ಬಿಜೆಪಿ ರೆಬಲ್ ಪಡೆಯಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಸರು ಫೈನಲ್

Share

ಬಿಜೆಪಿ ರೆಬಲ್ ಪಡೆಯಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಸರು ಫೈನಲ್
by ಕೆಂಧೂಳಿ

ಬೆಂಗಳೂರು,ಜ,೩೧- ಬಿಜೆಪಿ ಬಣ ಬಡಿದಾಟ ದಿನಕ್ಕೊಂದು ರೂಪ ಪಡೆಯುತ್ತಿದ್ದರೆ, ಈಗ ಬಿಜೆಪಿ ರಾಜ್ಯಧ್ಯಾಕ್ಷ ಚುನಾವಣೆಯತ್ತ ಎಲ್ಲರ ಕಣ್ಣು ನೆಟ್ಟಿದೆ. ಈ ಹಿನ್ನೆಲೆಯಲ್ಲಿ ರೆಬಲ್ ಬಣ ಬಿ.ವೈ.ವಿಜಯೇಂದ್ರ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕು ಎನ್ನುವ ಕುರಿತು ಫೈನಲ್ ಮಾಡಿದೆಯಂತೆ.
ಈ ಬಗ್ಗೆ ಇಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಸಭೆ ಸೇರಿದ್ದ ರೆಬಲ್ ಕಮಲ ಪಡೆ ಯಾರನ್ನು ಇಳಿಸಿದರೆ ಗೆಲುವು ಸಾಧಿಸಬಹುದು ಎನ್ನುವ ಕುರಿತು ಚರ್ಚೆ ನಡೆಸಿ ಅಂತಿಮಗೊಳಿಸಿದ್ದಾರಂತೆ ಆದರೆ ಆ ಹೆಸರನ್ನು ಫೈನಲ್ ಮಾಡಲು ಇನ್ನೆರಡು ದಿನ ಬೇಕಂತೆ. ಹೈಕಮಾಂಡ್ ಜೊತೆ ಈ ರೆಬಲ್ ಪಡೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಿದೆ ಎನ್ನುತ್ತದೆ ಮೂಲಗಳು.


ಇಂದು ಸಭೆ ನಡೆಸಿದೆ. ಯತ್ನಾಳ್ ಬಣದ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಇಂದು ಸಭೆ ನಡೆದಿದೆ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್ ಸೇರಿದಂತೆ ಬಿಜೆಪಿಯ ಬಂಡಾಯ ನಾಯಕರು ಸಭೆಯಲ್ಲಿ ಹಾಜರಾಗಿದ್ದರು. ಈಗಾಗಲೇ ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಸ್ಥಾನ ಪಡೆಯಲು ತೊಡೆ ತಟ್ಟಿರುವ ಈ ಬಣವು ಪ್ರಬಲ ಅಭ್ಯರ್ಥಿಯನ್ನೇ ರಾಜ್ಯಾಧ್ಯಕ್ಷ ಚುನಾವಣೆಗೆ ಇಳಿಸಲು ಸಜ್ಜಾಗಿದೆ.

 


ಈ ಹಿನ್ನೆಲೆ ಇಂದಿನ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿವೆ. ವಿಜಯೇಂದ್ರ ಅವರ ಎದುರು ಚುನಾವಣೆಗೆ ಯಾರನ್ನು ಕಣ್ಣಕ್ಕಿಳಿಸಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆದಿದೆ. ಯತ್ನಾಳ್ ಬಣದಿಂದ ಅಭ್ಯರ್ಥಿ ಹೆಸರು ಇನ್ನೆರಡು ದಿನಗಳಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ ಯತ್ನಾಳ್ ಬಣ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಇಂದು ಅಥವಾ ನಾಳೆ ಯತ್ನಾಳ್ ಬಣದ ರೆಬೆಲ್ಸ್ ಎಲ್ಲರೂ ದೆಹಲಿಗೆ ಹಾರಲಿದ್ದು, ಹೈಕಮಾಂಡ್ ನಾಯಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ. ದೆಹಲಿಯಲ್ಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿ ಹೆಸರನ್ನು ಘೋಷಿಸುವುದಾಗಿಯೂ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ದೆಹಲಿಯಲ್ಲೇ ಅಭ್ಯರ್ಥಿ ಆಯ್ಕೆ ನಡೆಯಲಿದೆ. ಯಡಿಯೂರಪ್ಪ ಅವರನ್ನು ಬಿಟ್ಟರೆ ಬಿಜೆಪಿ ಉಳಿಯಲ್ಲ ಅನ್ನೋ ಕಾಲ ಹೋಯ್ತು. ಯಡಿಯೂರಪ್ಪ ಅವರು ಇಲ್ಲದಿದ್ರೂ ಬಿಜೆಪಿ ನಡೆಯುತ್ತೆ. ಈಗಿರುವ ಹಾಲಿ ರಾಜ್ಯಾಧ್ಯಕ್ಷರು ಉದ್ಧಟತನ ಮೆರೆಯುತ್ತಿದ್ದಾರೆ. ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲೂ ಇದೇ ನಡೆ ಪ್ರದರ್ಶಿಸಿದ್ದಾರೆ ಎಂದು ದೂರಿದ್ದಾರೆ.

Girl in a jacket
error: Content is protected !!