ಬೆಂಗಳೂರು, ಮೇ,13:ಮುಖ್ಯಮಂತ್ರಿ ಸುದ್ದಿಗೋಷ್ಠಿ ಕರೆದಿದ್ದಾರೆ ಎಂದರೆ ಬಹುತೇಕ ಸಾಕಷ್ಟು ನಿರೀಕ್ಷೆಗಳಿದ್ದವು ಕೋವಿಡ್ ಸಂಕಷ್ಟದಲ್ಲಿ ಲಾಕ್ ಡೌನ್ ಮಾಡಿದ ಈ ಹೊತ್ತಲ್ಲಿ ಏನಾದರೂ ಆರ್ಥಿಕ ಪ್ಯಾಕೇಜ್ ಪ್ರಕಟಿಸುತ್ತಾರೆ ಎನ್ನುವ ಎಲ್ಲಾ ಆಸೆಗಳಿಗೂ ತಣ್ಣೀರೆರಚಿದ್ದಾರೆ.
ಕನಿಷ್ಠ ಜನರ ಬಗ್ಗೆ ಅನುಕಂಪವೂ ಇಲ್ಲದ ಬಿ.ಎಸ್ ಯಡಿಯೂರಪ್ಪ ಜನರ ಸಮಸ್ಯೆಗಳ ಬಗ್ಗೆ ಸೌಜನ್ಯಕ್ಕೂ ಪ್ರಸ್ತಾಪ ಮಾಡದ ಅವರು ಕಠಿಣ ಕ್ರಮದಿಂದ ಕೊರೊನಾ ಸೋಂಕಿತರ ಪ್ರಮಾಣ ಇಳಿಮುಖವಾಗಿದೆ ಎಂದು ಹೇಳಿದರು.
ಇನ್ನೂ 18 ವರ್ಷದ ಮೇಲಿನ ಎಲ್ಲಾ ವಯೋಮಾನದವರಿಗೂ ವ್ಯಾಕ್ಸಿನ್ ಹಾಕಲಾಗುತ್ಯದೆ ಎಂದು ಪ್ರಕಟಿಸಿದ ಸರ್ಕಾರ ಈಗ ಗೊಂದಲಗಳ ಗೂಡಾದ ಕಾರಣ ಅದಕ್ಕೂ ತಣ್ಣೀರೆರಚಿ ಇನ್ನೂ ಮುಂದೆ 18 ರಿಂದ 44 ರವರೆಗಿನ ವಯಸ್ಸಿನ ವರಿಗೆ ವ್ಯಕ್ಸಿನ್ ಇಲ್ಲ ಎಂದಿರುವ ಅವರು 45 ವರ್ಷದ ಮೇಲ್ಪಟ್ಟವರಿಗೆ ಮಾತ್ರ ವ್ಯಾಕ್ಸಿನ್ ಲಸಿಕೆ ಎಂದು ಹೇಳುವ ಮೂಲಕ ತಮ್ಮ ವೈಫಲ್ಯಗಳನ್ನು ತೋರಿಸಿಕೊಂಡಿದ್ದಾರೆ.
ಆದರೆ ಸಿಎಂ ಪ್ರತಿ ಹೇಳಿಕೆಯಲ್ಲೂ ಗನಂದಾರಿ ಕೆಲಸ ಮಾಡಿದ್ದೇವೆ ಎನ್ನುವಂತೆ ನಾವು ಲಾಕ್ ಡೌನ್ ಮೂಲಕ ಕಠಿಣ ಕ್ರಮ ಕೈಗೊಂಡ ಕಾರಣ ಎಲ್ಲವೂ ಹತೋಟಿಗೆ ಬಂದಿದೆ ಎಂದಿದ್ದಾರೆ..
ಬೇರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ನಮ್ಮ ರಾಜ್ಯದಲ್ಲಿ ತಂದಿರುವ ಕ್ರಮಗಳು ಸೂಪರ್ ಎನ್ನುವ ರೀತಿಯಲ್ಲಿ ಬೆನ್ನುತಟ್ಟಿಕೊಂಡಿದ್ದಾರೆ.
ಆರ್ಥಿಕ ಪ್ಯಾಕೇಜ್ ಘೋಷಣಡ ಮಾಡುತ್ತೀರಾ ಎನ್ನು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ ಈಗಾಗಲೇ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎನ್ನುವ ಅವರ ನಿರ್ಲಕ್ಷ್ಯ ದ ಮಾತು ನಿಜಕ್ಕೂ ಈ ರಾಜ್ಯದ ಜನರ ದುರ್ದೈವವೇ ಸರಿ.
ಜೊತೆಗೆ ಸಚಿವರಾದ ಅರವಿಂದ ಲಿಂಬಾವಳಿ,ಸುಧಾಕರ್ ವಿವಿದ ಸಚಿವರು ಹಾಜರಿದ್ದರು