ಟೋಕಿಯೊ,ಜು,೨೭: ಇಲ್ಲಿನ ಒಲಿಂಪಿಕ್ಸ್‌ನಲ್ಲಿ ಭಾರತ ಮುನ್ನಡೆಗಳನ್ನು ಸಾಧಿಸುತ್ತಲೇ ಇದೆ ಎ ಗುಂಪಿನ ಹಾಕಿಯಲ್ಲಿ ಸ್ಪೇನ್ ವಿರುದ್ಧ ಭಾರತ ಜಯಗಳಿಸಿದೆ.
ಭಾರತ ೩-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿದೆ. ರೂಪಿಂದರ್ ಪಾಲ್ ಸಿಂಗ್ ಮತ್ತು ಸಿಮ್ರಾಂಜಿತ್ ಸಿಂಗ್ ಅವರ ಅದ್ಭುತ ಪ್ರದರ್ಶನವೇ ಈ ಗೆಲುವಿಗೆ ಕಾರಣವಾಗಿದೆ.
ಮಿಡ್ ಫೀಲ್ಡರ್ ಸಿಮ್ರಾಂಜಿತ್ ೧೩ನೇ ನಿಮಿಷದಲ್ಲಿ ಭಾರತದ ಖಾತೆ ತೆರೆದರು. ಬಳಿಕ ೧೫ನೇ ನಿಮಿಷದಲ್ಲಿ ರೂಪಿಂದರ್ ಪಾಲ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಎರಡನೇ ಗೋಲು ಬಾರಿಸಿದರು. ೫೧ನೇ ನಿಮಿಷದಲ್ಲಿ ಮತ್ತೊಂದು ಗೋಲು ಹೊಡೆಯುವ ಮೂಲಕ ಸುಲಭವಾಗಿ ಗೆಲುವು ದಾಖಲಿಸಿತು.
ಇದಕ್ಕೂ ಮೊದಲು, ನ್ಯೂಜಿಲೆಂಡ್ ವಿರುದ್ಧ ೩-೨ ಗೋಲುಗಳ ಅಂತರದಿಂದ ಭಾರತ ಜಯಗಳಿಸಿತ್ತು. ನಂತರ ಎರಡನೇ ಪಂದ್ಯದಲ್ಲಿ ವಿಶ್ವ ನಂ. ೧ ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ಧ ೧-೭ ಅಂತರದಿಂದ ಸೋಲನುಭವಿಸಿತ್ತು.
ಹಾಕಿ `ಎ’ ಪಂದ್ಯದಲ್ಲಿ ಭಾರತಕ್ಕೆ ಜಯ
Share