ್ಯಕತೆಗೆ ತಕ್ಕಂತೆ 300-500 ಸಿಲಿಂಡರ್‌ಗಳನ್ನು ತುಂಬಿಸಿ ಬರಬಹುದು ಎಂದು ಸಚಿವ ನಿರಾಣಿ ಅವರು ಮಾಹಿತಿ ನೀಡಿದರು.
ಮಾರುಕಟ್ಟೆಯಲ್ಲಿ ಲಸಿಕೆ ಅಭಾವ ಇರುವ ಕಾರಣ, ರಾಜ್ಯದಲ್ಲಿ ಕೊರೊನಾ ಲಸಿಕೆ ಸಮಸ್ಯೆ ಎದುರಾಗಿದ್ದು, ಸದ್ಯದಲ್ಲೇ ಇತ್ಯಾರ್ಥವಾಗಲಿದೆ ಎಂದು ವ್ಯಕ್ತಪಡಿಸಿದರು.
ಹಣಕಾಸಿನ ಸಮಸ್ಯೆ ಇಲ್ಲ
ಮಾರುಕಟ್ಡಯಲ್ಲಿ ಲಸಿಕೆ ಸಿಗುತ್ತಿಲ್ಲ.ರಾಜ್ಯ ಸರ್ಕಾರ ಸತತ ಪ್ರಯತ್ನದಲ್ಲಿದ್ದು ಆದಷ್ಟು ಬೇಗ ಲಸಿಕೆ ರಾಜ್ಯಕ್ಕೆ ಬರಲಿದೆ ಎಂದು ಹೇಳಿದರು.
ಲಸಿಕೆ ಖರೀದಿಸಲು ಹಣದ ಕೊರತೆ ಇಲ್ಲ, ಆದರೆ ಏಕಾಏಕಿ ಸೋಂಕಿತರ ಸಂಖ್ಯೆ
ಹೆಚ್ಚಳವಾಗಿರುವ ಕಾರಣ,ತಾತ್ಕಾಲಿಕ ಸಮಸ್ಯೆ ಬಂದಿದೆ.ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ
ಮಾಡಿರುವ ಕಾರಣ ಎಲ್ಲವೂ ಬಗೆಹರಿದೆ ಎಂದರು.
ಲಸಿಕೆ ಖರೀದಿಸಲು ಹಣಕಾಸಿನ ಸಮಸ್ಯೆ ಇಲ್ಲ.ಪ್ರತಿಯೊಬ್ಬರು ಉತ್ತಮ ಚಿಕಿತ್ಸೆ ನೀಡುವುದು ನಮ್ಮ ಸರ್ಕಾರ ಬದ್ದವಾಗಿದೆ. ಇದರಲ್ಲಿ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿರೋಧ ಪಕ್ಷದವರು ಟೀಕೆ ಮಾಡ್ತಿದ್ದಾರೆ.ಮೊದಲು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದರು.ಈಗ ಲಸಿಕೆ ಇಲ್ಲ ಎಂದು ಹೇಳ್ತಿದ್ದಾರೆ
ಇದು ರಾಜಕೀಯ ಮಾಡುವ ಸಮಯ ಅಲ್ಲ, ಸರ್ಕಾರಕ್ಕೆ ಸಲಹೆ ಕೊಡಲಿ. ಈ ಸಮಯದಲ್ಲಿ ಟೀಕೆ ಮಾಡುವದು ಬೇಡ ಎಂದು ನಿರಾಣಿ ಅವರು ಕಿವಿಮಾತು ಹೇಳಿದರು.