ಬೆಂಗಳೂರು,ಆ,04: ಈ ಬಾರಿ ಸಚಿವ ಸಂಪುಟ ರಚನೆಯಲ್ಲಿ ಡಿಸಿಎಂ ಸ್ಥಾನ ಇರುವುದಿಲ್ಲಮತ್ತು ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಈಗಾಗಲೇ ಸಚಿವರ ಪಟ್ಟಿ ಅಂತಿಮವಾಗಿದೆ.ಈ ಬಾರಿ ಡಿಸಿಎಂ ಸ್ಥಾನ ಇರುವುದಿಲ್ಲ. 3 ದಲಿತ 1 ಎಸ್.ಟಿ , ಮಹಿಳೆಗೆ ಸ್ಥಾನ ನೀಡಲಾಗಿದೆ. ಲಿಂಗಾಯಿತ 8, ಒಬಿಸಿಗೆ 7, ಒಕ್ಕಲಿಗೆ ಸಮುದಾಯಕ್ಕೆ 7 ಸ್ಥಾನ ನೀಡಲಾಗಿದೆ. ಒಟ್ಟು 29 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.
ನಾನು ಸಿಎಂ ಆದ ಬಳಿಕ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ. ರೈತ ಮಕ್ಕಳಿಗಾಗಿ ಯೋಜನೆ ಘೋಷಣೆ ಮಾಡಿದ್ದೇನೆ ಎಂದರು.