ಕೇಂದ್ರದ ಅಮೃತ್ ಯೋಜನೆಯಲ್ಲಿ ಬೃಹತ್ ಹಗರಣ ಬಯಲು- ಇಬ್ಬರು ಸಚಿವರು ,ಶಾಸಕರ ವಿರುದ್ಧ ಗಂಭೀರ ಆರೋಪ

Share

ಕೇಂದ್ರದ ಅಮೃತ್ ಯೋಜನೆಯಲ್ಲಿ    ಬೃಹತ್ ಹಗರಣ ಬಯಲು- ಇಬ್ಬರು ಸಚಿವರು ,ಶಾಸಕರ ವಿರುದ್ಧ ಗಂಭೀರ ಆರೋಪ

by-ಕೆಂಧೂಳಿ

ಬೆಂಗಳೂರು, ಏ,09-ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಮೃತ್   ಯೋಜನೆಯ 17,000 ಕೋಟಿ ಮೊತ್ತದ ಅನುದಾನವನ್ನು  ರಾಜ್ಯ ಸರ್ಕಾರದ ಸಚಿವರು ಅಧಿಕಾರಿಗಳು ಶಾಮೀಲಾಗಿ ದುರ್ಬಳಿಕೆ ಮಾಡಿಕೊಂಡಿದ್ದಾರೆ ಎಂದು ಬಿಬಿಎಂಪಿ ಮಾಜಿಬಸದಸ್ಯ  ಎನ್.ಆರ್.ರಮೇಶ್    ಆರೋಪಿಸಿದ್ದಾರೆ.

ಈ ಕುರಿತು ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ನೀಡಿರುವ ಅವರು, ಭೈರತಿ ಸುರೇಶ್, ರಹೀಂ ಖಾನ್ ಮತ್ತು ಶಾಸಕ ವಿನಯ್ ಕುಲಕರ್ಣಿ ಭಾಗಿಗಳಾಗಿಳಗಾದ್ದುಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ” (KUWS & DB) ಯ ಮುಖ್ಯ ಅಭಿಯಂತರರುಗಳಾದ V. L. ಚಂದ್ರಪ್ಪ ಮತ್ತು T. N. ಮುದ್ದುರಾಜಣ್ಣ ಅವರುಗಳ ವಿರುದ್ಧ ಹಾಗೂ “ಪೌರಾಡಳಿತ ಇಲಾಖೆ” (DMA) ಯ ನಿರ್ದೇಶಕರಾದ ಪ್ರಭುಲಿಂಗ ಕಾವಲಿಕಟ್ಟಿ, ದಡದ ಅವರು ಹಗರಣದಲ್ಲಿ ಭಾಗಿಗಳಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಮೃತ್ ಯೋಜನೆಯ ಸಾವಿರಾರು ಕೋಟಿ ರೂಪಾಯಿಗಳಷ್ಟು ಅನುದಾನಗಳನ್ನು ದುರ್ಬಳಕೆ ಮಾಡಿಕೊಂಡಿರುವ ಈ “ಬೃಹತ್ ಹಗರಣ”ವನ್ನು CBI ತನಿಖೆಗೆ ವಹಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ದೇಶದ ಮಹಾನಗರಗಳನ್ನು ಹೊರತುಪಡಿಸಿ, ಇನ್ನುಳಿದ ನಗರಸಭೆ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಒಳ ಚರಂಡಿ ಮತ್ತು ಕೊಳಚೆ ನಿರ್ವಹಣೆ, ಬೃಹತ್ ನೀರುಗಾಲುವೆಗಳ ನಿರ್ಮಾಣ, ಮರು ಜೋಡಣೆ ಮತ್ತು ಪುನಶ್ಚೇತನ ಕಾರ್ಯಗಳು ಹಾಗೂ ಹಸಿರು ವಲಯಗಳು ಮತ್ತು ಉದ್ಯಾನವನಗಳ ನಿರ್ಮಾಣ – ಅಲ್ಲದೇ ನಗರ ಸಾರಿಗೆಗೆ ಸುಸಜ್ಜಿತ ಮಾರ್ಗಗಳ ನಿರ್ಮಾಣಗಳಂತಹ ಕಾರ್ಯಗಳನ್ನು ಮಾಡುವ ಮೂಲಕ ಆ ಭಾಗಗಳ ನಾಗರಿಕರಿಗೆ ಅವಶ್ಯಕತೆ ಇರುವಂತಹ ಗುಣಮಟ್ಟದ ಜೀವನವನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರವು AMRUT (Atal Mission for Rejuvenation & Urban Transportation) ಯೋಜನೆಯನ್ನು 25/06/2015 ರಂದು ಪ್ರಾರಂಭಿಸಿರುತ್ತದೆ.

ದೇಶದ 500 ಕ್ಕೂ ಹೆಚ್ಚು ನಗರಸಭೆ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಈ AMRUT ಯೋಜನೆಯ ಅನುಷ್ಠಾನಕ್ಕೆಂದು ಪ್ರತೀ ವರ್ಷ ಸರಾಸರಿ ಒಂದು ಲಕ್ಷ ಕೋಟಿ ರೂಪಾಯಿಗಳ ಅನುದಾನವನ್ನು ಕೇಂದ್ರದ “ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ”ದ ಮೂಲಕ ಬಿಡುಗಡೆ ಮಾಡುತ್ತಿದೆ.

AMRUT ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯದ 27 ನಗರಸಭೆ / ಪುರಸಭೆಗಳನ್ನು ಆಯ್ಕೆ ಮಾಡಿದೆ ರಾಜ್ಯದಲ್ಲಿ AMRUT ಯೋಜನೆಯನ್ನು ಅನುಷ್ಠಾನಗೊಳಿಸುವ ಹೊಣೆಯನ್ನು “ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ” (KUWS & DB) ಮತ್ತು “ಪೌರಾಡಳಿತ ಇಲಾಖೆ” (DMA) ಗಳು ಹೊತ್ತಿವೆ.

ಕರ್ನಾಟಕ ರಾಜ್ಯದಲ್ಲಿ ಆಯ್ದ 27 ನಗರಸಭೆ / ಪುರಸಭೆಗಳ ವ್ಯಾಪ್ತಿಯಲ್ಲಿ AMRUT ಯೋಜನೆಯ ಅನುಷ್ಠಾನಕ್ಕೆಂದು ಕೇಂದ್ರ ಸರ್ಕಾರವು 2023-24 ಮತ್ತು 2024-25 ರ ಸಾಲುಗಳಲ್ಲಿ ಒಟ್ಟು ₹ 16,989.66 ಕೋಟಿ ಮೊತ್ತದ ಅನುದಾನಗಳನ್ನು ಬಿಡುಗಡೆ ಮಾಡಿರುತ್ತದೆ.

2023-24 ಮತ್ತು 2024-25 ರ ಸಾಲುಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಬಿಡುಗಡೆಯಾಗಿರುವ AMRUT ಯೋಜನೆಯ ₹ 16,989.66 ಕೋಟಿ ಮೊತ್ತದ ಅನುದಾನಗಳ ಪೈಕಿ ಶೇ. 75% ರಷ್ಟು ಅನುದಾನ KUWS & DB ಇಲಾಖೆಗೆ ಬಿಡುಗಡೆಯಾಗಿದ್ದು, ಇನ್ನುಳಿದ ಶೇ. 25% ರಷ್ಟು ಅನುದಾನ DMA ಇಲಾಖೆಗೆ ಬಿಡುಗಡೆಯಾಗಿರುತ್ತದೆ.

2024-25 ರ ಸಾಲಿನಲ್ಲಿ ಕರ್ನಾಟಕ ರಾಜ್ಯಕ್ಕೆ ಬಿಡುಗಡೆ ಆಗಿರುವ  8,989.66 ಕೋಟಿ ರೂಪಾಯಿಗಳ ಪೈಕಿ, ಈಗಾಗಲೇ ಒಟ್ಟು  5,799.98 ಕೋಟಿ ಮೊತ್ತದ 137 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳು ಮುಗಿದು ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ ಹಾಗೂ ಒಟ್ಟು  3,189.68 ಕೋಟಿ ಮೊತ್ತದ 93 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳು ಮುಗಿದಿದ್ದು ಕಾಮಗಾರಿಗಳು ಇನ್ನಷ್ಟೇ ಪ್ರಾರಂಭಿಸಬೇಕಿದೆ ಎಂಬ ಮಾಹಿತಿಯನ್ನು KUWS & DB ಮತ್ತು DMA ಇಲಾಖೆಗಳು ನೀಡಿವೆ.

ಅಲ್ಲದೇ, 2023-24 ರ ಸಾಲಿನಲ್ಲಿ ರಾಜ್ಯಕ್ಕೆ AMRUT ಯೋಜನೆಯ ಅನುಷ್ಠಾನಕ್ಕೆಂದು ಒಟ್ಟು 8,000 ಕೋಟಿ ಮೊತ್ತದ ಅನುದಾನ ಬಿಡುಗಡೆ ಆಗಿದ್ದು, ಶೇ. 100% ರಷ್ಟು ಯೋಜನೆ ಅನುಷ್ಠಾನಗೊಂಡಿದೆ ಎಂಬ ಮಾಹಿತಿಯನ್ನೂ ಸಹ ಈ ಎರಡೂ ಇಲಾಖೆಗಳು ನೀಡಿವೆ.

KUWS & DB ಹಾಗೂ DMA – ಈ ಎರಡೂ ಇಲಾಖೆಗಳ ಪ್ರಮುಖ ಹುದ್ದೆಗಳಲ್ಲಿರುವ ಭ್ರಷ್ಟ ಅಧಿಕಾರಿಗಳು ರಾಜ್ಯದ ನಗರಾಭಿವೃದ್ಧಿ ಇಲಾಖೆಯ ಸಚಿವರಾದ ಭೈರತಿ ಸುರೇಶ್ ಮತ್ತು KUWS & DB ಯ ಅಧ್ಯಕ್ಷರಾದ ವಿನಯ್ ಕುಲಕರ್ಣಿ ಹಾಗೂ ಪೌರಾಡಳಿತ ಇಲಾಖೆಯ ಸಚಿವರಾದ ರಹೀಮ್ ಖಾನ್ ರವರ ನೇತೃತ್ವದಲ್ಲಿ ಕಳೆದ ಎರಡು ಸಾಲುಗಳಲ್ಲಿ 16,989.66 ಕೋಟಿ ಮೊತ್ತದ ಅನುದಾನಗಳ ಪೈಕಿ ಶೇ. 50% ಕ್ಕೂ ಹೆಚ್ಚು ಮೊತ್ತವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

 

Girl in a jacket
error: Content is protected !!