ರಷ್ಯಾದ ಮೇಲೆ ಸುಂಕದ ಬೆದರಿಕೆ ಹಾಕಿದ ಡೊನಾಲ್ಡ್ ಟ್ರಂಪ್

Share

ರಷ್ಯಾದ ಮೇಲೆ ಸುಂಕದ ಬೆದರಿಕೆ ಹಾಕಿದ ಡೊನಾಲ್ಡ್ ಟ್ರಂಪ್

by-ಕೆಂಧೂಳಿ

ವಾಷಿಂಗ್ಟನ್,ಮಾ,10- ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಕ್ಕದ ರಾಷ್ಟ್ರಗಳ ಮೇಲೆಸೇಡು ತೀರಿಸಿಕೊಳ್ಳುವ ಹವಣಿಕೆಯಲ್ಲಿ ಇದ್ದಂತೆ ಕಾಣುತ್ತಿದೆ.
ಅದರಲ್ಲೂ ರಷ್ಯದ ಮೇಲೆ ಮತ್ತಷ್ಟು ಕೆಂಗಣ್ಞು ಬೀರಿದ್ದು ಈಗ ಆ ದೇಶದ ಮೇಲೆ ಹೊಸ ನಿರ್ಬಂಧ ಮತ್ತು ಸುಂಕದ ಬೆದರಿಕೆ ಹಾಕಿದ್ದಾರೆ.

“ರಷ್ಯಾ ಇದೀಗ ಯುದ್ಧಭೂಮಿಯಲ್ಲಿ ಉಕ್ರೇನ್ ಅನ್ನು ಸಂಪೂರ್ಣವಾಗಿ ‘ಬಡಿಯುತ್ತಿದೆ’ ಎಂಬ ಅಂಶವನ್ನು ಆಧರಿಸಿ, ಕದನ ವಿರಾಮ ಮತ್ತು ಶಾಂತಿಯ ಅಂತಿಮ ಇತ್ಯರ್ಥ ಒಪ್ಪಂದ ಆಗುವವರೆಗೆ ನಾನು ರಷ್ಯಾದ ಮೇಲೆ ದೊಡ್ಡ ಪ್ರಮಾಣದ ಬ್ಯಾಂಕಿಂಗ್ ನಿರ್ಬಂಧಗಳು, ನಿರ್ಬಂಧಗಳು ಮತ್ತು ಸುಂಕಗಳನ್ನು ಹಾಕಲಾಗುವುದು ಎಂದು ಟ್ರಂಪ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. “ರಷ್ಯಾ ಮತ್ತು ಉಕ್ರೇನ್‌ ಈಗ ತಡಮಾಡದೆ ಮಾತುಕತೆ ನಡೆಸಿ ಎಂದು ಅವರು ಹೇಳಿದ್ದಾರೆ.

ಕೆಲದಿನಗಳ ಹಿಂದೆ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆಗಿನ ವಾಕ್ಸಮರದ ನಂತರ ಟ್ರಂಪ್ ಆಡಳಿತ ಉಕ್ರೇನ್ ಗೆ ಸೇನಾ ನೆರವನ್ನು ಸ್ಥಗಿತಗೊಳಿಸಿತು. ಆಗಿನಿಂದ ಮಿತ್ರರಾಷ್ಟ್ರಗಳು ಹಾಗೂ ದೇಶಿಯ ವಿರೋಧಿಗಳಿಂದ ಟ್ರಂಪ್ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಟ್ರಂಪ್ ರಷ್ಯಾದ ಪರವಾಗಿದ್ದರೆ ಎಂಬ ಆರೋಪವೂ ಕೇಳಿಬಂದಿತ್ತು. ಆದರೆ ಇದೀಗ ರಷ್ಯಾದ ಮೇಲೆ ಹೊಸ ನಿರ್ಬಂಧ ಹಾಗೂ ಸುಂಕದ ಬೆದರಿಕೆ ಹಾಕಿರುವುದು ಕುತೂಹಲ ಮೂಡಿಸಿದೆ.

Girl in a jacket
error: Content is protected !!