ಇಂದಿನಿಂದ ಮತ್ತಷ್ಟು ಕಠಿಣ ಲಾಕ್ ಡೌನ್

Share

ಬೆಂಗಳೂರು, ಮೇ,24:ಇಂದಿನಿಂದ ರಾಜ್ಯದಲ್ಲಿ ಹೊಸ ಲಾಕ್ ಡೌನ್ ಮಾರ್ಗಸೂಚಿಗಳು ಅನ್ವಯವಾಗಲಿದ್ದು ಕಠಿಣ ರೂಲ್ಸ್ ಜಾರಿಯಾಗಲಿದೆ.
ಮುಂದಿನ 14 ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆ ಅತ್ಯಂತ ಕಠಿಣ ರೂಲ್ಸ್ ಜಾರಿಯಾಗಲಿದ್ದು ಜನ ಹೊರಬಂದ್ರೆ ಪೊಲೀಸರು ತಮ್ಮ ವರ್ಸೆ ತೋರಿಸಲಿದ್ದಾರೆ.

ವಿನಾಕಾರಣ ಓಡಾಡುವವರಿಗೆ ಮೊನ್ನೆ ಸಿಎಂ ಯಡಿಯೂರಪ್ಪ ಖಡಕ್ ವಾರ್ನಿಂಗ್ ನೀಡಿದ್ರು. ಬೆಳಗ್ಗೆ 10ಕ್ಕೆ ಅಲ್ಲ 9.45 ರೊಳಗೆ ಮನೆ ಸೇರಬೇಕು. ಇದಕ್ಕೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಬೇಕು ಅಂತಾನೂ ಎಚ್ಚರಿಸಿದ್ರು. ಇದ್ರ ಬೆನ್ನಲ್ಲೇ ಎಚ್ಚೆತ್ತ ಖಾಕಿ ಕಳೆದೆರಡು ದಿನಗಳಿಂದ ಖಡಕ್ ರೂಲ್ಸ್ನ ಟ್ರೇಲರ್ ತೋರಿಸಿದ್ರು. ಆದ್ರೆ ಇಂದಿನಿಂದ ಹೊಸ ಲಾಕ್ಡೌನ್ ಕಠಿಣ ರೂಲ್ಸ್ ಪಿಕ್ಚರ್ ತೋರಿಸೋಕೆ ಪೊಲೀಸರು ಸಕಲ ಸನ್ನದ್ಧರಾಗಿದ್ದಾರೆ. ಹೀಗಾಗಿ ಬೆಂಗಳೂರಲ್ಲಿ ಇವತ್ತಿನಿಂದ ಲಾಕ್ಡೌನ್ ರೂಲ್ಸ್ ಮತ್ತಷ್ಟು ಬಿಗಿಯಾಗಲಿದೆ.

ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿರುತ್ತೆ. 10 ಗಂಟೆ ಬಳಿಕ ಎಲ್ಲವೂ ಕಂಪ್ಲೀಟ್ ಬಂದ್ ಆಗಲಿದೆ. ಬೆಳಗ್ಗೆ 10 ಗಂಟೆ ವೇಳೆಗೆ ಎಲ್ಲರೂ ಮನೆ ಸೇರಿರಬೇಕು. ಮೆಡಿಕಲ್ ಎಮರ್ಜೆನ್ಸಿಗೆ ಮಾತ್ರ ಹೊರ ಬರೋಕೆ ಅವಕಾಶ ನೀಡಲಾಗಿದೆ. ಮೆಡಿಕಲ್ ಶಾಪ್, ವೈದ್ಯಕೀಯ ಸೇವೆ ಎಂದಿನಂತೆ ಲಭ್ಯವಿರಲಿದೆ.

ಕೆಲ ಜಿಲ್ಲೆಗಳು ಕಂಪ್ಲೀಟ್ ಲಾಕ್, ಹಳ್ಳಿ ಹಳ್ಳಿಗೂ ಬೀಗ
ಮತ್ತೊಂದೆಡೆ ಹಳ್ಳಿ ಹಳ್ಳಿಗಳಲ್ಲೂ ಕೊರೊನಾ ರೌದ್ರಾವತಾರ ತಾಳುತ್ತಿದ್ದು, ನೂರಾರು ಜನರ ಬಲಿ ಪಡೆಯುತ್ತಿದೆ. ಹೀಗಾಗಿ ಕೆಲ ಜಿಲ್ಲೆಗಳಲ್ಲಿ ಕಂಪ್ಲೀಟ್ ಲಾಕ್ಡೌನ್ ಘೋಷಿಸಲಾಗಿದೆ.

ಜಿಲ್ಲೆಗಳು ಕಂಪ್ಲೀಟ್ ಲಾಕ್‌
ಜೂನ್ 7ರವರೆಗೆ ಧಾರವಾಡ ಕಂಪ್ಲೀಟ್ ಲಾಕ್ ಆಗಿರಲಿದೆ. ಗುರುವಾರ, ಶುಕ್ರವಾರ ಮಾತ್ರ ಮಾರ್ಕೆಟ್‌ ಓಪನ್‌ ಇರಲಿದ್ದು, ಮಾರ್ಕೆಟ್‌ನಲ್ಲಿ ದಿನಸಿ ಖರೀದಿಗೆ ವಾರದಲ್ಲಿ 2ದಿನ ಬೆಳಗ್ಗೆ 6ರಿಂದ 10 ಗಂಟೆವರೆಗೆ ಅವಕಾಶ ಕೊಡಲಾಗಿದೆ. ಇನ್ನು ಲಾಕ್ಡೌನ್ ವೇಳೆ ನಿತ್ಯ ಬೆಳಗ್ಗೆ 6ರಿಂದ 8ರವರೆಗೆ ತರಕಾರಿ, ಹಾಲು, ಹಣ್ಣು ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ.

Girl in a jacket
error: Content is protected !!