ಬೆಂಗಳೂರು,ಜು,೧೯: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ ೨೬ ಕ್ಕೆ ರಾಜೀನಾಮೆ ಕೊಡುವುದು ಬಹುತೇಕ ಖಚಿತವಾಗಿದೆ. ದೆಹಲಿಯಲ್ಲಿ ಹೈಕಮಾಂಡ್ ಸೂಚನೆಯ ಮೇರೆಗೆ ಈ ನಿರ್ಧಾರಕ್ಕೆ ಬಂದಿದ್ದು ವಲ್ಲದ ಮನಸ್ಸಿನಿಂದಲೇ ಅಂದು ಸಿಂಎಂ ಸ್ಥಾನದಿಂದ ನಿರ್ಗಮಿಸಲಿದ್ದಾರೆ ಎನ್ನುವುದು ಬಿಜೆಪಿಯ ಖಚಿತ ಮೂಲಗಳು ತಿಳಿಸಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ಆಡಿಯೋ ಬಹಿರಂಗಗೊಡ್ಡಿದ್ದ ಅದರಲ್ಲಿ ನೀಡಿರುವ ಹೇಳಿಕೆಗಳು ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಔತಣಕೂಟ ಏರ್ಪಾಟ್ ಮಾಡಿರುವ ವಿಷಯಗಳು ಈ ನಿರ್ಧಾರವನ್ನು ಖಚಿತಪಡಿಸುತ್ತವೆ.
ಅಂದು ಬಿಜೆಪಿ ಶಾಸಕಾಂಗ ಸಭೆ ನಡೆಸಿ ನಂತರ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುತ್ತಾರೆ. ಆದರೆ ಮುಂದಿನ ಮುಖ್ಯಮಂತ್ರಿ ಆಯ್ಕೆಯವರೆಗೂ ಅವರೆ ಹಂಗಾಮಿ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿದ್ದಾರೆ. ಬಹುತೇಖ ಆಗಸ್ಟ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡುವುದು ಕೂಡ ಈಗ ಖಚಿತವಾಗಿದೆ.
ಹಾಗಾದರೆ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವದಕ್ಕೆ ಹಾಲಿ ಸಚಿವರಾಗಿರುವ ಮುರುಗೇಶ್ ನಿರಾಣಿ, ಬಸವರಾಜ್ ಬೊಮ್ಮಾಯಿ, ಪ್ರಹ್ಲಾದ್ ಜೋಶಿ,ಕಾಗೇರಿ ಹೆಸರುಗಳು ಕೇಳಿ ಬರುತ್ತಿವೆ ಒಂದು ಮೂಲದ ಪ್ರಕಾರ ಉತ್ತರ ಕರ್ನಾಟಕದವವರೆ ಮುಂದಿನ ಮುಖ್ಯಮಂತ್ರಿ ಎನ್ನುವುದು ಖಚಿತವಾಗಿದೆ ಹೀಗಾಗಿ ಮುರುಗೇಶ್ ನಿರಾಣಿ ಅಥವಾ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಿಎಂ ಆಗುವ ಸಾಧ್ಯತೆಗಳಿವೆ.
೨೬ಕ್ಕೆಬಿಎಸ್‌ವೈ ರಾಜೀನಾಮೆ?
Share