ದೇವೇಗೌಡರನ್ನು ಭೇಟಿಮಾಡಿ ಆರ್ಶೀವಾದ ಪಡೆದ ಸಿಎಂ ಬೊಮ್ಮಾಯಿ

Share

ಬೆಂಗಳೂರು,ಆ,01:ಮಾಜಿ ಪ್ರಧಾನಿ ರಾಜ್ಯದ ಹಿರಿಯ ರಾಜಕಾರಣಿ ಎಚ್.ಡಿ.ದೇವೇಗೌಡ ಅವರನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು.

ಅವರ ನಿವಾಸಕ್ಕೆ ತೆರಳಿ ದೇವೇಗೌಡರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಮಾಜಿ ಸಚಿವರುಗಳಾದ ಸೋವಣ್ಣ, ರೇವಣ್ಣ ಅವರು ಮುಖ್ಯಮಂತ್ರಿ ಜೊತೆಗಿದ್ದರು.ಭೇಟಿ ಬಳಿಕ ಮಾತನಾಡಿದ ಸಿಎಂ, ನನ್ನ ತಂದೆ ಎಸ್.ಆರ್.ಬೊಮ್ಮಾಯಿ ಜೊತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಒಡನಾಟ ಹೊಂದಿದ್ದರು. ನಾನು ಅವರಿಂದ ಇಂದು ಆಶೀರ್ವಾದ, ಮಾರ್ಗದರ್ಶನ ಪಡೆದಿದ್ದೇನೆ. ದೇವೇಗೌಡರು ಅನೇಕ ಸಂಗತಿಗಳನ್ನು ಮೆಲುಕು ಹಾಕಿದ್ದಾರೆ ಎಂದು ತಿಳಿಸಿದರು.

ದೇವೇಗೌಡರು ಸಾಕಷ್ಟು ಹಿರಿಯರು, ಅನುಭವಿಗಳು ಆಡಳಿತಕ್ಕೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಅವರ ಪತ್ನಿ ಚನ್ನಮ್ಮ ತಾಯಿಯ ಆಶೀರ್ವಾದ ಕೂಡ ಪಡೆದಿದ್ದೇನೆ. ನಾನು ದೇವೇಗೌಡರ ಗರಡಿಯಲ್ಲೇ ಬೆಳೆದವನು. ಮುಖ್ಯಮಂತ್ರಿಯಾಗಿದ್ದಕ್ಕೆ ಸಾಕಷ್ಟು ಖುಷಿ ವ್ಯಕ್ತಪಡಿಸಿದರು. ಖುಷಿಯಿಂದ ನನಗೆ ಆಶೀರ್ವಾದ ಮಾಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದರು.
ದೇವೇಗೌಡರು ಮಾತನಾಡಿ ಎಸ್​​.ಆರ್​.ಬೊಮ್ಮಾಯಿ ಅವರೊಂದಿಗಿನ ಸಂಬಂಧವನ್ನು ಮೆಲುಕು ಹಾಕಿದರು. ಸಿಎಂ ತಂದೆ ನಾನು ಒಟ್ಟಿಗೆ‌ ಕೆಲಸ ಮಾಡಿದ್ದೆವು. ಅದೊಂದು ಕಾಲ, ಅವರೊಟ್ಟಿಗೆ ನಾವಿದ್ದೆವು. ಅವರ ತಂದೆ ನಾವು ಹೇಗೆ ಕೆಲಸ ಮಾಡಿದ್ದೇವೆ ಎಂಬ ಬಗ್ಗೆ ಬಸವರಾಜ ಬೊಮ್ಮಾಯಿಗೆ ಗೊತ್ತಿದೆ. ಅವರ ತಂದೆ ಮತ್ತು ಬಸವರಾಜ್ ಇಬ್ಬರು ನಮ್ಮ ಜತೆ ಕೆಲಸ ಮಾಡಿದ್ದಾರೆ ಎಂದರು.

ಇನ್ನು ವಯಸ್ಸಿನ ಕಾರಣ ನೀಡಿ ಸಿಎಂ ಸ್ಥಾನದಿಂದ ಬಿ.ಎಸ್​.ಯಡಿಯೂರಪ್ಪರನ್ನು ಕೆಳಗಿಳಿದರ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡರು, ಯಡಿಯೂರಪ್ಪ ತೆಗೆಯುವಂತೆ ನಾವು ಹೇಳಿಲ್ಲ. ಕೇಂದ್ರದವರು 75 ವರ್ಷ ಆದ ಮೇಲೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಯಡಿಯೂರಪ್ಪಗೆ ವಿಶೇಷ ಸಂದರ್ಭದಲ್ಲಿ ಎರಡು ವರ್ಷ ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ಕೇಂದ್ರದವರು ರಾಜೀನಾಮೆ ಕೊಡಲು ಹೇಳಿ, ಬೊಮ್ಮಯಿನ ಸಿಎಂ ಮಾಡಿದ್ದಾರೆ. ಬೊಮ್ಮಾಯಿ ಎರಡು ವರ್ಷ ಪೂರೈಸಲು ನಮ್ಮಿಂದ ಯಾವುದೇ ತೊಂದರೆ ಇಲ್ಲ. ಎಲ್ಲರೂ ಮುಖ್ಯಮಂತ್ರಿ ಆಗಲೂ ಸಾಧ್ಯವಿಲ್ಲ ಎಂದರು.

ರಾಜಕಾರಣದಲ್ಲಿ ವಯಸ್ಸು ಮುಖ್ಯವಲ್ಲ ಎಂದು ದೇವೇಗೌಡರು ಪ್ರತಿಪಾದಿಸಿದರು. ನಾವು ಮಹಾಭಾರತದ ಘಟನೆ ನೆನಪಿಸಿಕೊಳ್ಳಬೇಕು. ಭೀಷ್ಮನಿಗೆ ವಯಸ್ಸಾಗಿದ್ದರೂ 10 ದಿನ ಯುದ್ಧ ಮಾಡಿದ. ಅದೇ ಕರ್ಣ ಒಂದೂವರೆ ದಿನ ಅಷ್ಟೇ ಯುದ್ಧ ಮಾಡಿದ. ವಯಸ್ಸು ಮುಖ್ಯ ಅಲ್ಲ ರಾಜಕಾರಣ ಮಾಡಲು ಜನರ ಕೆಲಸ ಮಾಡಲು ಉತ್ಸಾಹ ಮುಖ್ಯ. ವಯಸ್ಸು ಇದೆ ಎಂದು ಮನೆಯಲ್ಲಿ ಮಲಗಿಕೊಂಡ್ರೆ ಪ್ರಯೋಜನವೇನು. ಉತ್ಸಾಹದಲ್ಲಿ ಜನರ ಕೆಲಸ ಮಾಡುವುದು ಮುಖ್ಯ. ರಾಜಕಾರಣಕ್ಕೆ ವಯಸ್ಸು ಮುಖ್ಯವಲ್ಲ ಎಂದು ಪುನರುಚ್ಚಿಸಿದರು.
ಯಡಿಯೂರಪ್ಪ ಅವರನ್ನ ದೂರ ಇಟ್ಟು ಸರ್ಕಾರ ರಚನೆ ಮಾಡುವುದು ಕಷ್ಟ. ಈ ಸರ್ಕಾರಕ್ಕೆ ಕಷ್ಟಕಾಲ ಬಂದ್ರೆ ನಾನು ಸಪೋರ್ಟ್ ಮಾಡ್ತೀನಿ. ಅವಧಿಗೂ ಮೊದಲೇ ಚುನಾವಣೆಗೆ ಹೋಗುವ ಆಸೆ ನಮಗೆ ಇಲ್ಲ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಮುಗಿದ ಬಳಿಕ ವಿಧಾನಸಭಾ ಚುನಾವಣೆ, ಅವಧಿಗೂ ಮೊದಲೇ ಚುನಾವಣೆ ಬರಲ್ಲ ಎಂದರು. ಸಿದ್ದರಾಮಯ್ಯ ನನ್ನ ಶಿಷ್ಯ ಎಂದು ಹೇಳಲ್ಲ, ನಾಯಕರಾಗಿ ಬೆಳೆದಿದ್ದಾರೆ. ಅವರು ನಾಯಕರು ಎಂದು ಇದೇ ವೇಳೆ ಹೇಳಿದರು.

Girl in a jacket
error: Content is protected !!