Posted by H.D.savitha
ಟೋಕಿಯೋ,ಆ,01: ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಿಭಿಸಿದೆ. ಭಾರತದ ಭರವಸೆಯ ಬಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಕಂಚಿನ ಪದಕ ವಿಜೇತರಾಗಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾದ ಹೀ ಬಿಂಗ್ ಜಿಯವೋ ರನ್ನು ಮಣಿಸಿದ್ರು. ಸಿಂಧು 2 ಗೇಮ್ ನಲ್ಲಿ ಪ್ರಾಬಲ್ಯ ಮೆರೆದು 21-13, 21-15 ರ ಮೂಲಕ ಕಂಚಿನ ಪದಕಕ್ಕೆ ಮುತ್ತಿಟ್ಟರು. ಇದರೊಂದಿಗೆ ಒಲಿಪಿಕ್ಸ್ ನಲ್ಲಿ ಬಾಡ್ಮಿಂಟನ್ ನಲ್ಲಿ ಭಾರತಕ್ಕಾಗಿ 2ಪದಕ ಗೆದ್ದುಕೊಟ್ಟು ದಾಖಲೆಯನ್ನು ಸಿಂಧು ಬರೆದರು.
ಈ ಹಿಂದೆ ರಿಯೋ ಒಲಿಂಪಿಕ್ಸ್ ಕೂಟದಲ್ಲಿ ಪಿವಿ ಸಿಂಧು ಬೆಳ್ಳಿ ಪದಕ ಜಯಿಸಿ ಕೀರ್ತಿ ಪತಾಕೆ ಹಾರಿಸಿದ್ದರು. ಇದೀಗ ಕಂಚಿನ ಪದಕದೊಂದಿಗೆ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ.
ಸದ್ಯ ಟೋಕಿಯೋ ಒಲಂಪಿಕ್ಸ್ ನಲ್ಲಿ ಒಂದು ಬೆಳ್ಳಿ (ಮೀರಾಬಾಯಿ ಚಾನು) ಹಾಗೂ ಒಂದು ಕಂಚಿನ ಪದಕ್ ಪಡೆಯುವ ಮೂಲಕ ಪದಕ ಪಟ್ಟಿಯಲ್ಲಿ ಭಾರತ 59ನೇ ಸ್ಥಾನದಲ್ಲಿದೆ.