ಸಂಸದ ಸುಧಾಕರ್ ವಿರುದ್ದ ಕಿಡಿಕಾರಿದ ವಿಜಯೇಂದ್ರ
by ಕೆಂಧೂಳಿ
ಬೆಂಗಳೂರು, ಜ,30- ಚಿಕ್ಕಬಳ್ಳಾಪುರ ವಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ಕುರಿತಂತೆ ಸಂಸದ ಡಾ.ಕೆ.ಸುಧಾಕರ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ನಡೆಸಿದ್ದ ವಾಗ್ದಾಳಿಗೆ ವಿಜಯೇಂದ್ರ ಕಡಕ್ ಉತ್ತರ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ನನ್ನ ಹಸ್ತಕ್ಷೇಪವಿಲ್ಲ. ಪಕ್ಷ ನನ್ನ ಸ್ವತ್ತೂ ಅಲ್ಲ. ಅವರ ಸ್ವತ್ತೂ ಅಲ್ಲ, ಮುಂದಿನ ಬಾರಿ ಸಿಎಂ ಆಗಲು ನಾನು ಸಂಘಟನೆ ಮಾಡುತ್ತಿಲ್ಲ ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆ ತರಲ್ಲ. ಹಗುರವಾಗಿ ಮಾತನಾಡಬಾರದು ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ.
ಸುಧಾಕರ್ ಆಕ್ರೊಶಭರಿತ ಮಾತು ನೋಡಿದ್ದೇನೆ. ನಮ್ಮನ್ನು ಸಮಾಧಿ ಮಾಡಲು ಹೊರಟಿದ್ದಾರೆ ಎಂದಿದ್ದಾರೆ ಈ ರೀತಿ ಆಕ್ರೋಶದ ಮಾತು ಸರಿಯಲ್ಲ. ನಾನು ಸುಧಾಕರ್ ಭೇಟಿಯಾಗಿ ಮಾತನಾಡುವೆ. ನನ್ನ ಮೇಲೆ ಸುಧಾಕರ್ ಆರೋಪ ಮಾಡೋದು ಸರಿಯಲ್ಲ ಇದರಿಂದ ಅವರಿಗೂ ಗೌರವ ಸಿಗಲ್ಲ ಪಕ್ಷಕ್ಕೂ ಗೌರವ ಇಲ್ಲ ಎಂದಿದ್ದಾರೆ.