ಮಂಗಳವಾರ ದೆಹಲಿಗೆ ತೆರಳಲಿರುವ ಬಿಜೆಪಿ ರೆಬಲ್ ನಾಯಕ ಯತ್ನಾಳ್ ಬಣ
by-ಕೆಂಧೂಳಿ
ಬೆಂಗಳೂರು, ಮಾ,09-ರಾಜ್ಯ ಬಿಜೆಪಿಯಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ಪರಿಹರಿಸಲು ರೆಬಲ್ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಬಣವನ್ನು ದೆಹಲಿಗೆ ಬರುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ಬುಲಾವ್ ನೀಡಿದ್ದಾರೆ.
ಶತಾಯ ಗತಾಯ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎನ್ನುವ ಹಠ ತೊಟ್ಟಿರುವ ಯತ್ನಾಳ್ ಬಣ ದಿನಕ್ಕೊಂದು ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿದ್ದು ಇದು ಪಕ್ಷದ ಮೇಲೆ ಪರಿಣಾಮ ಬೀಳುತ್ತಿದೆ,ಇದರಿಂದ ಪಕ್ಷದಲ್ಲಿ ಗೊಂದಲಗಳು ಸೇಷ್ಟಿಯಾಗುತ್ತಿವೆ,
ಯತ್ನಾಳ್ ಗೆ ಶಿಸ್ತು ಸಮಿತಿ ನೋಟೀಸ್ ನೀಡಿದ್ದರೂ ಕೂಡ ಅದಕ್ಕೂ ಡೋಂಟ್ ಕೇರ್ ಮಾಡದೆ ತಮ್ಮ ಬಂಡಾಯವನ್ನು ಮುಂದುವರೆಸಿರುವುದು ವರಿಷ್ಠರೊಗೂ ಇರಿಸಿ ಮುರಿಸು ಉಂಟಾಗಿದೆ.
ಇದೇ ವೇಳೆ ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಶಾ ಜೊತೆಗೆ ಅರವಿಂದ್ ಲಿಂಬಾವಳಿ ಕುದ್ದಾಗಿ ಮಾತುಕತೆ ನಡೆಸಿದ್ದರು ಈ ವೇಳೆ ದೆಹಲಿಗೆ ಬರುವಂತೆ ಸೂಚಿದ್ದಾರೆ ಎನ್ನಲಾಗಿದ್ದು ಮಂಗಳವಾರ ಯತ್ನಾಳ ಬಣ ದೆಹಲಿಗೆ ತೆರಳಲಿದೆ ಎನ್ನಲಾಗಿದೆ.