ಜೆ.ಎಚ್.ಪಟೇಲ್ ಸಿಎಂ ಆದ ಘಟನೆಯ ನೆನಪು…

Share

ದೇವೇಗೌಡರು ಪ್ರಧಾನಿ ಪಟ್ಟ ಏರುವುದು ಖಚಿತವಾಗುತ್ತಿದ್ದಂತೆ ರಾಜ್ಯದಲ್ಲಿ ಅವರ ಉತ್ತರಾಧಿಕಾರಿಯಾಗಲು ನಡೆದ ಆ ಘಟನಾವಳಿಗೆ ಇಂದಿಗೆ ೨೫ ವರ್ಷವಾಗಿದೆ ಅದರ ನೆನಪು ಮತ್ತು ಅಂದು ನಡೆದ ಆ ರಾಜಕೀಯ ನಡುವಳಿಗಳ ಕುರಿತು ಹಿರಿಯ ಪತ್ರಕರ್ತರಾದ ಸಿ. ರುದ್ರಪ್ಪ ಅವರು ಕಟ್ಟಿಕೊಟ್ಟಿದ್ದಾರೆ.

ಸಿ. ರುದ್ರಪ್ಪ.ಹಿರಿಯ ಪತ್ರಕರ್ತರು

ಇಪ್ಪತ್ತೈದು ವರ್ಷಗಳ ಹಿಂದಿನ ಇಂದಿನ ಕಾಲಮಾನ ರಾಜ್ಯ ರಾಜಕಾರಣದಲ್ಲಿ ಒಂದು ಪ್ರಮುಖ ಕಾಲಘಟ್ಟ.ಕನ್ನಡಿಗರೊಬ್ಬರು ಪ್ರಧಾನಿ ಪಟ್ಟಕ್ಕೇರಿದ ಕ್ಷಣ.ಮುಖ್ಯಮಂತ್ರಿಯಾಗಿದ್ದ ಎಚ್ ಡಿ ದೇವೇಗೌಡರು ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆ ಅವರ ಉತ್ತರಾಧಿಕಾರಿಯಾಗಲು ನಡೆದ ಪೈಪೋಟಿ,ದೇವೇ ಗೌಡರ ಅರ್ಹತೆ ಬಗ್ಗೆ ರಾಮಕೃಷ್ಣ ಹೆಗಡೆಯವರ “ಹಗುರವಾದ”ಮಾತು ,ಹೆಗಡೆಯವರ ಉಚ್ಛಾಟನೆ ..ಇವೆಲ್ಲಾ ರಾಜ್ಯ ರಾಜಕಾರಣದ ಮೇಲೆ ದೂರಗಾಮಿ ಪರಿಣಾಮವನ್ನು ಬೀರಿದ ಘಟನಾವಳಿಗಳು.ಈ ಪೈಕಿ ನೂತನ ಮುಖ್ಯಮಂತ್ರಿ ಆಯ್ಕೆ ಸಂದರ್ಭದಲ್ಲಿ ರಾಜಕೀಯ ಬೃಹನ್ನಾಟಕವೇ ನಡೆಯಿತು.
ದೇವೇ ಗೌಡರು ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆ ರಾಜ್ಯದಲ್ಲಿ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ದೆಹಲಿ ವಲಯದಿಂದ ಮೊದಲು ಕೇಳಿಬಂದ ಹೆಸರು ಸಿದ್ದರಾಮಯ್ಯನವರದ್ದು.ಆದರೆ ಇದಕ್ಕೆ ಜೆ ಎಚ್ ಪಟೇಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ದೆಹಲಿಯ ಕರ್ನಾಟಕ ಭವನದಲ್ಲಿ ಹಿರಿಯ ನಾಯಕರ ಅನೌಪಚಾರಿಕ ಮಾತುಕತೆ ಸಂದರ್ಭದಲ್ಲಿ ಸಿದ್ದರಾಮಯ್ಯ ತಮ್ಮನ್ನು ಮುಖ್ಯಮಂತ್ರಿ ಮಾಡುವಂತೆ ಮನವಿ ಮಾಡಿದರು.ಆಗ ಕೆಂಡಾಮಂಡಲರಾದ ಪಟೇಲರು”ನೀನು ಎಷ್ಟು ದಿನದಿಂದ ನಮ್ಮ ಪಾರ್ಟಿಯಲ್ಲಿ ಇದ್ದೀಯ.ನಾನು ನಿನಗಿಂತ ಸೀನಿಯರ್.ನಾನು ಈಗ ಡೆಪ್ಯುಟಿ sಸಿಎಂ.ಆದ್ದರಿಂದ ಈಗ ಸ್ಥಾನಕ್ಕೆ ನಾನೇ ನ್ಯಾಚುರಲ್ ಚಾಯ್ಸ್‌ಎಂದು ಕೋಪ-ತಾಪ ಪ್ರದರ್ಶಿಸಿದರಂತೆ.ನಂತರ ಬೆಂಗಳೂರಿನಲ್ಲಿ ನೂತನ ನಾಯಕನ ಆಯ್ಕೆಗೆ ಜನತಾ ದಳ ಹಿರಿಯ ನಾಯಕರ ಸಭೆ ವಿಧಾನ ಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಆರಂಭವಾಯಿತು .ಶರದ್ ? ಯಾದವ್ ವೀಕ್ಷಕರಾಗಿ ಆಗಮಿಸಿದ್ದರು.ಪಟೇಲ್ ಮತ್ತು ಸಿದ್ದರಾಮಯ್ಯ ಇಬ್ಬರೂ ಪಟ್ಟು ಸಡಿಲಿಸಲಿಲ್ಲ.ಹಲವು ಸುತ್ತಿನ ತೆರೆಮರೆಯ ಕಸರತ್ತುಗಳ ನಂತರವೂ ಯಾವುದೇ ನಿರ್ಧಾರ ಸಾಧ್ಯವಾಗಲಿಲ್ಲ .ಗದ್ದಲದ ನಡುವೆ ಸಭೆ ಬರ್ಖಾಸ್ತುಗೊಂಡಿತು.

ಕೋಪದಿಂದ ಬುಸುಗುಡುತ್ತಾ ಹೊರಗೆ ಬಂದ ಪಟೇಲರು ಸೀದಾ ತಮ್ಮ ಟನಿವಾಸಕ್ಕೆ ತೆರಳಿದರು ಸಂಜೆಯಾದರೂ ಶಾಸಕಾಂಗ ಪಕ್ಷದ ಸಭೆ ಸಮಾವೇಶಗೊಳ್ಳುವ ಯಾವ ಲಕ್ಷಣಗಳೂ ಕಾಣಲಿಲ್ಲ.ನಾವು ವರದಿಗಾರರು ಸಮ್ಮೇಳನ ಸಭಾಂಗಣವನ್ನು ಬಿಟ್ಟು ಕದಲಲಿಲ್ಲ.ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ವಾರ್ತಾ ಇಲಾಖೆಯ ಅಧಿಕಾರಿಗಳು ರಾತ್ರಿ ಏಳೂವರೆ ಸುಮಾರಿಗೆ ವಿಧಾನ ಸೌಧದ ನೆಲ ಮಹಡಿಯ ಬಾಂಕ್ವೆಟ್ ಹಾಲ್ ನಲ್ಲಿ ಬಿಸಿ ಬಿಸಿ ಉಪ್ಪಿಟ್ಟು ಕಾಫಿ ವ್ಯವಸ್ಥೆ ಮಾಡಿದರು.ನಾವು ವಾಪಾಸ್ ಬರುವುದರೊಳಗಾಗಿ ಶಾಸಕಾಂಗ ಪಕ್ಷದ ಸಭೆ ಕೇವಲ ಹತ್ತು ನಿಮಿಷದ ಮಟ್ಟಿಗೆ ಔಪಚಾರಿಕವಾಗಿ ನಡೆದು ಪಟೇಲರನ್ನು ನೂತನ ನಾಯಕರನ್ನಾಗಿ ಘೋಷಿಸಿ ಬಿಟ್ಟಿತ್ತು.(ಎಂ ಸಿ ನಾಣಯ್ಯ ಮತ್ತು ಎಂ ಪಿ ಪ್ರಕಾಶ್ ಹಿರಿಯ ನಾಯಕರ ಸೂಚನೆ ಮೇರೆಗೆ ಪಟೇಲರನ್ನು ಮನವೊಲಿಸಿ ಕರೆದುಕೊಂಡು ಬಂದಿದ್ದರಂತೆ).ಪಟೇಲರು ತಮ್ಮ ನಿವಾಸಕ್ಕೆ ತೆರಳಿ ಬಿಟ್ಟಿದ್ದರು.ನೂತನ ನಾಯಕರಾಗಿ ಆಯ್ಕೆಯಾಗುತ್ತಿದ್ದಂತೆ ಅವರು ಪತ್ರಕರ್ತರೊಂದಿಗೆ ಮಾತನಾಡುವುದು ವಾಡಿಕೆ.ಆದರೆ ಅದು ನಮಗೆ ತಪ್ಪಿ ಹೋಗಿತ್ತು.


ದೇವೇಗೌಡರ ಕೃಪೆಯಿಂದಾಗಿ ಸಿದ್ದರಾಮಯ್ಯನವರಿಗೆ ಬಹುಮತದ ಬೆಂಬಲವಿತ್ತು.ಆದರೆ ಹೆಗ್ದೆಯವರಿಂದಾಗಿ ಪಟೇಲರು ಮುಖ್ಯಮಂತ್ರಿಯಾದರು ಎಂಬ ಅಭಿಪ್ರಾಯ ಸಾಮಾನ್ಯವಾಗಿತ್ತು.(ಹೆಗಡೆಯವರ ಸ್ನೇಹಿತೆ ಪ್ರತಿಭಾ ಪ್ರಹ್ಲಾದ್ ಕೂಡ ಕಳೆದ ವರ್ಷ ಹಿರಿಯ ಪತ್ರಕರ್ತರೊಬ್ಬರು ಫೇಸ್ ಬುಕ್ ನಲ್ಲಿ ಪಟೇಲರ ಬಗ್ಗೆ ಬರೆದ ಲೇಖನಕ್ಕೆ ಪ್ರತಿಕ್ರಿಯಿಸಿದ್ದರು.
ಆದರೆ ನಿಜವಾದ ಸಂಗತಿ ಬೇರೆಯೇ ಆಗಿತ್ತು ಎಂಬುದು ದೇವೇ ಗೌಡರು ಮತ್ತು ಎಂ ಸಿ ನಾಣಯ್ಯನವರ ಹೇಳಿಕೆ ಅಥವಾ ಲೇಖನದಿಂದ ಸ್ಪಷ್ಟವಾಗುತ್ತದೆ.೨೦೧೮ ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನ್ಯೂಸ್ ೧೮ ಣv ಚಾನೆಲ್ ಪ್ರಧಾನ ಸಂಪಾದಕ ಂಟಿಚಿಟಿಣhಚಿ ಅhiಟಿivಚಿಡಿ ಅವರಿಗೆ ನೀಡಿದ ಸಂದರ್ಶನದಲ್ಲಿ ದೇವೇ ಗೌಡರು ಹೀಗೆ ಹೇಳಿದ್ದಾರೆ -“ನಾನು ಪ್ರೈಮ್ ಮಿನಿಸ್ಟರ್ ಆಗಿ ಹೋದಾಗ ಈ ಮನುಷ್ಯನಿಗೆ ತಾನು ಮುಖ್ಯಮಂತ್ರಿ ಆಗಬೇಕೆಂಬ ವ್ಯಾಮೋಹ ಶುರುವಾಯಿತು.ಕರ್ನಾಟಕ ಭವನದಲ್ಲಿ ಒಂದು

ಮಾತುಕತೆಯಾಯಿತು.ನಾನು,ಬೊಮ್ಮಾಯಿ,ಶರದ್ ಯಾದವ್ ಜೊತೆಗೆ ಕೂತಿದ್ದೆವು.ಶರದ್ ಯಾದವ್ ಗೆ ಸಿದ್ದರಾಮಯ್ಯನವರನ್ನ ಮುಖ್ಯಮಂತ್ರಿ ಮಾಡಬೇಕೆಂಬ ಆಸೆಯಿತ್ತು.ಆಗ ನಾನು ಇದು ಎಲ್ಲಪ್ಪಾ ಸಾಧ್ಯ?೩೬ ಲಿಂಗಾಯತ ಶಾಸಕರಿದ್ದಾರೆ.ನಾಲ್ಕು ಜನ ಕುರುಬರಿದ್ದಾರೆ.ಆಂಟಿ ಡಿಫೆಕ್ಸನ್ ಲಾ ಕೂಡಾ ಇಲ್ಲ.ಹೆಗಡೆಯವರಿಗೆ ಇನ್ನೂ ಸಿಟ್ಟು ಇದೆ.ಈ ಸರ್ಕಾರವನ್ನ ತೆಗೀಲಿಕ್ಕೆ ಅವರು ಕಣ್ಣು ಇಟ್ಟುಕೊಂಡಿದ್ದಾರೆ.ಕೈ ಮುಗೀತೇನೆ.ಆಗೋದಿಲ್ಲಾ ಅಂತ ನಾನು ಹೇಳಿದೆ.ಈ ಮನುಷ್ಯನಿಗೆ(ಸಿದ್ದರಾಮಯ್ಯ)ಮುಖ್ಯಮಂತ್ರಿ ಆಗಲೇಬೇಕೆಂಬ ಹಠ.ನೀನು ಆಅಒ ಆಗು ಮುಂದೆ ಒಳ್ಳೇ ಕಾಲ ಬರುತ್ತೆ ಅಂತ ಹೇಳಿದೆ.ಆದರೂ ನನ್ನ ಮಾತು ಕೇಳಲಿಲ್ಲ.ಮತ್ತೊಂದು ದಿನ ಕರ್ನಾಟಕ ಭವನದಲ್ಲಿ ಮಾತುಕತೆಗೆ ಸೇರಿದೆವು.ನಾನು ಆಗ ಡಿಜೈನೇಟಡ್ ಪಿ ಎಂ ಆಗಿದ್ದೆ.ಆದ್ದರಿಂದ ನನಗೆ ಸೆಕ್ಯೂರಿಟಿ ನೀಡಿದ್ದರು.ಕರ್ನಾಟಕ ಭವನಕ್ಕೆ ಪೋಲೀಸರ ಕಾವಲು ಹಾಕಿದ್ದರು.ನಾನು ಮತ್ತು ಸಿದ್ದರಾಮಯ್ಯ ಒಂದು ಕಡೆ ಕೂತಿದ್ದೆವು.ಪಟೇಲರು ಕೂಡ ಇದ್ದರು.ಚರ್ಚೆ ಕಾವೇರುತ್ತಿದ್ದಂತೆ ಪಟೇಲ್ ಏಕಾಏಕಿ ತಮ್ಮ ರೂಮಿಗೆ ಹೋಗಿ ಎರಡು ಪೆಗ್ ಹಾಕಿಕೊಂಡು ಬಂದು ಪಾದರಕ್ಷೆಯನ್ನು ಕೈಯಲ್ಲಿ ಹಿಡಿದು ನಿಂತುಕೊಂಡರು.ಆಗ  ಆಫೀಸರ್ ಉಪಾಧ್ಯಾಯ ಎಂಬುವವರು ಪಟೇಲರ ಕೈ ಹಿಡಿದುಕೊಂಡರು.ಅರ್ಥ ಮಾಡಿಕೊಳ್ಳಿ ಅವೊತ್ತೇನಾದರೂ ಸಿದ್ದರಾಮಯ್ಯನವರನ್ನ ಅಒ ಮಾಡಿದ್ದರೆ ಒಂದು ವಾರದಲ್ಲಿ ಸರ್ಕಾರ ಇರ್ತಿರಲಿಲ್ಲ.ಹೆಗಡೆ ಅವರಿಗೆ ನನ್ನ ಮೇಲೆ ಅಷ್ಟು ಕೋಪ.ನಾನು ಅಒ ಆಗುವಾಗ ದೊಡ್ಡ ಹೊಡೆದಾಟವೇ ನಡೆದಿತ್ತು.”


ಎಂ ಸಿ ನಾಣಯ್ಯನವರು ತಮ್ಮ ನೆನಪು ಮಾಸುವ ಮುನ್ನ ಕೃತಿಯಲ್ಲಿ ಹೀಗೆ ಬರೆದಿದ್ದಾರೆ -“ದೇವೇ ಗೌಡರು ಪ್ರಧಾನಿಯಾಗಿ ಆಯ್ಕೆಯಾದಾಗ ರಾಜ್ಯದಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕಾಗಿ ಬಂತು.ಈ ಸಮಯದಲ್ಲಿ ದೇವೇ ಗೌಡರು ಹಿರಿಯ ಮಂತ್ರಿಗಳ ಸಭೆಯನ್ನು ಕರೆದಿದ್ದರು.ಅಂದಿನ ಸಭೆಯಲ್ಲಿ ಸಹಜವಾಗಿ ಜೆ ಎಚ್ ಪಟೇಲರು ಆಯ್ಕೆಯಾಗುವ ನಿರೀಕ್ಷೆ ಇತ್ತಾದರೂ,ಸಿದ್ದರಾಮಯ್ಯ ತಾವು ಮುಖ್ಯಮಂತ್ರಿ ಪದವಿಯ ಸಲುವಾಗಿ ಆಕಾಂಕ್ಷಿ ಅಂದರು.ಅವರಿಗೆ ಬೆಂಬಲವಾಗಿ ಆರ್ ಎಲ್ ಜಾಲಪ್ಪ ನಿಂತರು.ಜನತಾ ಪಕ್ಷ -ಜನತಾ ದಳ ಇತಿಹಾಸದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದವರು ಮುಖ್ಯಮಂತ್ರಿಯಾಗಿಲ್ಲ.ಈ ಕಾರಣದಿಂದ ಈ ಸಲ ತಮಗೆ ಮುಖ್ಯಮಂತ್ರಿ ಸ್ಥಾನ ಲಭ್ಯವಾಗಲೇ ಬೇಕು ಅನ್ನುವ ವಾದವನ್ನು ಸಿದ್ದರಾಮಯ್ಯ ಮಂಡಿಸಿದರು.ಚರ್ಚೆ ಆರಂಭವಾಯಿತು.ಹೆಚ್ಚಿನ ಜನರ ಒಲವು ಪಟೇಲರ ಪರವಾಗಿತ್ತು.ಆದರೆ ಸಿದ್ದರಾಮಯ್ಯ ಪಟ್ಟು ಸಡಿಲಿಸಲಿಲ್ಲ.ಆಗ ಪಟೇಲರು ಈ ರೀತಿ ಹೇಳಿದರು -’ನೋಡಿ ನಾನು ಈ ರೀತಿ ಹೇಳಬಾರದು.ಆದರೂ ಹೇಳುವುದು ಈಗ ನನಗೆ ಅನಿವಾರ್ಯವಾಗಿದೆ.ರಾಜಕಾರಣದಲ್ಲಿ,ಅನುಭವದಲ್ಲಿ ಮತ್ತು ಪಕ್ಷದಲ್ಲಿ ಹಿರಿಯನಾಗಿದ್ದೇನೆ .ನಾನು ಉಪಮುಖ್ಯಮಂತ್ರಿಯಾಗಿದ್ದೆ.ನನಗೆ ಮುಖ್ಯಮಂತ್ರಿ ಪದವಿ ಸಿಗಬೇಕಾದದ್ದು ನ್ಯಾಯ.ಇದಕ್ಕಿಂತ ನಾನು ಹೆಚ್ಚು ಹೇಳ ಬಯಸುವುದಿಲ್ಲ.”ಈ ಸಂಬಂಧದಲ್ಲಿ ಚರ್ಚೆ ಮುಂದುವರಿಯಿತು.ಕೊನೆಗೆ ಬೇಸತ್ತ ಪಟೇಲರು ನಿಮಗೆ ಬೇಕಾದದ್ದು ಮಾಡಿಕೊಳ್ಳಿ.ಇಂತಹ ರಾಜಕಾರಣ ನನಗೆ ಬೇಡ ಎಂದು ತಮ್ಮ ಮನೆಗೆ ಹೋಗಿ ಬಿಟ್ಟರು.ಪಟೇಲರ ಅನುಪಸ್ಥಿತಿಯಲ್ಲೇ ಚರ್ಚೆ ಮುಂದುವರಿಯಿತು.ದೇವೇ ಗೌಡರಿಗೂ ವಸ್ತು ಸ್ಥಿತಿಯ ಅರಿವಿತ್ತು.ಅವರು ಒಂದು ಹಂತದಲ್ಲಿ ತಾವು ಪ್ರಧಾನ ಮಂತ್ರಿ ಪದವಿಯನ್ನು ಸ್ವೀಕಾರ ಮಾಡುವುದಿಲ್ಲ ಅಂತಲೂ ಹೇಳಿದರು.ಅವರ ಆ ಮಾತಿನಲ್ಲಿ ನಾಟಕೀಯತೆ ಇರಲಿಲ್ಲ.ಅದು ಹೃದಯದಿಂದ ಬಂದ ಮಾತಾಗಿತ್ತು.ಕರ್ನಾಟಕದಲ್ಲಿ ಒಮ್ಮತವಿಲ್ಲದಿದ್ದರೆ ತಾವು ದೆಹಲಿಗೆ ಹೋಗಿ ಮಾಡುವುದಾದರೂ ಏನು?ಅನ್ನುವುದು ಅವರ ನಿಲುವಾಗಿತ್ತು.ಸಿದ್ದರಾಮಯ್ಯನವರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಅವರ ತುಂಬಾ ಕಷ್ಟಪಟ್ಟು ಒಪ್ಪಿಸಿದರ.ಜಾಲಪ್ಪ ಕೂಡ ತಮ್ಮ ನಿಲುವು ಸಡಿಲಿಸಿದರು.ಇಷ್ಟೆಲ್ಲಾ ಆದರೂ ಪಟೇಲರು ಬರಲಿಲ್ಲ .ಅವರನ್ನು ಕರೆ ತರುವಂತೆ ದೇವೇ ಗೌಡರು ನನಗೆ ಸೂಚಿಸಿದರು .ನಾನು ಮತ್ತು ಎಂ ಪಿ ಪ್ರಕಾಶ್ ಪಟೇಲರ ಮನೆಗೆ ಹೋದೆವು.ಪಟೇಲರು ತಮ್ಮ ಮನೆಯ ಮಹಡಿಯ ಕೋಣೆಯಲ್ಲಿಇದ್ದರು .ನಮ್ಮನ್ನು ನೋಡಿದ ಅವರು ನೀವು ಏನು ಬೇಕಾದರೂ ಮಾಡಿಕೊಳ್ಳಿ .ಇಂಥ ರಾಜಕಾರಣ ನನಗೆ ಬೇಡ ಅಂದರು.ನಾನು ಅವರನ್ನು ಸಭೆಗೆ ಬರುವಂತೆ ಮನವೊಲಿಸಿದೆ.ಅಂದು ಪಟೇಲರು ಮುಖ್ಯಮಂತ್ರಿಯಾಗುವುದರಲ್ಲಿ ದೇವೇ ಗೌಡರ ವಿಶೇಷ ಪ್ರಯತ್ನ ಇತ್ತು .ಆದರೆ ಮಾರನೇ ದಿನ ಪತ್ರಿಕೆಗಳಲ್ಲಿ ಪಟೇಲ್ ಹೆಗಡೆಯವರ ಆಯ್ಕೆ ಎಂಬ ಅರ್ಥದಲ್ಲಿ ಸುದ್ದಿಗಳು ಪ್ರಕಟವಾಗಿದ್ದವು.ಆದರೆ ಇಡೀ ಘಟನೆಯಲ್ಲಿ ಹೆಗಡೆಯವರ ಪಾತ್ರ ಏನೂ ಇರಲಿಲ್ಲ.ಆದರೆ ಪತ್ರಿಕಾ ವರದಿಗಳು ಮಾತ್ರ ವಸ್ತು ಸ್ಥಿತಿಗೆ ವಿರುದ್ದವಾಗಿz

Girl in a jacket
error: Content is protected !!