ಕೂಡಲ ಸಂಗಮದೇವ ನಾಮಾಂಕಿತ ಬಳಕೆಗೆ ಗಂಗಾಮಾತಾಜಿ ನಿರ್ಧಾರ; ಎಂ.ಬಿ.ಪಾಟೀಲ್‌ಸಂತಸ

Share

ವಿಜಯಪುರ ,ಡಿ,29. ಧರ್ಮಗುರು ಬಸವಣ್ಣನವರ ವಚನಾಂಕಿತ ಕೂಡಲಸಂಗಮದೇವ ಎಂದೇ ಬಳಸಬೇಕು ಎಂದು ಬಸವಧರ್ಮ ಪೀಠದ ಜಗದ್ಗುರು ಡಾ.ಗಂಗಾಮಾತಾಜಿಯವರು ಹೇಳಿರುವುದು ಸಮಸ್ತ ಲಿಂಗಾಯತ ಸಮಾಜಕ್ಕೆ ಸಂತಸ ತಂದಿದೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು ಲಿಂಗಾಯತರ ಅಸ್ಮಿತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ ಗಂಗಾಮಾತಾಜಿ ಅವರ ಈ ಸಂದೇಶ ಲಿಂಗಾಯತರಿಗೆ ನೈತಿಕ ಬೆಂಬಲವನ್ನು ಹೆಚ್ಚಿಸಿದೆ. ಕೂಡಲಸಂಗಮದೇವ ಅಂಕಿತನಾಮ ಬಳಕೆಯಿಂದ ಬಸವಪರ ಸಂಘಟನೆಗಳಲ್ಲಿ ಉಂಟಾಗಿದ್ದ ಗೊಂದಲಕ್ಕೆ ಸ್ಪಷ್ಟತೆ ದೊರಕಿದಂತಾಗಿದೆ ಎಂದರು.

ಈ ಹಿಂದೆ ಕಲಬುರಗಿಯಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ಪೂಜ್ಯಶ್ರೀ ಮಾತೆ ಮಹಾದೇವಿಯವರಿಗೆ ನಾನು ಈ ಕುರಿತು ವಿನಂತಿ ಮಾಡಿಕೊಂಡಿದ್ದೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದರು. ಇಂದು ಅಧಿಕೃತವಾಗಿ ಅವರ ಪೀಠದಿಂದ ಡಾ.ಗಂಗಾಮಾತಾಜಿ ಹೇಳಿಕೆ ನೀಡಿರುವುದು ಸಂತಸದ ತಂದಿದೆ.

ಸಮಸ್ತ ಲಿಂಗಾಯತ ಸಮುದಾಯದ ಪರವಾಗಿ ಹೃದಯಪೂರ್ವಕವಾಗಿ ಡಾ.ಗಂಗಾಮಾತಾಜಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಎಂ.ಬಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Girl in a jacket
error: Content is protected !!