ಕಾವೇರಿ ಹೋರಾಟಗಾರ ,ಮಾಜಿ ಸಂಸದ ಜಿ.ಮಾದೇಗೌಡ ನಿಧನ

Share

ಮಂಡ್ಯ,ಜು,17: ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಂಸದ, ಕಾವೇರಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹೋರಾಟಗಾರ ಜಿ.ಮಾದೇಗೌಡ (92) ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾದೆ ಕೊನೆಯುಸಿರೆಳೆದಿದ್ದಾರೆ.

1980ರ ದಶಕದಲ್ಲಿ ಆರ್​ ಗುಂಡೂರಾವ್​ ಅವರ ಮಂತ್ರಿ ಮಂಡಲದಲ್ಲಿ ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದ ಮಾದೇಗೌಡರು ಮಂಡ್ಯದ ಅಂದಿನ ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ 1989 ಮತ್ತು 1991ರಲ್ಲಿ ಆಯ್ಕೆಗೊಂಡಿದ್ದರು. ಹಿರಿಯ ರಾಜಕಾರಣಿ ಮಾದೇಗೌಡರು ಕಾವೇರಿ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದರು. ಇತರೆ ಅನೇಕ ರೈತ ಹೋರಾಟಗಳಲ್ಲಿ ಅವರು ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು.

ನಾಳೆ ಬೆಳಗ್ಗೆ ಮಂಡ್ಯದ ಬಂಧೀಗೌಡ ಬಡಾವಣೆಯಲ್ಲಿರುವ ಮಾದೇಗೌಡರ ನಿವಾಸಕ್ಕೆ ಪಾರ್ಥೀವ ಶರೀರವನ್ನು ತರಲಾಗುವುದು. ನಂತರ ಗಾಂಧಿ ಭವನದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲಿಂದ ಮದ್ದೂರು ಮುಖಾಂತರ ಹುಟ್ಟೂರು ಗುರುದೇವರಹಳ್ಳಿಯಲ್ಲಿ ಅಂತಿಮ ದರ್ಶನ‌ಕ್ಕೆ ವ್ಯವಸ್ಥೆ ಮಾಡಲಾಗುವುದು. ಜತೆಗೆ ಭಾರತೀ ಕಾಲೇಜು ಅವರಣದಲ್ಲಿಯೂ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಮಧ್ಯಾಹ್ನ 2.30 ರ ಸುಮಾರಿಗೆ ಹನುಮಂತನಗರದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಅವರ ಕುಟುಂಭವರ್ಗ ತಿಳಿಸಿದೆ.

ಸುಮಾರು ಮೂರು ವರ್ಷಗಳಿಂದ ಸ್ವತಃ ಅವರೇ ಮುಂದೆ ನಿಂತು ಪ್ರಾರಂಭಿಸಿದ್ದ ಜಿ ಮಾದೇಗೌಡ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅವರಿಗೆ ಈಗ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಆಸ್ಪತ್ರೆಯು ಮದ್ದೂರು ತಾಲೂಕಿನ ಭಾರತಿನಗರ ಬಳಿಯಿದೆ.

Girl in a jacket
error: Content is protected !!