ಪಿಎಸ್ ಐ ನೇಮಕಾತಿಯಲ್ಲಿ ದೊಡ್ಡಮಟ್ಟದ ಅಕ್ರಮ,ಅಡಿಯೋ ರಿಲೀಜ್ ಮಾಡಿದ ಪ್ರಯಾಂಕ ಖರ್ಗೆ

Share

ಕಲಬುರಗಿ,ಏ.23-:ರಾಜ್ಯದಲ್ಲಿ ಪಿಎಸ್‍ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಕೈವಾಡವಿದ್ದು, ಭ್ರಷ್ಟಾಚಾರ ತಳಮಟ್ಟದಿಂದ ಮೇಲ್ಮಟ್ಟದವರೆಗೂ ಹಬ್ಬಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಕ್ರಮಕ್ಕೆ ಸಂಬಂಧಿಸಿದ ಆಡಿಯೋ ರಿಲೀಸ್ ಮಾಡಿ ಮಾತನಾಡಿದರು.

ಈ ಭ್ರಷ್ಟಾಚಾರ ಸಂಬಂಧ ಈವರೆಗೂ ಸಣ್ಣಪುಟ್ಟ ಮೀನುಗಳು ಮಾತ್ರ ಸಿಕ್ಕಿಬಿದ್ದಿವೆ. ಆದರೆ ಇದರಲ್ಲಿರುವ ದೊಡ್ಡ ದೊಡ್ಡ ತಿಮಿಂಗಲಗಳು ಸಿಕ್ಕಿಬಿದ್ದಿಲ್ಲ. ಪರೀಕ್ಷಾ ಮೇಲ್ವಿಚಾರಣೆ ನಡೆಸುತ್ತಿದ್ದ ನಾಲ್ವರು, ಮೂವರು ಮಧ್ಯವರ್ತಿಗಳು ಸೇರಿದಂತೆ ಕೆಲವೇ ಕೆಲವು ಮಂದಿಯನ್ನು ಬಂಧಿಸಲಾಗಿದೆ. ಆದರೆ ಈ ಭ್ರಷ್ಟಾಚಾರದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಕೈವಾಡವಿದೆ ಎಂದು ವಾಗ್ದಾಳಿ ನಡೆಸಿದರು.

ಮಹಂತೇಶ್ ಪಾಟೀಲ್ ಅಂಥವರು ಕೆಲಸ ಕೊಡಿಸುವವರಿಗೆ ಆರ್ಡರ್ ತಂದುಕೊಡುವಂತಹ ಕೆಲಸ ಮಾಡುತ್ತಿದ್ದರು. ಆದರೆ ತಪ್ಪಿತಸ್ಥರು ಇನ್ನು ಬಲೆಗೆ ಬಿದ್ದಿಲ್ಲ ಎಂದರು. ಸರ್ಕಾರ ಕೇವಲ ಪ್ರಚಾರಕ್ಕಾಗಿ ತನಿಖೆ ನಡೆಸಬಾರದು. ಈ ಹಿಂದಿನ ಕೆಲವು ಪ್ರಕರಣಗಳಲ್ಲಿನ ತನಿಖೆಯಂತೆ ಇದು ಆಗದಿರಲಿ ಎಂದ ಅವರು, ನೇಮಕಾತಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಲ್ಲಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಅವರನ್ನು, ತನಿಖೆ ನಡೆಯುತ್ತಿದ್ದರೂ ಅದೇ ಸ್ಥಾನದಲ್ಲಿ ಮುಂದುವರೆಸಲಾಗಿದೆ. ಇದರಿಂದ ತನಿಖೆಯ ದಿಕ್ಕು ತಪ್ಪುತ್ತದೆ ಎಂದು ಆಕ್ಷೇಪಿಸಿದರು.

ಪರೀಕ್ಷಾ ಕೇಂದ್ರ ನಿಗದಿ ಮಾಡುವುದು, ಯಾವ ಕೇಂದ್ರದಲ್ಲಿ ಯಾವ ಅಭ್ಯರ್ಥಿ ಪರೀಕ್ಷೆ ಬರೆಯಬೇಕು, ಯಾವ ಮೇಲ್ವಿಚಾರಕರು ಆ ಕೇಂದ್ರದ ಮೇಲ್ವಿಚಾರಣೆ ಹೊರಬೇಕು ಎಂಬ ಎಲ್ಲಾ ವಿಚಾರಗಳು ಪ್ರಾಧಿಕಾರದ ಹಂತದಲ್ಲಿ ನಿರ್ಧಾರಿತವಾಗಿ ಈ ಅವ್ಯವಹಾರ ನಡೆದಿದೆ ಎಂದು ಮಾಹಿತಿ ನೀಡಿದರು.

ಆಡಿಯೋದಲ್ಲಿ ದೊರೆತಿರುವ ಮಾಹಿತಿ ಪ್ರಕಾರ 545 ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಹೆದರಬೇಕಿಲ್ಲ. ಇದರಲ್ಲಿ ದೊಡ್ಡವರ ಕೈವಾಡವಿದೆ ಎಂಬುದು ತಿಳಿದುಬಂದಿದೆ. ಮಧ್ಯವರ್ತಿಗಳೊಂದಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿರುವವರು, ಇನ್ನಿಬ್ಬರಿಗೆ ಕೆಲಸ ಕೊಡಿಸುವ ಸಂಬಂಧ ಮಾತುಕತೆ ನಡೆಸಿದ್ದು, ಆಗ ಮಧ್ಯವರ್ತಿ ಈಗಾಗಲೇ ಲಿಸ್ಟ್ ಮುಗಿದಿದೆ. ಇನ್ನುಳಿದ 402 ಅಭ್ಯರ್ಥಿಗಳ ಪರೀಕ್ಷೆಯ ಲಿಸ್ಟ್ ಸಹ ಬಹುತೇಕ ಮುಗಿದಿದ್ದು, ತಡ ಮಾಡಿದ್ದೀರಿ ಎಂದಿರುವುದಲ್ಲದೆ ಬೇಗ ಹಾಲ್ ಟಿಕೆಟ್ ಸೇರಿದಂತೆ ಇನ್ನಿತರ ಮಾಹಿತಿ ಕೊಡಿ. ಹಣಕಾಸಿನ ವ್ಯವಹಾರವನ್ನು ಇತ್ಯರ್ಥ ಮಾಡಿ ವಿಳಂಬ ಮಾಡಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಈ ಬೃಹತ್ ಹಗರಣದಲ್ಲಿ ಎಂಎಲ್‍ಎ ಸೇರಿದಂತೆ ಬಹಳಷ್ಟು ಉನ್ನತ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅವರನ್ನು ಮೊದಲು ಒಳಗಡೆ ಹಾಕಿ. ನಾನೇನಾದರೂ ಇದರಲ್ಲಿ ಭಾಗಿಯಾಗಿದ್ದರೆ ನನ್ನನ್ನು ಸೇರಿಸಿ ಒಳಗಡೆ ಹಾಕಿ ಎಂದು ಹೇಳಿದರು.

Girl in a jacket
error: Content is protected !!