ವಿಶ್ವ ಕುಸ್ತಿಯಲ್ಲಿ ಚಿನ್ನದ ಪದಕ ಪಡೆದ‌‌.ಪ್ರಿಯಾ ಮಲಿಕ್

Share

ಹಂಗೇರಿ,ಜು,25: ಟೋಕಿಯೋ ದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನನಲ್ಲಿ,ಭಾರತದ ಕುಸ್ತಿ ಪಟು ಪ್ರಿಯಾ ಮಲಿಕ್ ಅವರು ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನ 73 ಕೆಜಿ ವಿಭಾಗದಲ್ಲಿ ಪ್ರಿಯಾ ಮಲಿಕ್ ಬೆಲಾರಸ್ ನ ಕುಸ್ತಿಪಟುವನ್ನು 5-0 ಅಂತರದಲ್ಲಿ ಸೋಲಿಸುವ ಮೂಲಕ ಈ ಸಾಧನೆ ಮಾಡಿದ್ದು ಪ್ರಿಯಾ ಮಲ್ಲಿಕ್ ಅವರ ಈ ಸಾಧನೆಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.
ಇನ್ನು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮೀರಾ ಬಾಯ್ ಚಾನು ನಿನ್ನೆ ವೆಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಇದಾದ ಮರುದಿನವೇ ಪ್ರಿಯಾ ಮಲಿಕ್ ಅವರು ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಶುಭಾರಂಭ ಮಾಡಿದ ಬಾಕ್ಸರ್ ಮೇರಿ ಕೋಮ್‌

73 ಕೆ.ಜಿ ವಿಭಾಗದ ಕುಸ್ತಿ ಫೈನಲ್‌ನಲ್ಲಿ ಪ್ರಿಯಾ ಮಲಿಕ್ 5-0 ಬೌಟ್ ಅಂಕಗಳ ಅಂತರದಲ್ಲಿ ಕ್ಸಿನಿಯಾ ಪಟಪೋವಿಚ್ ಅವರನ್ನು ಮಣಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ದಿದ್ದಾರೆ. ಹರ್ಯಾಣದ ಜಿಂದ್ ಜಿಲ್ಲೆಯ ಕುಸ್ತಿಪಟುವಾಗಿರುವ ಪ್ರಿಯಾ ಮಲಿಕ್‌ ಚೌಧರಿ ಭಾರತ ಸಿಂಹ ಮೆಮೊರಿಯಲ್‌ ಕ್ರೀಡಾಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆಲ್ಲುವ ಕನಸು ಕಾಣುತ್ತಿದ್ದಾರೆ ಪ್ರಿಯಾ ಮಲಿಕ್‌.

ಭಾರತದ ಭವಿಷ್ಯದ ಕುಸ್ತಿ ತಾರೆ ಪ್ರಿಯಾ ಮಲಿಕ್ ಅವರ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ.

Girl in a jacket
error: Content is protected !!