ಬೆಂಗಳೂರು,ಮೇ೧೯: ಈ ದೇಶದಲ್ಲಿ ಬಂದೊದಗಿದ ಕೊರೊನಾ ಮಹಾಮಾರಿಗೆ ದಿನನಿತ್ಯ ಸಾವಿರಾರು ಮಂದಿ ಬಲಿಯಾಗುತ್ತಿದ್ದಾರೆ ಬದುಕೆ ದುಸ್ತರವಾದ ಈ ಹೊತ್ತಿನಲ್ಲಿ ರಜಕೀಯ ಪಕ್ಷಗಳ ಕೆರಚಾಟ ಅಗತ್ಯವಿದೆಯೇ.
ರಾಜಕೀಯ ಪಕ್ಷಗಳ ನಾಯಕರಿಗೆ ಈ ದೇಶದ ಭವಿಷ್ಯ ಈ ದೇಶದ ಜನರ ಸಂಕಷ್ಟಗಳು ಅರಿವು ಇದ್ದಿದ್ದರೆ ಈ ಸಮಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ಪರಸ್ಪರ ವಾದ ಪ್ರತಿವಾದಗಳಲ್ಲಿ ತೊಡಗುತ್ತಿರಲಿಲ್ಲ ರಾಜಕಾರಕ್ಕೆ ಇಳಿಯುತ್ತಿರಲಿಲ್ಲ.
ದೇಶದ ಜನರ ಚಿತ್ತ ಬೇರೆಡೆಗೆ ಎಳೆಯಲು ರಾಜಕಾರಣಿಗಳು ಈ ಹೊತ್ತಿನಲ್ಲಿ ಇಂತ ವಾಕ್ಸಮರಕ್ಕೇ ಇಳಿದಿದ್ದಾರೆಯೇ ಎನ್ನುವ ಅನುಮಾನಗಳು ಶುರುವಾಗುತ್ತವೆ ಯಾಕೆಂದರೆ ಜನರಬದುಕೆ ದುಸ್ತರವಾಗಿ ಜೀವ ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನದಲ್ಲಿರುವಾಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಈ ವಾಕ್ಸಮರ ಯಾಕೆ ಬೇಕಿತ್ತು ಏನೇ ಇರಬಹುದು ಆದರೆ ಇಂತ ಹೊತ್ತಿನಲ್ಲಿಯೂ ರಾಜಕಾರಣದ ಅಗತ್ಯವೇಕೆ?
ಇತಿಹಾಸವೇ ತಿರುಗಿ ನೋಡುವಂತೆ ರೈತ ಕಾಯ್ದೆಗಳ ಬಿಲ್ ವಿರೋಧಿಸಿ ರೈತ ಸಂಘಟನೆಗಳು ನಡೆಸಿದ ಪ್ರತಿಭಟನೆಗೆ ಸೊಪ್ಪು ಹಾಕದ ಕೇಂದ್ರ ಸರ್ಕಾರ ಟೂಲ್ ಕಿಟ್ ವಿವಾದ ಕುರಿತು ಈಗ ಮತ್ತೊಮ್ಮೆ ಚರ್ಚೆಯನ್ನು ಮುನ್ನಲೆಗೆ ತಂದಿವೆ.
ಕಾಂಗ್ರೆಸ್ ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ಪ್ರಧಾನಮಂಂತ್ರಿ ಮೋದಿಯವರ ವರ್ಚಸ್ಸಿಗೆ ಮಸಿ ಬಳಿಯಲು ಬಳಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಅಂತಹ ಟೂಲ್‌ಕಿಟ್ ಇಲ್ಲ. ಅದು ಕೇವಲ ಬಿಜೆಪಿಯ ಕಪೋಲಕಲ್ಪಿತ ಪ್ರಚಾರ ಎಂದಿದೆ.
ಟೂಲ್‌ಕಿಟ್ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರಾದ ಜೆ.ಪಿ. ನಡ್ಡಾ, ಸಂಭೀತ್ ಪಾತ್ರಾ ವಿರುದ್ಧ ಪೊಲೀಸರಿಗೆ ದೂರು ನೀಡಲು ಕಾಂಗ್ರೆಸ್ ನಿರ್ಧರಿಸಿದೆ.ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು, ಕಾಂಗ್ರೆಸ್ ಪಕ್ಷವು ಕೋವಿಡ್ ಪರಿಸ್ಥಿತಿಯನ್ನು ಕೆಟ್ಟದಾಗಿ ನಿರ್ವಹಿಸಲಾಗಿದೆ ಎಂದು ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದ್ದರು. ಜೊತೆಗೆ ಕೊರೊನಾವೈರಸ್‌ನ ಹೊಸ ರೂಪಾಂತರವನ್ನು ?ಮೋದಿ ತಳಿ? ಎನ್ನುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದೂ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಇದು ಸುಳ್ಳು. ಪಾತ್ರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಹೇಳಿದೆ.
ಬಿಜೆಪಿಯು ಕೋವಿಡ್-೧೯ ಕಳಪೆ ನಿರ್ವಹಣೆಯ ಬಗ್ಗೆ ಸುಳ್ಳು ಟೂಲ್‌ಕಿಟ್ ಪ್ರಚಾರ ಮಾಡುತ್ತಿದೆ ಮತ್ತು ಎಐಸಿಸಿ ಸಂಶೋಧನಾ ಇಲಾಖೆ ವಿರುದ್ಧ ಆರೋಪಿಸುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ವಿರುದ್ಧ ಎಫ್‌ಐಆರ್ ದಾಖಲಿಸುತ್ತೇವೆ. ದೇಶವು ಕೋವಿಡ್‌ನಿಂದಾಗಿ ತತ್ತರಿಸುತ್ತಿರುವ ಹೊತ್ತಿನಲ್ಲಿ, ಪರಿಹಾರ ಕಾರ್ಯಾಚರಣೆ ನಡೆಸುವ ಬದಲು ಬಿಜೆಪಿಯು ನಾಚಿಕೆಯಿಲ್ಲದೆ ಸುಳ್ಳು ಪತ್ರಗಳನ್ನು ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಮತ್ತು ಎಐಸಿಸಿ ಸಂಶೋಧನಾ ವಿಭಾಗದ ರಾಜೀವ್ ಗೌಡ ತಿಳಿಸಿದ್ದಾರೆ.
ಕೊರೋನಾ ಪರಿಸ್ಥಿತಿ ನಿರ್ವಹಿಸಲು ವಿಫಲಗೊಂಡಿರುವ ಸರ್ಕಾರ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಟೂಲ್ ಕಿಟ್ ನಾಟಕವಾಡುತ್ತಿದೆ. ಬಿಜೆಪಿಯವರು ಸೃಷ್ಟಿಸಿರುವ ಈ ನಕಲಿ ಟೂಲ್ ಕಿಟ್ ನ್ನು ನೋಡಿದರೆ ಯಾರಾದರೂ ನಗುತ್ತಾರೆ. ಶೀಘ್ರದಲ್ಲೇ ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲಾಗುತ್ತದೆ ಎಂದು ಹೇಳಿದ್ದಾರೆ.