ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ ನಿರಾಣಿ ದೆಹಲಿ ಪ್ರಯಾಣ

Share

ಬೆಂಗಳೂರು,ಜು,೦೬:ನಾಯಕತ್ವ ಬದಲಾವಣೆ ಕೂಗು ಹೆಚ್ಚಾದ ಬೆನ್ನಲ್ಲೆ ಹೈಕಮಾಂಡ್ ಗಣಿ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರನ್ನು ಕರೆಸಿಕೊಂಡಿರುವುದು ರಾಜಕೀಯ ವಲಯದಲ್ಲಿ ರೆಕ್ಕೆ ಪುಕ್ಕಗಳು ಹೆಚ್ಚಾಗಿವೆ.
ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಈ ಭೇಟಿ ಹಲವು ವ್ಯಾಖ್ಯಾನಗಳಿಗೆ ದಾರಿ ನಿಡಿದಂತಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಲಾವ್ ಮೇರೆಗೆ ಇಂದು ಬೆಳಗಿನ ಜಾವ ಅವರು ದೆಹಲಿಗೆ ತೆರಳಿದ್ದಾರೆ.
ಇದು ಈಗ ರಾಜಕೀಯ ನಾಯಕರಲ್ಲಿ ಒಂದು ರೀತಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದರೆ ಮತ್ತೊಂದೆಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆತಂಕಕ್ಕೂ ಕಾರಣವಾಗಿದೆ ಎನ್ನಲಾಗಿದೆ. ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಒಂದು ತಂಡ ನಾಯಕತ್ವ ಬದಲಾವಣೆ ಮಾಡಲೇ ಬೇಕು ಎಂದು ಹಾದಿ ಬೀದಿಯಲ್ಲಿ ನೀಡುತ್ತಿರುವ ಹೇಳಿಕೆ ಬೆನ್ನಲ್ಲೇ ನಿರಾಣಿ ಅವರನ್ನು ಹೈಕಮಾಂಡ್ ಕರೆಸಿಕೊಂಡಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ,
ಯಾವ ಕಾರಣಕ್ಕಾಗಿ ಬರಲು ಹೇಳಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆದಿರುವ ಬೆನ್ನಲ್ಲೇ ಈ ವಿದ್ಯಮಾನ ಕುತೂಹಲ ಕೆರಳಿಸಿದೆಅಮಿತ್ ಶಾ ಅವರ ಜತೆ ನಿರಾಣಿ ಅವರ ಸಂಬಂಧ ಉತ್ತಮವಾಗಿದ್ದು, ಹಲವು ಬಾರಿ ಶಾ ಅವರನ್ನು ಭೇಟಿ ಮಾಡಿದ್ದರು. ಆದರೆ, ಅದು ರಾಜಕೀಯ ಭೇಟಿ ಅಲ್ಲ ಎಂದು ನಿರಾಣಿ ಹೇಳಿದ್ದಾರೆ. ಈ ಮಧ್ಯೆ ಅವರ ಹೆಸರೂ ಮುಖ್ಯಮಂತ್ರಿ ಹುದ್ದೆಗೂ ಕೇಳಿ ಬಂದಿತ್ತು. ಆದರೆ, ಅವರು ಅದನ್ನು ನಿರಾಕರಿಸಿದ್ದರು.ಈ ಬಾರಿಯ ಭೇಟಿಯಲ್ಲಿ ರಾಜ್ಯದ ರಾಜಕೀಯವ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇರಬಹುದು ಎಂದು ಮೂಲಗಳು ಹೇಳಿವೆ.

Girl in a jacket
error: Content is protected !!