ಬೆಂಗಳೂರು.ಜು,೨೦:ಸಣ್ಣ ರೈತರ ಹೆಸರಿನಲ್ಲಿ ೮ಸಾವಿರ ಕೋಟಿ ರೂ ಸಾಲ ಪಡೆದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ವಂಚಿಸಿದ್ದಾರೆ ಎಂದು ದಿ ಹೆಲ್ಪಿಂಗ್ ಸಿಟಿಜನ್ ಆಂಡ್ ಪೀಪಲ್ಸ್ ಕೋರ್ಟ್ ಸಂಸ್ಥಾಪಕ ಆಲಂ ಪಾಷಾ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು,ಸಚಿವ ನಿರಾಣಿಯವರು ಮುಧೋಳ, ಬೆಳಗಾವಿ, ಬಾಗಲಕೋಟೆ ಭಾಗದ ಸಾವಿರಾರು ಸಣ್ಣ ರೈತರ ಹೆಸರಲ್ಲಿ ಬೆಳೆ ಸಾಲ ಪಡೆದು ವಂಚಿಸಿದ್ದಾರೆ. ಪಡೆದ ಬೆಳೆ ಸಾಲವನ್ನು ನಕಲಿ ಹೆಸರಲ್ಲಿ ಶ್ರೀ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಲಿಮಿಟೆಡ್ನಲ್ಲಿ ಜಮಾ ಮಾಡಿದ್ದಾರೆ. ರೈತರ ನಕಲಿ ಆಧಾರ್ ಕಾರ್ಡ್, ನಕಲಿ ಆರ್ಟಿಸಿ ಬಳಸಿ ನಕಲಿ ಖಾತೆ ಸೃಷ್ಟಿಸಿದ್ದಾರೆ. ಆ ಮೂಲಕ ಅಂದಾರು ೮ ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಆಲಂ ಪಾಷಾ ಒತ್ತಾಯಿಸಿದ್ದಾರೆ
ಹಣದ ಅವ್ಯವಹಾರದ ಬಗ್ಗೆ ಐಜಿಪಿ, ಎಸಿಬಿಗೂ ನಾವು ದೂರು ಕೊಟ್ಟಿದೇವೆ. ನನ್ನ ಆರೋಪ ಸುಳ್ಳಾದರೆ ನಾನು ಜೈಲಿಗೆ ಹೋಗಲು ಸಿದ್ಧ ಎಂದು ಸಚಿವರಿಗೆ ಆಲಂ ಪಾಷಾ ಸವಾಲೆಸಿದಿದ್ದಾರೆ.೮೦೦ ಜನರನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದೇನೆ. ಕೋ ಆಪರೇಟಿವ್ ಬ್ಯಾಂಕ್ಗಳಲ್ಲಿ ಎಷ್ಟು ಹಣ ಡೆಪಾಸಿಟ್ ಆಗಿದೆ. ಈ ಬಗ್ಗೆ ತನಿಖೆ ಆಗೋದ್ ಬೇಡ್ವಾ? ಸಚಿವರು ಆದ ಮಾತ್ರಕ್ಕೆ ಏನು ಬೇಕಾದರೂ ಮಾಡಬಹುದಾ ಎಂದು ಆಲಂ ಪಾಷಾ ಪ್ರಶ್ನಿಸಿದ್ದಾರೆ.
ಸಚಿವರಾಗಿರುವ ನಿರಾಣಿಗೂ, ಗೃಹ ಸಚಿವರ ಮಗನಿಗೂ ಏನ್ ಸಂಬಂಧ ಎಂದು ಪ್ರಶ್ನಿಸಿದ್ರು. ನಿರಾಣಿ ಶುಗರ್ಸ್ ಕಂಪನಿಯಲ್ಲಿ ಬಾಯ್ಲರ್ ಬ್ಲಾಸ್ಟ್ ಆಗಿ ನಾಲ್ವರು ಮೃತಪಟ್ರು. ಆಗ ನಿರಾಣಿಯನ್ನ ಪೊಲೀಸರು ಯಾಕೆ ಅರೆಸ್ಟ್ ಮಾಡಲಿಲ್ಲ. ಈ ನಡುವೆಯೂ ಎರಡು ಸಾವಿರ ಕೋಟಿ ಲೋನ್ ಹೇಗೆ ಪಡೆದಿದ್ದಾರೆ. ಪ್ರಭಾವ ಬಳಸಿ ಏನು ಬೇಕಿದ್ರೂ ಮಾಡಬಹುದಾ ೨೦೨೩ ರಲ್ಲಿ ಚುನಾವಣೆಗೆ ಬಳಸೋದಕ್ಕೆ ಈ ಹಣ ತೆಗೆದಿಟ್ಟಿದ್ದಾರಾ ಎಂದು ಅವರು ಕಿಡಿಕಾರಿದ್ರು.ಗ್ರೇಸ್ ಬ್ಯುಸಿನೆಸ್ ಮ್ಯಾನ್ನಿರಾಣಿ ಗ್ರೇಸ್ ಬ್ಯುಸಿನೆಸ್ ಮ್ಯಾನ್, ಆದ್ರೆ ಸಚಿವರಾಗಿ ಜನಕ್ಕೆ ಏನು ಮಾಡ್ತಿದ್ದಾರೆ. ಜನರೇ ಇವರ ವಿರುದ್ಧ ಎಚ್ಚೆತ್ತುಕೊಳ್ಳಬೇಕು. ಉತ್ತರ ಕರ್ನಾಟಕದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ಯಾಕೆ ಮಾಡ್ತೀರಿ ನಿರಾಣಿಯವರೇ ಎಂದು ಪ್ರಶ್ನಿಸಿದರು.‘ಬ್ಯಾಂಕ್ ಲೂಟಿ’ನಿರಾಣಿ, ಉತ್ತರ ಕರ್ನಾಟಕದ ಬ್ಯಾಂಕ್ಗಳಲ್ಲಿ ಲೂಟಿ ಮಾಡ್ತಿದಾರೆ. ಕ್ರಿಮಿನಲ್ ಕೃತ್ಯ ಮಾಡುತ್ತಿರುವ ಅವರು, ಸಿಡಿಗಳನ್ನಿಟ್ಟುಕೊಂಡು ಸಿಎಂ ಸ್ಥಾನದತ್ತ ಕಣ್ಣಿಟ್ಟಿದ್ದಾರೆ. ಬಿಜೆಪಿಯಲ್ಲಾಗಲೀ, ಕಾಂಗ್ರೆಸ್ನಲ್ಲಾಗಲಿ ಇಂಥವರನ್ನು ಯಾಕೆ ಆಯ್ಕೆ ಮಾಡ್ಬೇಕು ಅಂತಾ ಪ್ರಶ್ನಿಸಿದ್ರು.ಸ್ಟೇ ಯಾಕೆ ತೆಗೆದುಕೊಳ್ಳಬೇಕು ಆರು ಜನ ಮಂತ್ರಿಗಳು ಸ್ಟೇ ತೆಗೆದುಕೊಂಡಿದ್ದಾರೆ. ಸಾರ್ವಜನಿಕ ವಲಯದಲ್ಲಿರುವವರು ಯಾಕೆ ಸ್ಟೇ ತೆಗೆದುಕೊಳ್ಳಬೇಕು. ಮುರುಗೇಶ್ ನಿರಾಣಿ ಬಳಿ ೫೦೦ ಕ್ಕೂ ಹೆಚ್ಚು ಸಿಡಿಗಳಿವೆ. ಅವರು ಮುಂದಿನ ದಿನಗಳಲ್ಲಿ ಇನ್ನೂ ಹಲವರ ಸಿಡಿ ಮಾಡುತ್ತಾರೆ. ಹಾಗಾಗಿ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ ಎಂದು ಆಲಂ ಪಾಷಾ ಗಂಭೀರ ಆರೋಪ ಮಾಡಿದ್ದಾರೆ.
ಸಣ್ಣ ರೈತರ ಹೆಸರಲ್ಲಿ ನಿರಾಣಿ ೮ಸಾವಿರ ಕೋಟಿರೂ ಸಾಲ ಪಡೆದು ವಂಚನೆ-ಆರೋಪ
Share