ವಿಶ್ವ್‌ಟೆಸ್ಟ್ ಚಾಂಪಿಯನ್‌ಶಿಪ್-ಮಳೆಯಿಂದ ರದ್ದು

Share

ಸೌಥ್ಯಾಂಪ್ಟನ್,ಜೂ,೧೯:ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲದಿನದಾಟ ಮಳೆಯಿಂದಾಗಿ ರದ್ದಾಗಿದೆ.
ಎಡಬಿಡದೆ ಮಳೆ ಸುರಿಯುತ್ತಿರುವ ಕಾರಣ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಮೊದಲ ದಿನದಾಟ ರದ್ದಾಗಿದ್ದು, ಬಿಟ್ಟು ಬಿಟ್ಟು ಆಗಮಿಸುತ್ತಿದ್ದ ಮಳೆಯಿಂದಾಗಿ ಪಂದ್ಯವನ್ನು ಆರಂಭಿಸುವ ಯಾವ ಅವಕಾಶಗಳು ಕೂಡ ಆಯೋಜಕರಿಗೆ ದೊರೆಯಲಿಲ್ಲ. ಟಾಸ್ ಅನ್ನು ಕೂಡ ಪದೇ ಪದೇ ಮುಂದೂಡಲಾಗಿತ್ತು. ನಂತರ ಭಾರತೀಯ ಕಾಲಮಾನ ೭:೨೦ರ ವೇಳೆಗೆ ವಾತಾವರಣವನ್ನು ಪರಿಶೀಲಿಸಿದ ಅಂಪೈರ್ ಗಳು ನಂತರ ಮೊದಲ ದಿನದಾಟವನ್ನು ಅಧಿಕೃತವಾಗಿ ಮುಂದೂಡಿದರು.
ನಿಗದಿಯಂತೆ ಭಾರತೀಯ ಕಾಲಮಾನ ಮಧ್ಯಾಹ್ನ ೩ ಗಂಟೆಗೆ ಪಂದ್ಯ ಆರಂಭವಾಗಬೇಕಿತ್ತು. ಆದರೆ ಹವಾಮಾನ ಇದಕ್ಕೆ ಅವಕಾಶವನ್ನು ಮಾಡಿಕೊಡಲೇ ಇಲ್ಲ. ಮೈದಾನ ಸಂಪೂರ್ಣವಾಗಿ ಒದ್ದೆಯಾಗಿದ್ದು ಮಳೆ ನಿಂತರೂ ಪಂದ್ಯವನ್ನು ಮುಂದುವರಿಸಲು ಸಾಧ್ಯವಿರಿಲಿಲ್ಲ ಎಂದು ಪರಿಗಣಿಸಿದ ನಂತರ ಮೊದಲ ದಿನದಾಟವನ್ನು ರದ್ದುಗೊಳಿಸಿದರು.

Girl in a jacket
error: Content is protected !!