ಆರ್ ಎಸ್ ಎಸ್ ನ ತಾಲಿಬಾನಿಗೆ ಹೋಲಿಸಿದ ಸಿದ್ದುಗೆ ತಿರುಗೇಟು ನೀಡಿದ ಸಿ.ಟಿ ರವಿ

Share

ಬೆಂಗಳೂರು,ಸೆ,29: ಆರ್ ಎಸ್ ಎಸ್ ನವರದ್ಧು ತಾಲಿಬಾನ್ ಸಂಸ್ಕೃತಿ ಎಂದಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಚಿವ ಸಿ.ಟಿ ರವಿ, ‘ಇತ್ತೀಚೆಗೆ ಯಾಕೋ ನಿಮ್ಮ ನಾಲಗೆಯ ಮೇಲೆ ತಾಲಿಬಾನಿ ಪದ ಹೆಚ್ಚು ಬಳಕೆಯಾಗುತ್ತಿದೆ. ನೀವೇನಾದರೂ ಅಲ್ಲಿಗೆ ಹೋಗುವ ಮನಸ್ಸು ಮಾಡಿದ್ದರೆ ಹೇಳಿ ಬಿಡಿ. ನಿಮ್ಮ ಮನೆಗೆ ನಾವು ಬಂದು ಅಲ್ಲಿಯ ಬಿಕ್ಕಟ್ಟು ಸಂಘದ ಸ್ವಾತಂತ್ರ್ಯದ ಬಗ್ಗೆ ಎಳೆ ಎಳೆಯಾಗಿ ವಿವರಿಸುತ್ತೇವೆ. ಏನಂತೀರಿ ಟಿಪ್ಪು ಸುಲ್ತಾನ್ ಆರಾಧಕ ಸಿದ್ದರಾಮಯ್ಯನವರೇ?’ ಎಂದು ಕಿಡಿಕಾರಿದ್ದಾರೆ.

ಕೊನೆಯದಾಗಿ, ನಾನೇನು ಎಂಬುದು ಚಿಕ್ಕಮಗಳೂರಿನ ನನ್ನ ಜನರಿಗೆ, ನನ್ನ ಜೊತೆ ಇರುವ ಕಾರ್ಯಕರ್ತರಿಗೆ ಗೊತ್ತು. ಸ್ನೇಹಿತರೊಟ್ಟಿಗೆ ಸೇರಿ ಕುಡಿದು ತೇಲಾಡುತ್ತಿದ್ದವರು ಯಾರು ಎಂದು ಮೈಸೂರಿನ ನಾಗರೀಕರು ಈಗಲೂ ಮರೆತಿರಲಿಕ್ಕಿಲ್ಲ. ಒಮ್ಮೆ ಕೇಳಿ ನೋಡಿ ಸಿದ್ದರಾಮಯ್ಯನವರೇ.’ಎಂದು ಸಿದ್ಧರಾಮಯ್ಯಗೆ ಸಿಟಿ ರವಿ ಟಾಂಗ್ ನೀಡಿದ್ದಾರೆ.

Girl in a jacket
error: Content is protected !!