ಕಾಂಗ್ರೆಸ್ ಅಧಿಕಾರ-ಮಾನಸಿಕ ಅಸ್ವಸ್ಥರಿಗೂ ಏನಾದರೂ ಸಂಬಂಧ ಇದೆಯೇ?: ಸಿ.ಟಿ.ರವಿ

Share

ಬೆಂಗಳೂರು,ಜು,01-ಕಾಂಗ್ರೆಸ್ ಅಧಿಕಾರ ಮತ್ತು ಮಾನಸಿಕ ಅಸ್ವಸ್ಥರಿಗೂ ಏನಾದರೂ ಸಂಬಂಧ ಇದೆಯೇ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಭೀಭತ್ಸ ಕೃತ್ಯ ನಡೆದು ತಣ್ಣಗಾಗಿತ್ತು. ಆಗ ಕೃತ್ಯ ಎಸಗಿದಾತ ಮಾನಸಿಕ ಅಸ್ವಸ್ಥ ಎಂದಿದ್ದರು. ಅದರ ನಂತರ ಭಟ್ಕಳದಲ್ಲಿ ಪ್ರಕರಣ ಆಗಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು, ಹೊಸನಗರ, ಬೆಳಗಾವಿಯಲ್ಲಿ ಇಂಥ ಘಟನೆಗಳಾಗಿವೆ. ಅಂದರೆ ಹಸುವಿನ ಕೆಚ್ಚಲು ಕತ್ತರಿಸುವ ಇಷ್ಟೊಂದು ಮಾನಸಿಕ ಅಸ್ವಸ್ಥರು ಯಾಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹುಟ್ಟಿಕೊಂಡರು ಎಂದು ಕೇಳಿದರು.
ಹುಣ್ಣಿಮೆ ಬಂದಾಗ ಕೆಲವರಿಗೆ ಹುಚ್ಚು ಕೆದರುತ್ತಂತೆ. ಕಾಂಗ್ರೆಸ್ ಬಂದಾಗ ಈ ಹುಚ್ಚು ಹೆಚ್ಚಾಗುತ್ತದೆಯೇ? ಎಂದ ಅವರು, ಇದು ಪ್ರತ್ಯೇಕ ಘಟನೆ ಅಲ್ಲ; ಗೋವನ್ನು ದೇವರೆಂದು ಪೂಜಿಸುವ ಸಂಸ್ಕøತಿಯನ್ನು ವಿರೋಧಿಸುವ ವಿಕೃತಿ ಇರುವವರು ಇಂಥ ಕೆಲಸ ಮಾಡುತ್ತಿದ್ದಾರೆ. ಸಕಲ ಜೀವಿಗಳಿಗೂ ಲೇಸನ್ನೇ ಬಯಸು ಎಂಬ ಬಸವಣ್ಣನವರ ತತ್ವವನ್ನು ವಿರೋಧಿಸುವ ಮಾನಸಿಕತೆ ಇದರ ಹಿಂದಿದೆ ಎಂದರು.

 

 

Girl in a jacket
error: Content is protected !!