ಸಿಎಂ, ಕೆಪಿಸಿಸಿ ಅಧ್ಯಕ್ಷ ಎರಡೂ ಕುರ್ಚಿ ಖಾಲಿಯಿಲ್ಲ – ಜಮೀರ್ 

Share

ಸಿಎಂ, ಕೆಪಿಸಿಸಿ ಅಧ್ಯಕ್ಷ ಎರಡೂ ಕುರ್ಚಿ ಖಾಲಿಯಿಲ್ಲ – ಜಮೀರ್ 

ಹುಬ್ಬಳ್ಳಿ ,ಜ,19- ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಯೂ ಖಾಲಿ ಇಲ್ಲ, ಕೆಪಿಸಿಸಿ ಅಧ್ಯಕ್ಷ ಕುರ್ಚಿಯೂ ಖಾಲಿ ಇಲ್ಲ ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಹುಬ್ಬಳ್ಳಿ ಯಲ್ಲಿ ಸುದ್ಧಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನ ದಲ್ಲಿ ಸಿದ್ದರಾಮಯ್ಯ ಅವರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಡಿಕೆ ಶಿವಕುಮಾರ್ ಕುಳಿತಿದ್ದಾರೆ. ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹಾಕಿದ ಗೆರೆ ನಾವು ದಾಟುವುದಿಲ್ಲ. ಏನೇ ತೀರ್ಮಾನ ಮಾಡಿದರೂ ಪಕ್ಷ ಮಾಡುತ್ತದೆ. ಉಹಾಪೋಹ ಅನಗತ್ಯ ಎಂದು ಹೇಳಿದರು.
ಗಾಂಧಿ ಭಾರತ ಕಾರ್ಯಕ್ರಮ ಕುರಿತು ಪ್ರತಿಕ್ರಿಯಿಸಿ, ಈ ಹಿಂದೆ ಮನಮೋಹನ್ ಸಿಂಗ್ ಅವರ ನಿಧನ ದಿಂದ ಮುಂದೂಡಿದ್ದ ಕಾರ್ಯಕ್ರಮ 21 ರಂದು ನಿಗದಿಯಾಗಿದ್ದು ಅರ್ಥಪೂರ್ಣ ವಾಗಿ ಆಚರಿಸಲಿದ್ದೇವೆ. ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸಹಿತ ಎಲ್ಲ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Girl in a jacket
error: Content is protected !!