Reported By: H.D. Savita
ಟೋಕಿಯೊ : ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ 7ನೇ ದಿನವೂ ಭಾರತದ ಪದಕಗಳ ಸುರಿಮಳೆ ಮುಂದುವರೆದಿದೆ. ಎತ್ತರ ಜಿಗಿತ ವಿಭಾಗದಲ್ಲಿ ಮರಿಯಪ್ಪನ್ ತಂಗವೇಲು ಮತ್ತು ಶರದ್ ಕುಮಾರ್ ಭಾರತಕ್ಕೆ ಪದಕ ಗೆದ್ದುಕೊಟ್ಟಿದ್ದಾರೆ. ತಂಗವೇಲು ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದರೆ, ಶರದ್ ಕುಮಾರ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 10 ಕ್ಕೆ ಏರಿದೆ. ಹೈ ಜಂಪ್ ಟಿ 63 ಈವೆಂಟ್‌ನಲ್ಲಿ ತಂಗವೇಲು ದ್ವಿತೀಯ ಸ್ಥಾನ ಅಲಂಕರಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ರಿಯೋ ಪ್ಯಾರಾಲಿಂಪಿಕ್ಸ್ ಬಳಿಕ ಇದು ತಂಗವೇಲು ಅವರ ಎರಡನೇ ಪದಕ ಎಂಬುದು ವಿಶೇಷ.
ಕಳೆದ ಬಾರಿಯೂ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತವು ಎತ್ತರ ಜಿಗಿತದಲ್ಲಿ ಎರಡು ಪದಕಗಳನ್ನು ಬಂದಿದ್ದವು. ಆಗ ಮರಿಯಪ್ಪನ್ ತಂಗವೇಲು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಜೊತೆಗೆ ವರುಣ್ ಸಿಂಗ್ ಭಾಟಿ ಕಂಚಿನ ಪದಕ ಗೆದಿದ್ದರು. ಈ ಬಾರಿ ಮರಿಯಪ್ಪನ್ ಬೆಳ್ಳಿ ಪದಕ ಗೆದ್ದರೂ ವರುಣ್ 7ನೇ ಸ್ಥಾನ ಪಡೆದು ಪದಕ ತಪ್ಪಿಸಿಕೊಂಡರು.