ನಾಯಕತ್ವ ಬದಲಾವಣೆ ಗೆ ಮುಂದಾದವರಿಗೆ ಬಿಎಸ್‌ವೈ ಕೊಟ್ಟ ಏಟು

Share

ಬೆಂಗಳೂರು,ಮೇ,೨೭: ಕಳೆದ ಮೂರು ದಿನಗಳಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ ಕುರಿತಂತೆ ಭಾರಿ ಸುದ್ದಿಯಲ್ಲಿದ್ದು ಇದಕ್ಕೆ ಸಂಬಧಿಸಿದಂತೆ ಪ್ರತಿಕ್ರಿಯಿಸಿರುವ ಬಿಎಸ್‌ವೈ ಯಾರೋ ಎಲ್ಲಿಗೋ ಹೋದವರಿಗೆ ಉತ್ತರ ಸಿಕ್ಕಿದೆ .ಅಲ್ಲಿಯೇ ಉತ್ತರ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ವಿರೋಧಿ ಗುಂಪಿಗೆ ಟಾಂಗ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿದ ಯಡಿಯುರಪ್ಪ,, ದೆಹಲಿಗೆ ಹೋಗಿ ಬಂದರೆ ಅರ್ಥವಿಲ್ಲ. ದೆಹಲಿಗೆ ಹೋದವರಿಗೆ ಉತ್ತರ ಕೊಟ್ಟು ಕಳಿಸಿದ್ದಾರೆ. ಕೊರೋನಾ ನಿಯಂತ್ರಿಸುವುದಷ್ಟೇ ನನ್ನ ಗುರಿ. ಸದ್ಯ ನನ್ನ ಆದ್ಯತೆ ಕೋವಿಡ್ ನಿಯಂತ್ರಣಕ್ಕಷ್ಟೇ ಆಗಿದೆ. ಬೇರೆ ವಿಷಯ ನನ್ನ ಮುಂದೆ ಇಲ್ಲ. ಎಂದು ಹೇಳುವ ಮೂಲಕ ವಿರೋಧಿಗಳಿಗೆ ಟಕ್ಕರ್ ಕೊಟ್ಟಿದ್ದಾರೆ.
ಕೋವಿಡ್ ಎದುರಿಸುವುದು ಮೊದಲ ಕೆಲಸ, ಬೇರೆ ಯಾವುದರ ಬಗ್ಗೆಯೂ ನನ್ನ ಗಮನ ಇಲ್ಲ. ಒಟ್ಟಾಗಿ ಸಚಿವರು, ಶಾಸಕರು ಕೋವಿಡ್ ಎದುರಿಸಬೇಕು ಎಂದು ಅವರು ತಿಳಿಸಿದ್ದಾರೆ.

Girl in a jacket
error: Content is protected !!