ಬೈಡನ್ ಸಲಹೆಗಾರರಾಗಿ ಭಾರತೀಯ ಮೂಲದ ತಂಡನ್ ನೇಮಕ

Share

ವಾಷಿಂಗ್ಟನ್,ಮೇ,೧೫: ಅಮೆರಿಕಾ ಅಧ್ಯಕ್ಷ ಜೋಬೈಡನ್ ಅವರ ಹಿರಿಯ ಸಲಹೆಗಾರರಾಗಿ ಭಾರತೀಯ ಮೂಲದ ಸಂಜಾತೆ ನೀರಾ ತಂಡನ್ ಅವರು ನೇಮಕವಾಗಿದ್ದಾರೆ.
ಎರಡು ತಿಂಗಳ ಹಿಂದೆಯಷ್ಟೆ ರಿಪಬ್ಲಿಕನ್ ಸೆನೆಟರ್‌ಗಳ ತೀವ್ರ ವಿರೋದಿಂಧ ಶ್ವೇತ ಭವನದ ಬಜೆಟ್ ನಿರ್ವಹಣಾ ಕಚೇರಿಯ ನಿರ್ದೇಶಕಿ ಸ್ಥಾನದ ನಾಮನಿರ್ದೇಶನವನ್ನು ತಂಡನ್ ಹಿಂಪಡೆದಿದ್ದರು.
ಅಮೆರಿಕದ ಡಿಜಿಟಲ್ ಸೇವೆಯ ಪರಿಶೀಲನೆ ನಡೆಸುವುದು. ‘ಅಫೋರ್ಡಬಲ್ ಕೇರ್ ಆಕ್ಟ್’ ಅನ್ನು ರದ್ದುಪಡಿಸಬೇಕೆಂದು ಕೋರಿ ರಿಪಬ್ಲಿಕನ್ ಪಕ್ಷದವರಿಂದ ಸಲ್ಲಿಕೆಯಾಗುವ ದಾವೆಗಳ ಕುರಿತಂತೆ ಸುಪ್ರೀಂ ಕೋರ್ಟ್ ನೀಡುವ ತೀರ್ಪಿಗೆ ತಕ್ಕಂತೆ ಯೋಜನೆ ರೂಪಿಸುವ ಎರಡು ಜವಬ್ದಾರಿಯನ್ನು ಅವರಿಗೆ ನೀಡಲಾಗಿದ್ದು ಸೋಮವಾರ ಅವರು ಸ್ವೇತಭವನಕ್ಕೆ ಅಧಿಕೃತವಾಗಿ ಪ್ರವೇಶ ಮಾಡಲಿದ್ದಾರೆ
ಭಾರತೀಯ ಅಮೆರಿನ್ ನೀತಿ ತಜ್ಞೆ ಆಗಿರುವ ತಂಡನ್ ಅವರು ಪ್ರಸ್ತುತ ಪ್ರಗತಿಪರ ಚಿಂತಕರ ಚಾವಡಿಯಾದ ಸೆಂಟರ್ ಫಾರ್ ಅಮೆರಿಕನ್ ಪ್ರೋಗ್ರೆಸ್‌ನ (ಸಿಎಪಿ) ಅಧ್ಯಕ್ಷೆ ಮತ್ತು ಸಿಇಒ ಕೂಡ ಆಗಿದ್ದಾರೆ.
ತಂಡನ್ ಅವರು ಈ ಹಿಂದೆ ಅಮೆರಿಕ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯಲ್ಲಿ ಆರೋಗ್ಯ ಸುಧಾರಣೆಗಳ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಒಬಾಮಾ- ಬೈಡೆನ್ ಅಧ್ಯಕ್ಷೀಯ ಪ್ರಚಾರಕ್ಕೆ ಸಂಬಂಧಿಸಿದ ಆಂತರಿಕ ನೀತಿಯ ನಿರ್ದೇಶಕರಾಗಿದ್ದರು.

Girl in a jacket
error: Content is protected !!