ಬೆಳಗಾವಿ,ಡಿ,೨೧: ಮತಾಂತರ ನಿಷೇಧ ಕಾಯ್ದೆ ಸಂವಿಧಾನ ಬಾಹಿರವಾಗಿದೆ . ಈ ಕಾಯ್ದೆಯನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತದೆ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದು ರಾಜ್ಯಕ್ಕೆ ಒಂದು ಕಪ್ಪುಚುಕ್ಕೆ ಹೇಳಿದರು.
ಇಂದು ವಿಧಾನಸಭೆಯಲ್ಲಿ ಆಡಳಿತ ಪಕ್ಷ ಮತಾಂತರ ನಿಷೇಧ ಕಾಯ್ದೆಯನ್ನ ಮಂಡನೆ ಮಾಡಲಿದ್ದು, ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸರ್ಕಾರದವರು ರಾಜ್ಯದಲ್ಲಿ ಅಶಾಂತಿ ಮೂಡಿಸಲು ಮತಾಂತರ ನಿಷೇಧ ಕಾಯ್ದೆ ತರುತ್ತಿದ್ದಾರೆ. ಸಂವಿಧಾನದ ವಿರುದ್ಧವಾಗಿ ಇದನ್ನ ತೆಗೆದುಕೊಳ್ಳಲಾಗಿದೆ. ಸುಮ್ಮನೇ ಮಾನಸಿಕವಾಗಿ ಕ್ರೈಸ್ತರಿಗೆ ಹಿಂಸೆ ಕೊಡುವ ಕೆಲಸವಿದು ಇದರಿಂದ ಎಲ್ಲರಿಗೂ ಕಸಿವಿಸಿಯಾಗುತ್ತಿದೆ. ಮಾನಸಿಕವಾಗಿ ಹಿಂಸೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ಕಾನೂನು ಮಾಡುವುದು ಸರಿಯಲ್ಲ. ಇದನ್ನು ನಾವು ಖಂಡಿಸುತ್ತೇವೆ ಎಂದರು.
ಕಾಯ್ದೆ ಜಾರಿಯಾದರೇ ಹೂಡಿಕೆ ಮಾಡುವವರು ಬರಲ್ಲ ಇದು ರಾಜ್ಯಕ್ಕೆ ಕಪ್ಪು ಚುಕ್ಕೆಯಾಗಲಿದೆ. ಮೊಘಲರು ಬ್ರಿಟೀಷರ ಆಳ್ವಿಕೆಯಿತ್ತು. ಆದರೆ ಎಲ್ಲಿ ಮತಾಂತರವಾಯ್ತು. ಕರ್ನಾಟಕ ಶಾಂತಿಯ ಭೂಮಿ ಶಾಂತಿಯ ತೋಟ. ಶಾಂತಿ ಕದಡುವ ಕೆಲಸವನ್ನ ಬಿಜೆಪಿ ಮಾಡಬಾರದು. ಬಲವಂತ ಮತಾಂತರ ನಿಷೇದವಿದೆ. ಆದರೆ ಕ್ರೈಸ್ತ ಸಮುದಾಯದಲ್ಲಿ ಆತಂಕ ಮೂಡಿಸುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ. ಅಂಬೇಡ್ಕರ್ ಸಂವಿಧಾನಕ್ಕೂ ಇದು ಅನ್ವಯವಾಗಲ್ಲ ಎಂದರು.