ಕೊರೊನಾ ಸಂದರ್ಭದಲ್ಲೂ ಲೋಕೋಪಯೋಗಿ ಇಲಾಖೆ ಶೇ೯೯ ಸಾಧನೆ

Share

ಬೆಂಗಳೂರು,ಜೂ.೫: ಕೊರೊನಾ ಸಂಕಷ್ಟದಲ್ಲೂ ಇಲಾಖೆ ೨೦೨೦-೨೧ ಸಾಲಿನಲ್ಲಿ ೧೦,೮೯೩ ಕೋಟಿ ಅನುದಾನದಲ್ಲಿ ೧೦,೭೪೩ ಕೋಟಿ ಆರ್ಥಿಕ ಪ್ರಗತಿ (ಶೇ ೯೯) ಸಾಧಿಸಿದೆ’ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಲೋಕೋಪಯೋಗಿ ಸಚಿವ ಗೋವಿಂದ ಎಂ ಕಾರಜೋಳ ತಿಳಿಸಿದರು
ಶನಿವಾರ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘೨೦೧೯-೨೦ ಸಾಲಿನಲ್ಲಿ ೯,೦೩೩ ಕೋಟಿ ೮,೭೮೮ ಕೋಟಿ ಆರ್ಥಿಕ ಪ್ರಗತಿ (ಶೇ ೯೭) ಪ್ರಗತಿ ಸಾಧಿಸಲಾಗಿತ್ತು’ ಎಂದರು.ವಿವಿಧ ಯೋಜನೆಗಳಡಿ ಒಟ್ಟಾರೆ ೧೨೧೨೫ ಕಿಮೀ ರಸ್ತೆ ಅಭಿವೃದ್ಧಿಗೆ ? ೧೨,೧೨೨ ಕೋಟಿ ವೆಚ್ಚ ಮಾಡಲಾಗಿದೆ. ೨೯೬೧ ಕಿಮೀ. ರಾಜ್ಯ ಹೆದ್ದಾರಿ ಮತ್ತು ೯೧೬೪ ಕಿಮೀ. ಜಿಲ್ಲಾ ಮುಖ್ಯ ರಸ್ತೆ ಮತ್ತು ೬೨೧ ಸೇತುವೆಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ. ೪೮ ನ್ಯಾಯಾಲಯ ಹಾಗೂ ನ್ಯಾಯಾಧೀಶರ ವಸತಿ ಗೃಹಗಳ ಕಾಮಗಾರಿಗಳು ಹಾಗೂ ೧೫ ಪೋಸ್ಕೊ ನ್ಯಾಯಾಲಯಗಳ ಕಟ್ಟಡಗಳನ್ನು ? ೨೫೫ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ’ ಎಂದರು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೊನಿಗಳಲ್ಲಿ ೩,೬೬೮ ಕಿ.ಮೀ ಕಾಂಕ್ರೀಟ್ ರಸ್ತೆಗಳನ್ನು ೨೭೭೯ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.ಎಸ್‌ಡಿಪಿ ಯೋಜನೆಯಡಿ ೬೦೯ ಕಿಮೀ ರಸ್ತೆ ಅಭಿವೃದ್ಧಿ ಮತ್ತು ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ೯೩೩ ಕಿಮೀ ರಸ್ತೆ ಅಭಿವೃದ್ಧಿಯನ್ನು ೩೦೨ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ’ ಎಂದರು.೨೦೧೯ರ ಆಗಸ್ಟ್‌ನಲ್ಲಿ ಸಂಭವಿಸಿದ ಪ್ರವಾಹ ಪರಿಹಾರ ಕಾಮಗಾರಿಗಳ ಅನುಷ್ಠಾನದಲ್ಲಿ ೫೦೦ ಕೋಟಿ ಮೊತ್ತದಲ್ಲಿ ೧,೮೫೦ ಕಾಮಗಾರಿ ಪೂರ್ಣಗೊಂಡಿವೆ. ೨೦೨೦ರಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ರಸ್ತೆ ಮತ್ತು ಸೇತುವೆಗಳ ದುರಸ್ತಿಗಾಗಿ ೬೧೫ ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ೧,೫೫೩ಕಾಮಗಾರಿಗಳ ಅನುಷ್ಠಾನ ಕೈಗೊಳ್ಳಲಾಗಿದ್ದು, ೩೮೪ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ವಿವರಿಸಿದರು.
ಎಸ್‌ಎಚ್‌ಡಿಪಿ-ಫೇಸ್-೪, ಹಂತ-೧ರಲ್ಲಿ ? ೪,೫೦೦ ಕೋಟಿ ಮೊತ್ತದಲ್ಲಿ ೩,೫೦೦ ಕಿಮೀ ರಸ್ತೆಗಳ ಅಭಿವೃದ್ಧಿ ಕೈಗೊಂಡಿದ್ದು, ೧,೭೩೯ ಕಿಮೀ ಅಭಿವೃದ್ಧಿಯನ್ನು ೨೧೪೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಪೂರ್ಣಗೊಳಿಸಲಾಗಿದೆ. ಕೆಶಿಪ್-೩ರಡಿ ಎಡಿಬಿ-೨ರಡಿ ೫,೩೩೪ ಕೋಟಿ ಮೊತ್ತದಲ್ಲಿ ೪೧೮ ಕಿ.ಮೀ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಚಾಲನೆ ನೀಡಿದ್ದು, ೧೨೬ ಕಿಮೀ ಅಭಿವೃದ್ಧಿ ಪೂರ್ಣಗೊಂಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಆರ್‌ಡಿಸಿಎಲ್ ವತಿಯಿಂದ ಬೆಂಗಳೂರು ಸುತ್ತಮುತ್ತಲಿನ ೧೫೫ ಕಿಮೀ ರಸ್ತೆಯನ್ನು ೨,೦೯೫ ಕೋಟಿ ಅಂದಾಜು ಮೊತ್ತದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ ಹಾಗೂ ರಾಜ್ಯದಾದ್ಯಂತ ೧,೩೯೫ ಕೋಟಿ ಮೊತ್ತದಲ್ಲಿ ೨೧೫ ಸೇತುವೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ೧೨೩ ಸೇತುವೆಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದ ಸಹಯೋಗದಲ್ಲಿ ೪,೭೬೨ ಕೋಟಿ ಮೊತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅನುಷ್ಠಾನಗೊಳಿಸಲಾಗುತ್ತಿದೆ. ಎರಡು ವರ್ಷಗಳಲ್ಲಿ ೩೯೯ ಕಿಮೀ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯನ್ನು ೨,೪೮೪ ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಸಿಗಂದೂರು ಸೇತುವೆಯ ? ೪೮೨.೮೪ ಕೋಟಿಯ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಶಿವಮೊಗ್ಗ-ಸವಳಂಗ-ಶಿಕಾರಿಪುರ-ಶಿರಾಳಕೊಪ್ಪ ಮತ್ತು ಹಾಸನ-ರಾಮನಾಥಪುರ-ಪಿರಿಯಾಪಟ್ಟಣ ರಸ್ತೆಗಳಲ್ಲಿ ೧೮ ಕೋಟಿ ವೆಚ್ಚದಲ್ಲಿ ಅನುಷ್ಠಾನ, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕಾಲುಸಂಕಗಳನ್ನು ನಿರ್ಮಿಸುವ ‘ಗ್ರಾಮಬಂಧು’ ಸೇತುವೆ ಯೋಜನೆ ಅನುಷ್ಠಾನಗೊಳಿಸಲಾಗಿದೆ’ ಎಂದರುಬೆಂಗಳೂರು ಸುತ್ತಲಿನ ಸೆಟಲೈಟ್ ಟೌನ್ ರಿಂಗ್ ರಸ್ತೆ ಡಾಬಸ್‌ಪೇಟೆ-ದೇವನಹಳ್ಳಿ- ಹೊಸಕೋಟೆ- ತಮಿಳನಾಡು (೧೦೧ ಕಿಮೀ) ಗಡಿವರೆಗಿನ ಅಭಿವೃದ್ಧಿಯನ್ನು ಎನ್‌ಎಚ್‌ಎಐ ವತಿಯಿಂದ ‘ಭಾರತಮಾಲಾ’ ಯೋಜನೆಯಡಿ ಕೈಗೊಳ್ಳಲಾಗಿದೆ. ಬಾಕಿ ಉಳಿದಿರುವ ೧೪೩ ಕಿಮೀ ಉದ್ದದ ಎಸ್‌ಟಿಆರ್‌ಆರ್ ರಸ್ತೆಯ ಭಾಗವನ್ನು ಹೊಸೂರು ಗಡಿ – ಆನೇಕಲ್ – ಕನಕಪುರ ರಾಮನಗರ ಮಾಗಡಿ – ಡಾಬಸಪೇಟೆ ಎನ್‌ಎಚ್‌ಎಐ ಸಹಯೋಗದಲ್ಲಿ ಕೈಗೊಳ್ಳಲು ಭೂಸ್ವಾಧೀನ ಮೊತ್ತದ ೧೫೬೦ ಕೋಟಿಯಲ್ಲಿ ಶೇ ೩೦ರಷ್ಟು ರಾಜ್ಯ ಸರ್ಕಾರದಿಂದ ಭರಿಸಿ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.

Girl in a jacket
error: Content is protected !!