೨೬ ರ ನಂತರ ಬಿಎಸ್‌ವೈ ರಾಜೀನಾಮೆ ನೀಡುತ್ತಾರಾ..?

Share

 

ನವದೆಹಲಿ,ಜು,೧೭: ಇದೇ ೨೬ ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರಕ್ಕೆ ಎರಡು ವರ್ಷ ಪೂರೈಸುತ್ತದೆ ಈ ಸಂಭ್ರಮವನ್ನು ಆಚರಿಸಿಕೊಂಡ ನಂತರ ಅವರು ಪದತ್ಯಾಗ ಮಾಡುತ್ತಾರೆ ಎನ್ನುವುದು ಈಗ ಖಚಿತವಾಗುತ್ತಿವೆ.
ಹೌದು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿಯಾದ ಸಂದರ್ಭದಲ್ಲಿ ತಾವು ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ ಹೀಗಾಗಿ ಒಂದು ತಿಂಗಳ ಅವಕಾಸ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ಯಡಿಯೂರಪ್ಪ ಅವರು ಪ್ರಧಾನಿ ಅವರನ್ನು ಭೇಟಿಯಾಗಿ ರಾಜ್ಯದ ಮಹತ್ವದ ಯೋಜನೆಯಾದ ಮೇಕೆದಾಟು ಯೋಜನೆ ಕುರಿತಂತೆ ಮಾತುಕತೆ ನಡೆಸಿದ್ದರು ಈ ವೇಳೆ ರಾಜ್ಯ ರಾಜಕೀಯ ಕುರಿತು ಪ್ರಸ್ತಾಪ ಮಾಡಿದ್ದರು ಅವರ ಸೂಚನೆ ಮೇರೆಗೆ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡಿದ್ದರು ಈ ವೇಳೆ ತಾವು ರಾಜೀನಾಮಿ ನೀಡುವಂತೆ ಸೂಚಿದ್ದಾರೆ ಎಂದು ಹೇಳಲಾಗುತ್ತಿದೆ,ಆದರೆ ಇದನ್ನು ನಿರಾಕರಿಸಿರುವ ಯಡಿಯೂರಪ್ಪ, ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಕೊಟ್ಟಿದ್ದರೆ ಕದ್ದುಮುಚ್ಚಿ ಕೊಡುವುದಿಲ್ಲ. ಎಲ್ಲವನ್ನೂ ಮಾಧ್ಯಮದವರ ಮುಂದೆ ಬಹಿರಂಗಪಡಿಸುತ್ತೇನೆ ಎಂದು ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಗೌರವಯುತವಾಗಿ ರಾಜೀನಾಮೆ ನೀಡಬೇಕು. ಪಕ್ಷದಲ್ಲಿ ಅಥವಾ ಸರ್ಕಾರದಲ್ಲಿ ಬಲಾಬಲ ಪ್ರದರ್ಶನ ನಡೆಸದೆ ಬೇರೊಬ್ಬರಿಗೆ ಸ್ಥಾನ ಬಿಟ್ಟುಕೊಡಬೇಕೆಂದು ಸೂಚಿಸಿರುವುದಾಗಿ ತಿಳಿದುಬಂದಿದೆ. ಯಡಿಯೂರಪ್ಪ ಅವರು ಮತ್ತೆ ನಾನು ಆಗಸ್ಟ್‌ನಲ್ಲಿ ದೆಹಲಿಗೆ ಬರುತ್ತೇನೆ ಎಂದು ಹೇಳಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಮೂಲಗಳ ಪ್ರಕಾರ ಜು.೨೬ರೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವರಿಷ್ಠರು ಬಿಎಸ್‌ವೈಗೆ ನಿರ್ದೇಶಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರು ೨೬ ರ ನಂತರ ತಮ್ಮ ಎರಡು ವರ್ಷ ಪೂರೈಸಿದ ನಂತರ ರಾಜೀನಾಮೆ ನೀಡುವ ಕುರಿತು ಕಾಲಾವಕಾಶ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಜೆ.ಪಿ.ನಡ್ಡಾ ಬಳಿ ಚರ್ಚಿಸುವ ಸಂದರ್ಭದಲ್ಲಿ ಕಡೆ ಪಕ್ಷ ನನಗೆ ಒಂದು ತಿಂಗಳಾದರೂ ಅವಕಾಶ ಕೊಡಿ. ಪಕ್ಷದ ಸೂಚನೆಯಂತೆ ನಾನು ನಡೆದುಕೊಳ್ಳುತ್ತೇನೆ ಎಂದು ಬಿಎಸ್‌ವೈ ಕೇಳಿರುವುದಾಗಿ ತಿಳಿದುಬಂದಿದೆ. ಯಡಿಯೂರಪ್ಪನವರ ಅಧಿಕೃತ ಪ್ರವಾಸದ ಪಟ್ಟಿಯಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಇಂದು ಭೇಟಿಯಾಗಬೇಕಿತ್ತು. ನಡ್ಡಾ ನಿವಾಸದಿಂದ ವಿಮಾನ ನಿಲ್ದಾಣಕ್ಕೆ ಬಂದು ಬೆಂಗಳೂರಿನತ್ತ ಸಿಎಂ ಹೊರಟ್ಟಿದ್ದರು. ಕೊನೆಕ್ಷಣದಲ್ಲಿ ಅವರಿಗೆ ಬುಲಾವ್ ನೀಡಲಾಯಿತು.

ಉತ್ತರಾಖಂಡ್‌ನಂತೆ ಕರ್ನಾಟಕದಲ್ಲೂ ನಾಯಕತ್ವ ಬದಲಾವಣೆ ಮಾಡಲು ವರಿಷ್ಠರು ಮುಂದಾಗಿದ್ದಾರೆ. ಜು.೨೬ರ ನಂತರ ಬಿಎಸ್‌ವೈ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಹೊಸ ನಾಯಕತ್ವದತ್ತ ದೆಹಲಿ ವರಿಷ್ಠರು ಚಿತ್ತ ಹರಿಸಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ಖಚಿತಪಡಿಸಿವೆ. ಆದರೆ ಇದಾವುದೇ ಗುಟ್ಟನ್ನು ರಟ್ಟು ಮಾಡದೆ ಸಿಎಂ ಹಾಗೂ ಅವರ ಪುತ್ರ ವಿಜಯೇಂದ್ರ ದೆಹಲಿ ಪ್ರವಾಸ ಯಶಸ್ವಿಯಾಗಿದೆ ಎಂದು ಮಾಧ್ಯಮಗಳ ಮುಂದೆ ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

Girl in a jacket
error: Content is protected !!